ಚಳಿಗಾಲದಲ್ಲಿ ಪ್ರತಿಯೊಬ್ಬರಿಗೂ ಪಾದಗಳು ಒಡೆಯುವ(Crack Heels) ಸಮಸ್ಯೆ ಕಾಣಿಸಿಕೊಳ್ಳುವುದು ಸಹಜ. ಇದಕ್ಕೆ ಹಲವಾರು ಕಾರಣಗಳು ಇರಬಹುದು. ಮುಖ್ಯವಾಗಿ ಪಾದ ಗಳನ್ನು ನಾವು ಸಂಪೂರ್ಣವಾಗಿ ಕಡೆಗಣಿಸುವುದು. ಹೀಗಾಗಿ ಪಾದಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯವಿದೆ.
ಚಳಿಗಾಲದ 'ಒಣ ತ್ವಚೆ' ನಿವಾರಣೆಗೆ ಇಲ್ಲಿದೆ ಉಪಯುಕ್ತ ಮಾಹಿತಿ
ಒಂದು ಟಬ್ ಬಿಸಿ ನೀರು ತೆಗೆದುಕೊಳ್ಳಿ ಮತ್ತು ಇದಕ್ಕೆ ಲಿಂಬೆ ರಸ, ಕಲ್ಲು ಉಪ್ಪು, ಗ್ಲಿಸರಿನ್ ಮತ್ತು ರೋಸ್ ವಾಟರ್ ಹಾಕಿ. ಈ ನೀರಿನಲ್ಲಿ 15-20 ನಿಮಿಷ ಕಾಲ ಕಾಲನ್ನು ಅದ್ದಿಟ್ಟುಕೊಳ್ಳಿ. ಪಾದವನ್ನು ತೊಳೆದುಕೊಂಡು ಒರೆಸಿದ ಬಳಿಕ ಮಾಶ್ಚರೈಸರ್ ಹಚ್ಚಿಕೊಳ್ಳಿ.
ಮಣ್ಣಿನ ಮೇಲೆ ಬರಗಾಲಿನಿಂದ ನಡೆಯುವುದು ಆರೋಗ್ಯಕ್ಕೆ ಉತ್ತಮ, ಯಾವ ಲಾಭ ಸಿಗುತ್ತವೆ ಇಲ್ಲಿ ತಿಳಿಯಿರಿ
ಗ್ಲಿಸರಿನ್, ರೋಸ್ ವಾಟರ್ ಮತ್ತು ಲಿಂಬೆ ರಸ ಹಾಕಿಕೊಂಡು ನೀವು ಕ್ರೀಮ್ ತಯಾರಿಸಿಕೊಳ್ಳಿ. ಈ ಮಿಶ್ರಣವನ್ನು ಒಡೆದಿರುವ ಪಾದಗಳಿಗೆ ಹಚ್ಚಿಕೊಳ್ಳಿ ಮತ್ತು ರಾತ್ರಿಯಿಡೀ ಹಾಗೆಯೇ ಬಿಟ್ಟುಬಿಡಿ.
ಬೆಚ್ಚಗಿನ ನೀರಿನಲ್ಲಿ ಪಾದವನ್ನು ನೆನೆಸಿ, ಅನಂತರ ಮೃದುವಾಗಿ ಮಸಾಜ್ ಮಾಡಿ. ಸತ್ತ ಜೀವಕೋಶಗಳನ್ನು ತೆಗೆದು, ಪಾದಗಳನ್ನು ತೊಳೆದು ಒಣಗಿಸಿಕೊಳ್ಳಿ. ಅನಂತರ ಅಲೋವೆರಾ ಜೆಲ್ ಹಚ್ಚಿ, ಸಾಕ್ಸ್ ಧರಿಸಿ ಮಲಗಿ. ಮುಂಜಾನೆ ಕಾಲನ್ನು ಶುದ್ಧಗೊಳಿಸಿ.
ನಿಮಗೆ ಗೊತ್ತೆ? ಸೌತೆಕಾಯಿಯಲ್ಲಿದೆ ಆರೋಗ್ಯ ಮತ್ತು ಸೌಂದರ್ಯದ ಗುಟ್ಟು..!
ಬಾಳೆಹಣ್ಣು ಒಳ್ಳೆಯ ಮಾಶ್ಚರೈಸರ್ ಆಗಿ ಕೆಲಸ ಮಾಡುವುದು. ಇದು ಚರ್ಮವನ್ನು ತುಂಬಾ ನಯವಾಗಿಸುವುದು. ಒಡೆದಿರುವ ಪಾದಗಳಿಗೆ ಬಾಳೆಹಣ್ಣನ್ನು ಹಚ್ಚಿಕೊಳ್ಳಿ. 15-20 ನಿಮಿಷ ಹಾಗೆಯೇ ಬಿಡಿ. ಬಳಿಕ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.
ಅರ್ಧ ಬಕೆಟ್ ಬಿಸಿ ನೀರು ತೆಗೆದುಕೊಳ್ಳಿ ಮತ್ತು ಇದಕ್ಕೆ ಅರ್ಧ ಕಪ್ ಜೇನುತುಪ್ಪ ಹಾಕಿ. ಈ ನೀರಿನಲ್ಲಿ 15-20 ನಿಮಿಷ ಕಾಲ ಕಾಲನ್ನು ಅದ್ದಿಟ್ಟುಕೊಳ್ಳಿ. ಒಣ ಚರ್ಮವನ್ನು ಕಿತ್ತುಹಾಕಲು ಸðಬ್ ಮಾಡಿ. ಜೇನುತುಪ್ಪವು ನೈಸರ್ಗಿಕವಾಗಿ ಒಡೆದಿರುವ ಚರ್ಮವನ್ನು ಶಮನ ಮಾಡಿ, ನಯಗೊಳಿಸುವುದು.
ಕಣ್ಣಿಗೆ ಕಾಣುವ ಈ ಚಿಕ್ಕ 'ನೊಣ' ಎಷ್ಟು ಡೇಂಜರ್ ಗೊತ್ತಾ..?
ಅರ್ಧ ಬಕೆಟ್ ಬಿಸಿ ನೀರಿಗೆ ಅಡುಗೆ ಸೋಡಾ ಹಾಕಿ. ನೀರಿನಲ್ಲಿ ಇದು ಸರಿಯಾಗಿ ಕರಗಲಿ. ಇದರ ಬಳಿಕ ಕಾಲುಗಳನ್ನು ಇದರಲ್ಲಿ ಅದ್ದಿಟ್ಟುಕೊಳ್ಳಿ ಮತ್ತು 10-15 ನಿಮಿಷಗಳ ಕಾಲ ಹಾಗೆ ಬಿಡಿ. ನೀರಿನಲ್ಲಿ ಅದ್ದಿಟ್ಟ ಬಳಿಕ ತುಂಬಾ ನಿಧಾನವಾಗಿ ಫ್ಯೂಮಿಕ್ ಕಲ್ಲಿನಿಂದ ಸ್ಕ್ರಬ್ ಮಾಡಿಕೊಳ್ಳಿ.