ಮಲಾವಿಯಿಂದ ಜಗತ್ತಿನ ಮೊದಲ ಮಲೇರಿಯಾ ಲಸಿಕೆಗೆ ಚಾಲನೆ

ಪ್ರಪಂಚದ ಮೊದಲ ಮಲೇರಿಯಾ ಲಸಿಕೆಯನ್ನು ಪ್ರಾಯೋಗಿಕ ಯೋಜನೆ ಮೂಲಕ ಬಿಡುಗಡೆಗೊಳಿಸುತ್ತಿರುವ ಮಲಾವಿ ನಿರ್ಧಾರವನ್ನು ವಿಶ್ವ ಆರೋಗ್ಯ ಸಂಸ್ಥೆ  ಸ್ವಾಗತಿಸಿದೆ.

Updated: Apr 24, 2019 , 08:56 PM IST
ಮಲಾವಿಯಿಂದ ಜಗತ್ತಿನ ಮೊದಲ ಮಲೇರಿಯಾ ಲಸಿಕೆಗೆ ಚಾಲನೆ
Photo Courtesy: Reuters

ನವದೆಹಲಿ: ಪ್ರಪಂಚದ ಮೊದಲ ಮಲೇರಿಯಾ ಲಸಿಕೆಯನ್ನು ಪ್ರಾಯೋಗಿಕ ಯೋಜನೆ ಮೂಲಕ ಬಿಡುಗಡೆಗೊಳಿಸುತ್ತಿರುವ ಮಲಾವಿ ನಿರ್ಧಾರವನ್ನು ವಿಶ್ವ ಆರೋಗ್ಯ ಸಂಸ್ಥೆ  ಸ್ವಾಗತಿಸಿದೆ.

ಆರ್ಟಿಎಸ್, ಎಸ್ ಎಂದು ಕರೆಯಲ್ಪಡುವ ಈ ಮಲೇರಿಯಾ ಲಸಿಕೆಯನ್ನು 2 ವರ್ಷ ವಯಸ್ಸಿನ ಮಕ್ಕಳಿಗೆ ಲಭ್ಯವಾಗುವಂತೆ ಮಾಡಲಾಗುವುದು ಎಂದು ಮಲಾವಿ ತನ್ನ ಪ್ರಾಯೋಗಿಕ ಯೋಜನೆಯಲ್ಲಿ ತಿಳಿಸಿದೆ. ಈ ಯೋಜನೆಯನ್ನು ಮುಂಬರುವ ದಿನಗಳಲ್ಲಿ ಘಾನಾ ಮತ್ತು ಕೀನ್ಯಾದಲ್ಲಿ ಕೂಡ ಪರಿಚಯಿಸಲಾಗುವುದು ಎಂದು ವಿಶ್ವ ಆರೋಗ್ಯ ಸಂಸ್ಥೆ  ಹೇಳಿದೆ.

ಮಲೇರಿಯಾ ಕಾಯಿಲೆ ಇಂದಿಗೂ ಕೂಡ ಮಾರಕ ಖಾಯಿಲೆಯಾಗಿದ್ದು, ಪ್ರತಿ ಎರಡು ನಿಮಿಷಕ್ಕೆ ಒಂದು ಮಗು ಈ ಕಾಯಿಲೆಯಿಂದ ಸಾವನ್ನಪ್ಪುತ್ತದೆ. ಪ್ರತಿ ವರ್ಷ ಆಫ್ರಿಕಾವೊಂದರಲ್ಲೇ 250,000 ಮಕ್ಕಳು ಮಲೇರಿಯಾ ಕಾಯಿಲೆಗೆ ಬಲಿಯಾಗುತ್ತಾರೆ. ಇನ್ನು ವಿಶ್ವದಲ್ಲಿ 435,000 ಜನರು ಸಾವನ್ನಪ್ಪುತ್ತಾರೆ ಎನ್ನಲಾಗಿದೆ.ವಿಶ್ವ ಆರೋಗ್ಯ ಸಂಸ್ಥೆ ಹೇಳುವಂತೆ 5 ವರ್ಷದೊಳಗಿನ ಮಕ್ಕಳು ಈ ಖಾಯಿಲೆಯಿಂದಾಗಿ ತಮ್ಮ ಜೀವನವನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು ಎಂದು ಹೇಳಿದೆ.