CAA ಹಾಗೂ NRC ಕುರಿತ ವದಂತಿಗಳಿಗೆ ಮೋದಿ ತಿರುಗೇಟು

ರಾಮಲೀಲಾ ಮೈದಾನದಿಂದ ಜನರನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, NRC ಹಾಗೂ CAA ಕುರಿತು ಹಬ್ಬಿಸಲಾಗಿರುವ ವದಂತಿಗಳನ್ನು ಅಲ್ಲಗಳೆದಿದ್ದು, ಇವುಗಳನ್ನು ವಿರೋಧಿಸುತ್ತಿರುವ ಪ್ರತಿಪಕ್ಷಗಳ ಮೇಲೂ ಕೂಡ ವಾಗ್ದಾಳಿ ನಡೆಸಿದ್ದಾರೆ. 

Last Updated : Dec 22, 2019, 05:30 PM IST
CAA ಹಾಗೂ NRC ಕುರಿತ ವದಂತಿಗಳಿಗೆ ಮೋದಿ ತಿರುಗೇಟು title=

ನವದೆಹಲಿ: ರಾಮಲೀಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಬಿಜೆಪಿಯ ಧನ್ಯವಾದ ಸಮಾವೇಶವನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಪೌರತ್ವ ತಿದ್ದುಪಡಿ ಕಾಯ್ದೆ(CAA) ಹಾಗೂ NRCಗೆ ಸಂಬಂಧಿಸಿದಂತೆ ಕೆಲ ಮಹತ್ವದ ಹೇಳಿಕೆಗಳನ್ನು ನೀಡಿದ್ದಾರೆ. NRC ಹಾಗೂ CAA ಕುರಿತು ಹರಡಿಸಲಾಗಿರುವ ವದಂತಿಗಳನ್ನು ಅಲ್ಲಗಳೆದಿರುವ ಅವರು, ಈ ಕಾಯ್ದೆಗಳನ್ನು ಗುರಿಯಾಗಿಸುತ್ತಿರುವ ಪ್ರತಿಪಕ್ಷಗಳ ಮೇಲೂ ಕೂಡ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಇಲ್ಲಿವೆ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಹತ್ತು ಮಹತ್ವದ ಹೇಳಿಕೆಗಳು

1.ಪೌರತ್ವ ತಿದ್ದುಪಡಿ ಕಾಯ್ದೆ ಭಾರತದ ಯಾವುದೇ ನಾಗರಿಕರಾಗಿರಲಿ, ಹಿಂದೂಗಳಾಗಲಿ ಅಥವಾ ಮುಸ್ಲಿಮರೆ ಆಗಿರಲಿ. ಅವರಿಗೆ ಇದು ಅನ್ವಯಿಸುವುದಿಲ್ಲ ಮತ್ತು ಇದನ್ನು ಸಂಸತ್ತಿನಲ್ಲಿಯೂ ಕೂಡ ಹೇಳಲಾಗಿದೆ. ಈ ಕಾನೂನು ಈ ದೇಶದಲ್ಲಿ ವಾಸವಾಗಿರುವ 130 ಕೋಟಿ ಜನರಿಗೆ ಅನ್ವಯಿಸುವುದಿಲ್ಲ.

2.ಕಾಂಗ್ರೆಸ್ ಹಾಗೂ ಅದರ ಕೆಲ ಮಿತ್ರಪಕ್ಷಗಳು, ಪಟ್ಟಣದಲ್ಲಿ ವಾಸಿಸುವ ಕೆಲ ಓದು-ಬರಹ ಕಲಿತ ನಕ್ಷಲರು-ಅರ್ಬನ್ ನಕ್ಸಲರು,  ದೇಶದ ಎಲ್ಲ ಮುಸ್ಲಿಂ ಸಮುದಾಯದವರನ್ನು ಡಿಟೆನ್ಶನ್ ಸೆಂಟರ್ ಗೆ ಕಳುಹಿಸಲಾಗುವುದು ಎಂಬ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ಒಮ್ಮೆಯಾದರೂ ಈ ಕಾಯ್ದೆ ಏನು ಎಂಬುದನ್ನು ಓದಿ ನೋಡಿ..

3. ಈಗಲೂ ಒಂದು ವೇಳೆ ಯಾರಾದರೂ ಭ್ರಮೆಯಲ್ಲಿದ್ದರೆ ನಾನು ಅವರಿಗೆ ಹೇಳಬಯಸುವೆ.. ಕಾಂಗ್ರೆಸ್ ಹಾಗೂ ಅರ್ಬನ್ ನಕ್ಸಲೀಯರು ಹಬ್ಬಿಸುತ್ತಿರುವ ವದಂತಿಗಳು ಸುಳ್ಳಿನ ಕಂತೆಯಾಗಿವೆ. ಹಿಂದೂಸ್ತಾನದ ಮಣ್ಣಿನಲ್ಲಿ ಹುಟ್ಟಿ ಬೆಳೆದ ಮುಸ್ಲಿಮರಿಗೆ ಹಾಗೂ ಈ ಪೌರತ್ವ ಕಾಯ್ದೆ ಮತ್ತು NRCಗೆ ಯಾವುದೇ ರೀತಿಯ ಸಂಬಂಧವಿಲ್ಲ ಎಂದಿದ್ದಾರೆ.

4. ವರ್ಷಾನು ವರ್ಷಗಳಿಂದ ಭಾರತದಲ್ಲಿ ಶರಣಾರ್ಥಿಗಳಾಗಿ ವಾಸಿಸುವ ಜನರಿಗೆ ಮಾತ್ರ ಇದು ಅನ್ವಯಿಸಲಿದ್ದು, ಹೊಸ ಶರಣಾರ್ಥಿಗಳಿಗೆ ಇದರಿಂದ ಯಾವುದೇ ಲಾಭವಿಲ್ಲ. ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶಗಳಲ್ಲಿ ಧಾರ್ಮಿಕ ಕಿರುಕುಳಕ್ಕೆ ಒಳಗಾಗಿ ಭಾರತದಲ್ಲಿ ಶರಣ ಪಡೆದ ಜನರಿಗೆ ಸುರಕ್ಷತೆ ನೀಡುವುದು CAA ಉದ್ದೇಶವಾಗಿದೆ.

5. ಪಾಕಿಸ್ತಾನದಲ್ಲಿ ನೆಲೆಸಿರುವ ಹಿಂದೂ ಹಾಗೂ ಸಿಖ್ ಬಾಂಧವರಿಗೆ ಒಂದು ವೇಳೆ ಭಾರತಕ್ಕೆ ಬರುವ ಇಚ್ಛೆ ಇದ್ದರೆ ಅವರನ್ನು ಭಾರತ ಸ್ವಾಗತಿಸಲಿದೆ ಎಂದು ಮಹಾತ್ಮಾ ಗಾಂಧಿ ಹೇಳಿದ್ದರು. ಈ ರಿಯಾಯಿತಿ ಅಂದಿನ ಭಾರತ ಸರ್ಕಾರ ನೀಡಿದ ಮಾತನ್ನು ಉಳಿಸಿಕೊಡುವುದಾಗಿದೆ.

6. ಪಾಕಿಸ್ತಾನದಿಂದ ವಲಸೆ ಬಂದ ಬಹುತೇಕ ಶರಣಾರ್ಥಿಗಳು ದಲಿತರಾಗಿದ್ದಾರೆ. ಇಂದಿಗೂ ಕೂಡ ಪಾಕಿಸ್ತಾನದಲ್ಲಿ ದಲಿತರ ಮೇಲೆ ಅತ್ಯಾಚಾರ ನಡೆಸಲಾಗುತ್ತಿದೆ ಮತ್ತು ಅವರ ಹೆಣ್ಣುಮಕ್ಕಳ ಮೇಲೆ ಶೋಷಣೆ ನಡೆಸಲಾಗಿತ್ತದೆ. ಬಲವಂತವಾಗಿ ಅವರ ಧರ್ಮ ಪರಿವರ್ತಿಸಿ, ಅವರ ವಿವಾಹ ನೆರವೇರಿಸಲಾಗುತ್ತಿದೆ.

7. ಇಷ್ಟು ವರ್ಷಗಳ ಕಾಲ ನೀವು ಮೌನವಹಿಸಿದ್ದೇಕೆ? ನಿಮಗೆ ಅಲ್ಲಿರುವ ದಲಿತರ ನೋವು ಅರ್ಥವಾಗುತ್ತಿಲ್ಲವೇ ಎಂದು ನಾನು ದಲಿತರನ್ನು ಮುಂದಿಟ್ಟುಕೊಂಡು ರಾಜಕೀಯ ನಡೆಸುವ ಈ ದೇಶದ ದಲಿತರನ್ನು ಪ್ರಶ್ನಿಸಬಯಸುತ್ತೇನೆ. ಇಂದು ಅಂತಹ ದಲಿತರ ಜೀವನದ ಅತಿ ದೊಡ್ಡ ಸಮಸ್ಯೆಯನ್ನು ಪರಿಹರಿಸಲು ಮೋದಿ ಸರ್ಕಾರ ಹೆಜ್ಜೆ ಇಟ್ಟಿದೆ ನಿಮ್ಮ ಸಮಸ್ಯೆ ಏನು?

8. ಓರ್ವ ನಿರಾಶ್ರಿತ ಹೇಗೆ ತನ್ನ ಜೀವನ ನಿರ್ವಹಿಸುತ್ತಾನೆ. ಯಾವುದೇ ತಪ್ಪು ಮಾಡದೆ ಮನೆಯಿಂದ ಹೊರಹಾಕಲ್ಪಟ್ಟ ಅವನನೋವು ಏನು? ದೆಹಲಿ ಜನರು ಇದನ್ನು ಹೆಚ್ಚು ತಿಳಿಯಲು ಸಾಧ್ಯ. ಇಲ್ಲಿನ ಪ್ರತಿ ಮೂಲೆ ದೇಶ ವಿಭಜನೆಯ ಬಳಿಕ ನಿರಾಶ್ರಿತಗೊಂಡ ಹಾಗೂ ಅಲ್ಪಸಂಖ್ಯಾತರ ಪಟ್ಟಿಗೆ ಸೇರಿದ ಭಾರತೀಯರ ನೋವು ಸಾರುತ್ತದೆ.

9. CAA ಕಾಯ್ದೆ ವಿರೋಧಿಸುವವರ ಕೈಯಲ್ಲಿ ಇಟ್ಟಿಗೆ ಕಲ್ಲುಗಳನ್ನು ನೋಡಿದರೆ ನನಗೆ ನೋವಾಗುತ್ತದೆ. ಆದರೆ, ಅದೇ ಗುಂಪಿನ ಕೆಲವರ ಕೈಯಲ್ಲಿ ತ್ರಿವರ್ಣ ಕಂಡು ನನಗೆ ಸಮಾಧಾನವಾಗುತ್ತದೆ.

10. ನಿರಾಶ್ರಿತರು ತಮ್ಮ ಅಸ್ತಿತ್ವವನ್ನು ಎಂದಿಗೂ ಮರೆಮಾಚುವುದಿಲ್ಲ ಆದರೆ, ಇನ್ನೊಂದೆಡೆ ಇದಕ್ಕೆ ವಿಪರೀತ ಎಂಬಂತೆ ಒಳನುಸುಳುಕೋರರು ತಮ್ಮ ಅಸ್ತಿತ್ವವನ್ನು ಎಂದಿಗೂ ಬಹಿರಂಗಗೊಳಿಸುವುದಿಲ್ಲ.

Trending News