ನವದೆಹಲಿ: ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಸುಮಾರು 10 ಲಕ್ಷ ಕ್ಯಾಲೆಂಡರ್‌ಗಳನ್ನು ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ಪ್ರತಿ ಗ್ರಾಮ ಮತ್ತು ನಗರಗಳಲ್ಲಿ ವಿತರಿಸಲಿದೆ.
12 ಪುಟಗಳ ಟೇಬಲ್-ಟಾಪ್ ಕ್ಯಾಲೆಂಡರ್‌ನಲ್ಲಿ ಪ್ರತಿ ಪುಟದಲ್ಲಿ ಪ್ರಿಯಾಂಕಾ ಗಾಂಧಿ (Priyanka Gandhi Vadra) ಯವರ ಛಾಯಾಚಿತ್ರವಿದ್ದು, ಅವರು ಸಕ್ರಿಯ ರಾಜಕಾರಣಕ್ಕೆ ಧುಮುಕಿದಾಗಿನಿಂದ ಅವರ ಪ್ರಯಾಣವನ್ನು ಮತ್ತು ಅವರ ವಿವಿಧ ಮನಸ್ಥಿತಿ ಮತ್ತು ಸಹಾನುಭೂತಿಯ ಚಿತ್ರಣವನ್ನು ಈ ಕಾಲೆಂಡರ್ ಪ್ರತಿಬಿಂಬಿಸುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಉತ್ತರ ಪ್ರದೇಶದ ಸೋನ್‌ಭದ್ರದಲ್ಲಿ 3,350 ಟನ್ ಸಂಗ್ರಹದ ಚಿನ್ನದ ನಿಕ್ಷೇಪ ಪತ್ತೆ
UP polls: Cong calendar chronicling Priyanka Gandhi's journey unveiled, 10 lakh copies to be distributed
Read @ANI Story | https://t.co/vCJ1ob1SV7 pic.twitter.com/1qKZnG7Kke
— ANI Digital (@ani_digital) January 21, 2021
ಛಾಯಾಚಿತ್ರಗಳಲ್ಲಿ, ಪ್ರಿಯಾಂಕಾ ಸೋನ್‌ಭದ್ರದಲ್ಲಿ ಆದಿವಾಸಿ ಮಹಿಳೆಯರೊಂದಿಗೆ ಸಂವಹನ, ಅಮೆಥಿಯಲ್ಲಿ ಮಹಿಳೆಯರ ಭೇಟಿ, ಉಜ್ಜಯಿನಿಯ ಮಹಾಕಾಲ್ ದೇವಸ್ಥಾನದಲ್ಲಿ ಪ್ರಾರ್ಥನೆ, ಲಖನೌದಲ್ಲಿನ ಗಾಂಧಿ ಜಯಂತಿ ಸಮಾರಂಭದಲ್ಲಿ ಭಾಗಿ, ವಾರಣಾಸಿಯಲ್ಲಿ ರವಿದಾಸ್ ಜಯಂತಿಯಲ್ಲಿ ಭಾಗಿ, ಹತ್ರಾಸ್ ಸಂತ್ರಸ್ತೆಯ ಕುಟುಂಬದ ಭೇಟಿ, ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುವುದು, ಅಜಮ್‌ಗಡ ದಲ್ಲಿ ಮಕ್ಕಳನ ಭೇಟಿ ಮತ್ತು ಹರಿಯಾಣದಲ್ಲಿ ರೋಡ್ ಶೋನಲ್ಲಿ ಭಾಗವಹಿಸುವುದು ಇವೆಲ್ಲವೂ ಇದರಲ್ಲಿ ಸೇರಿವೆ.
ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಸೆಕ್ಷನ್ 144 ಜಾರಿ, 15 ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆ ಸ್ಥಗಿತ
ಪಕ್ಷದ ಮೂಲಗಳ ಪ್ರಕಾರ ಉತ್ತರ ಪ್ರದೇಶ (Uttar Pradesh) ದ ವಿವಿಧ ಭಾಗಗಳಲ್ಲಿ ಕ್ಯಾಲೆಂಡರ್ ಕಳುಹಿಸಲಾಗುವುದು ಮತ್ತು ಪ್ರಿಯಾಂಕಾ ಅವರ ನೇತೃತ್ವದಲ್ಲಿ 2022 ರಲ್ಲಿ ನಡೆಯಲಿರುವ ಮುಂದಿನ ವಿಧಾನಸಭಾ ಚುನಾವಣೆಗೆ ಮುನ್ನ ಪಕ್ಷವನ್ನು ಉತ್ತೇಜಿಸಲು ಈ ಕಾರ್ಯಕ್ಕೆ ಮುಂದಾಗಿದೆ ಎನ್ನಲಾಗಿದೆ.ಮೂಲಗಳ ಪ್ರಕಾರ ಮುಂಬರುವ ಉತ್ತರ ಪ್ರದೇಶದ ಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸುವ ನಿಟ್ಟಿನಲ್ಲಿ ಈ ಪ್ರಯತ್ನ ಮಾಡಲಾಗುತ್ತಿದೆ ಎನ್ನಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.