100 ಪರ್ಸೆಂಟ್ ಇವಿಎಂಗಳನ್ನು ಹ್ಯಾಕ್ ಮಾಡುವ ಸಾಧ್ಯತೆ ಇದೆ- ಚಂದ್ರಬಾಬು ನಾಯ್ಡು

ಮುಂಬರುವ ಚುನಾವಣೆಯಲ್ಲಿ ನೂರಕ್ಕೆ ನೂರಷ್ಟು ಇವಿಎಮ್ಗಳನ್ನು ಹ್ಯಾಕ್ ಮಾಡುವ ಸಾಧ್ಯತೆ ಇದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅಭಿಪ್ರಾಯಪಟ್ಟಿದ್ದಾರೆ.

Last Updated : Jan 26, 2019, 08:16 PM IST
100 ಪರ್ಸೆಂಟ್ ಇವಿಎಂಗಳನ್ನು ಹ್ಯಾಕ್ ಮಾಡುವ ಸಾಧ್ಯತೆ ಇದೆ- ಚಂದ್ರಬಾಬು ನಾಯ್ಡು title=

ನವದೆಹಲಿ: ಮುಂಬರುವ ಚುನಾವಣೆಯಲ್ಲಿ ನೂರಕ್ಕೆ ನೂರಷ್ಟು ಇವಿಎಮ್ಗಳನ್ನು ಹ್ಯಾಕ್ ಮಾಡುವ ಸಾಧ್ಯತೆ ಇದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅಭಿಪ್ರಾಯಪಟ್ಟಿದ್ದಾರೆ.

ಟಿಡಿಪಿ ಸಂಸದರನ್ನು ಉದ್ದೇಶಿಸಿ ಮಾತನಾಡಿದ ನಾಯ್ಡು ಪ್ರಜಾಪ್ರಭುತ್ವವನ್ನು ಹ್ಯಾಕರ್ಸ್ ಗಳಿಗೆ ತ್ಯಾಗ ಮಾಡಬಾರದು ಎಂದರು. ತಂತ್ರಜ್ಞಾನವನ್ನು ದುರ್ಭಳಕೆ ಮಾಡುವುದು ಅತಿ ಸುಲಭ, ಅದರಲ್ಲಿ ಯಾರು ಸಾಫ್ಟ್ವೇರ್ ಪ್ರೋಗ್ರಾಮ್ ನ್ನು ತಯಾರಿಸಿರುತ್ತಾರೋ ಅಂತವರಿಗೆ ಇದು ಸರಳ ಎಂದರು.

ಚುನಾವಣಾ ಆಯೋಗ ಒಂದು ರೀತಿ ರೆಫರಿ ಇದ್ದ ಹಾಗೆ, ಆದ್ದರಿಂದ ಯಾವ ವ್ಯವ್ಯಸ್ಥೆ ಮೇಲೆ ನಂಬಿಕೆ ಇರುವುದಿಲ್ಲವೋ ಅದನ್ನು ಒತ್ತಾಯದ ಮೂಲಕ ಹೇರಬಾರದು ಎಂದರು. ರಾಜಕೀಯ ಪಕ್ಷಗಳು ಜನರ ಬೇಡಿಕೆಯನ್ನು ಮಾತ್ರ ಎತ್ತುತ್ತಿವೆ.ಬಹುತೇಕ ಪಕ್ಷಗಳು ಇವಿಎಮ್ ಗಳನ್ನು ವಿರೋಧಿಸಿವೆ ಎಂದು ನಾಯ್ಡು ತಿಳಿಸಿದರು. 

ಇದೇ ವೇಳೆ ಸಂಸದರಿಗೆ ಪಾರ್ಲಿಮೆಂಟಿನಲ್ಲಿ ಈ ವಿಚಾರವಾಗಿ ಪ್ರಶ್ನೆ ಎತ್ತಬೇಕೆಂದು ಅವರು ಹೇಳಿದರು.ಅಲ್ಲದೆ ಕೇಂದ್ರ ಸರ್ಕಾರವು ಪೂರ್ಣವಧಿ ಬಜೆಟ್ ಮಂಡನೆಯನ್ನು ಪ್ರಶ್ನಿಸಿದ ನಾಯಡು " ಸರ್ಕಾರಕ್ಕೆ ಇನ್ನು ಎರಡು ತಿಂಗಳುಗಳ ಕಾಲ ಬಾಕಿ ಇದೆ,ಆದರೆ ಉಳಿದ 10 ತಿಂಗಳಿಗೂ ಕೂಡ ಬಜೆಟ್ ಮಂಡನೆ ಮಾಡುವುದು ಪ್ರಜಾಪ್ರಭುತ್ವದಲ್ಲಿ ಸರಿಯಾದ ನಡೆಯಲ್ಲ ಎಂದು ಅವರು ಟೀಕಿಸಿದರು. 

Trending News