ನವದೆಹಲಿ: ವಿಶ್ವದ 20 ಅತಿ ಹೆಚ್ಚು ಮಾಲಿನ್ಯಯುಕ್ತ ನಗರಗಳ ಪಟ್ಟಿಯಲ್ಲಿ ಭಾರತದ 15 ನಗರಗಳಿವೆ ಎಂಬ ಮಾಹಿತಿಯನ್ನು ಪರಿಸರ ಎನ್ಜಿಒ ಗ್ರೀನ್ಪೀಸ್ ನಡೆಸಿದ ಇತ್ತೀಚಿನ ಅಧ್ಯಯನ ಬಹಿರಂಗಪಡಿಸಿದೆ.
ವಿಶ್ವದಲ್ಲೇ ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ರಾಷ್ಟ್ರೀಯ ರಾಜಧಾನಿ ದೆಹಲಿಯ ಹೆಸರು ಶಾಮೀಲಾಗಿದ್ದು, ದೆಹಲಿಯ ನೆರೆಯ ಪ್ರದೇಶಗಳಾದ ಗುರುಗ್ರಾಮ್ ಮತ್ತು ಘಜಿಯಬಾದ್ ಈ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದರೆ, 2018 ರಲ್ಲಿ ದೆಹಲಿ ಹನ್ನೊಂದನೇ ಸ್ಥಾನವನ್ನು ಪಡೆದಿದೆ.
ವಿಶ್ವದ ಅತ್ಯಂತ ಕಲುಷಿತ ನಗರಗಳ ಪಟ್ಟಿ:
Rank | City | 2018 AVG ( PM2.5) |
---|---|---|
1 | ಗುರುಗ್ರಾಮ್, ಭಾರತ | 135.8 |
2 | ಘಾಜಿಯಾಬಾದ್, ಭಾರತ | 135.2 |
3 | ಫೈಸಲಾಬಾದ್, ಪಾಕಿಸ್ತಾನ | 222.1 |
4 | ಫಾರಿದಾಬಾದ್, ಭಾರತ | 129.1 |
5 | ಭಿವಾಡಿ, ಭಾರತ | 125.4 |
6 | ನೋಯ್ಡಾ, ಭಾರತ | 123.6 |
7 | ಪಾಟ್ನಾ, ಭಾರತ | 119.7 |
8 | ಹೊಟಾನ್, ಚೀನಾ | 116 |
9 | ಲಕ್ನೋ, ಭಾರತ | 115.7 |
10 | ಲಾಹೋರ್, ಪಾಕಿಸ್ತಾನ | 114.9 |
11 | ದೆಹಲಿ, ಭಾರತ | 113.5 |
12 | ಜೋಧ್ಪುರ್, ಭಾರತ | 113.4 |
13 | ಮುಜಫಾರ್ಪುರ್, ಭಾರತ | 110.3 |
14 | ವಾರಣಾಸಿ, ಭಾರತ | 105.3 |
15 | ಮೊರಾದಾಬಾದ್, ಭಾರತ | 104.9 |
16 | ಆಗ್ರಾ, ಭಾರತ | 104.8 |
17 | ಢಾಕಾ, ಬಾಂಗ್ಲಾದೇಶ | 97.1 |
18 | ಗಯಾ, ಭಾರತ | 96.6 |
19 | ಕಶ್ಗರ್, ಚೀನಾ | 95.7 |
20 | ಜಿಂದ್, ಭಾರತ | 91.6 |
ವಿಶ್ವದಲ್ಲೇ ಅತಿ ಹೆಚ್ಚು ಕಲುಷಿತ ನಗರಗಳ ಪಟ್ಟಿಯಲ್ಲಿ ಉಳಿದ ಐದು ನಗರಗಳು ಚೀನಾ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಿಗೆ ಸೇರಿವೆ.
ಒಂದು ದಶಕದವರೆಗೆ ಮಾಲಿನ್ಯದಿಂದ ಹೋರಾಡುತ್ತಿರುವ ಚೀನಾವು, ವಾಯುಮಾಲಿನ್ಯವನ್ನು ನಿಯಂತ್ರಿಸಲು ಹಲವು ಕ್ರಮಗಳನ್ನು ಕೈಗೊಂಡಿದ್ದು, ವಾಯುಮಾಲಿನ್ಯದ ವಿರುದ್ಧ ಚೀನಾ ಸರ್ಕಾರಿ ಮಟ್ಟದಲ್ಲಿ ತುಂಬಾ ಗಂಭೀರವಾದ ಕ್ರಮಗಳನ್ನು ಕೈಗೊಳ್ಳುತ್ತಿದೆ. 2017 ರಿಂದ 2018 ರವರೆಗೆ 12% ನಷ್ಟು ಪ್ರಮಾಣದಲ್ಲಿ ಸರಾಸರಿ ಸಾಂದ್ರತೆ ಕುಸಿತವನ್ನು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಬೀಜಿಂಗ್ ವಿಶ್ವದಲ್ಲೇ ಅತ್ಯಂತ ಕಲುಷಿತ ನಗರದ ಪಟ್ಟಿಯಲ್ಲಿ 122ನೇ ಸ್ಥಾನದಲ್ಲಿದೆ.
"ದಕ್ಷಿಣ ಏಷ್ಯಾಕ್ಕೆ ಸೇರಿದ ನಗರಗಳಲ್ಲಿ, ಮಾಧ್ಯಮ ಪ್ರಸಾರಗಳಲ್ಲಿ ಪ್ರಪಂಚದ 'ಮಾಲಿನ್ಯ ರಾಜಧಾನಿ'ಗಳಲ್ಲಿ ದೆಹಲಿಯು ಒಂದೆಂದು ಪರಿಗಣಿಸಿದ್ದರೂ, ಭಾರತೀಯ ರಾಜಧಾನಿ' ಕೇವಲ 'ವಾರ್ಷಿಕ PM2.5 ಮಟ್ಟದೊಂದಿಗೆ 10 ನೇ ಸ್ಥಾನದಲ್ಲಿದೆ. ಉತ್ತರ ಭಾರತ ಮತ್ತು ಪಾಕಿಸ್ತಾನದ ಇತರ ನಗರಗಳು ವಾರ್ಷಿಕ PM2.5 ಮಟ್ಟವನ್ನು ಹೊಂದಿವೆ. ದೆಹಲಿಗೆ ಸಮೀಪವಿರುವ ಗುರುಗ್ರಾಮ್ 2018 ರ ಅವಧಿಯಲ್ಲಿ ಜಾಗತಿಕ ನಗರಗಳಲ್ಲಿ ಅತ್ಯಧಿಕ ವಾರ್ಷಿಕ ಮಾಲಿನ್ಯಯುತ ನಗರ" ಎಂದು ವರದಿ ಹೇಳಿದೆ.
ಮುಂದಿನ ವರ್ಷದಲ್ಲಿ ವಾಯು ಮಾಲಿನ್ಯವು ಜಾಗತಿಕವಾಗಿ ಸುಮಾರು ಏಳು ಮಿಲಿಯನ್ ಜೀವಗಳನ್ನು ತೆಗೆದುಕೊಳ್ಳುತ್ತದೆ. ವಿಶ್ವದ ಆರ್ಥಿಕತೆಯು ಸುಮಾರು 225 ಬಿಲಿಯನ್ ಡಾಲರ್ಗಳಷ್ಟು ವೆಚ್ಚವಾಗಲಿದೆ ಎಂದು ಗ್ರೀನ್ಪೀಸ್ ವರದಿ ತಿಳಿಸಿದೆ.