ಸಂಭಾಲ್: ಸಂಭಲ್ ಜಿಲ್ಲೆಯ ಗುನ್ನಾರ್ ಕೊಟ್ವಾಲಿ ಗ್ರಾಮದಲ್ಲಿ ಮರಕ್ಕೆ ನೇಣು ಹಾಕಿದ ಸ್ಥಿತಿಯಲ್ಲಿ ಇಬ್ಬರು ಹದಿಹರೆಯದ ಸಹೋದರಿಯರ ಶವ ಪತ್ತೆಯಾಗಿದ್ದು, ಪ್ರದೇಶದಲ್ಲೀಗ ಈ ಸುದ್ದಿ ಜ್ವಾಲೆಯಂತೆ ಹರಡಿದೆ.
ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತಲುಪಿದ ಪೊಲೀಸರು ಮೃತ ದೇಹಗಳನ್ನು ಕೆಳಗಿಳಿಸಿ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಇದೇ ವೇಳೆ ಇದು ಆತ್ಮಹತ್ಯೆ ಎಂದು ಹೇಳಲಾಗುತ್ತಿದೆ. ಮನೆಯಲ್ಲಿ ಯಾವುದೋ ವಿಷಯಕ್ಕೆ ಸಂಬಂಧಿಸಿದಂತೆ ಜಗಳವಾದ ಕಾರಣ ಇವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಮಾಹಿತಿ ಪ್ರಕಾರ, ಶನಿವಾರ ತಾಯಿಯೊಂದಿಗೆ ಜಗಳವಾದ ಬಳಿಕ ಇಬ್ಬರೂ ಸಹೋದರಿಯರು ಮನೆಬಿಟ್ಟು ಹೋಗಿದ್ದರು. ನಂತರ ಅವರನ್ನು ಹುಡುಕಲು ಪ್ರಯತ್ನಿಸಿದರಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಇಂದು ಮುಂಜಾನೆ ಗ್ರಾಮಸ್ಥರು ಕೃಷಿ ಕೆಲಸಕ್ಕಾಗಿ ಜಮೀನಿಗೆ ತೆರಳಿದಾಗ ಅಲ್ಲಿ ಇಬ್ಬರೂ ಬಾಲಕೀಯರ ಶವ ಕಂಡು ಬಂದಿದೆ ಎಂದು ಹೇಳಲಾಗಿದೆ.