2005ರ ಅಯೋಧ್ಯೆ ಉಗ್ರರ ದಾಳಿ ಪ್ರಕರಣ: ನಾಲ್ವರು ಅಪರಾಧಿಗೆ ಜೀವಾವಧಿ ಶಿಕ್ಷೆ ಪ್ರಕಟ, ಓರ್ವ ನಿರ್ದೋಷಿ

ಹದಿನಾಲ್ಕು ವರ್ಷಗಳ ಬಳಿಕ ಪೂರ್ಣಗೊಂಡ ವಿಚಾರಣೆಯಲ್ಲಿ 63 ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿತ್ತು. 2005ರಲ್ಲಿ ನಡೆದ ಅಯೋಧ್ಯೆ ಉಗ್ರರ ದಾಳಿಯ ಸಂಚಿನಲ್ಲಿ ಉಗ್ರರಿಗೆ ಬೇಕಾದ ನೆರವು ನೀಡಿದ್ದರು ಎಂಬ ಆರೋಪದ ಮೇಲೆ ಈ ಐವರನ್ನು ಬಂಧಿಸಲಾಗಿತ್ತು

Last Updated : Jun 18, 2019, 06:08 PM IST
2005ರ ಅಯೋಧ್ಯೆ ಉಗ್ರರ ದಾಳಿ ಪ್ರಕರಣ: ನಾಲ್ವರು ಅಪರಾಧಿಗೆ ಜೀವಾವಧಿ ಶಿಕ್ಷೆ ಪ್ರಕಟ, ಓರ್ವ ನಿರ್ದೋಷಿ title=

ನವದೆಹಲಿ: 2005ರಲ್ಲಿ ಅಯೋಧ್ಯೆಯಲ್ಲಿ ನಡೆದ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಯಾಗ್​ರಾಜ್​ನ ವಿಶೇಷ ನ್ಯಾಯಾಲಯ ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದ್ದು, ಓರ್ವ ಆರೋಪಿಯನ್ನು ನಿರ್ದೋಷಿ ಎಂದು ಮಂಗಳವಾರ ತೀರ್ಪು ಪ್ರಕಟಿಸಿದೆ.

ವಿಶೇಷ ನ್ಯಾಯಾಲಯದ ನ್ಯಾಯಾಧೀಶ ದಿನೇಶ್ ಚಂದ್ರ ತೀರ್ಪು ಪ್ರಕಟಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ಐವರನ್ನು ಬಂಧಿಸಿದ್ದರು. ಅವರನ್ನು ಇರ್ಫಾನ್​, ಆಶಿಕ್​ ಇಕ್ಬಾಲ್​​​ ಅಲಿಯಾಸ್​ ಫಾರೂಖ್​, ಶಕೀಲ್​ ಅಹ್ಮದ್​, ಮಹಮ್ಮದ್​​ ನಸೀಮ್​ ಮತ್ತು ಮಹಮ್ಮದ್​ ಅಜೀಜ್​ ಎಂದು ಗುರುತಿಸಲಾಗಿತ್ತು. ಭದ್ರತಾ ದೃಷ್ಟಿಯಿಂದ ಬಂಧಿತರರಿರುವ ಅಲಹಬಾದ್​ನ ನೈನಿ ಜೈಲಿನಲ್ಲಿಯೇ ತೀರ್ಪು ಪ್ರಕಟಿಸಲಾಗಿದ್ದು, ಇರ್ಫಾನ್​, ಆಶಿಕ್​ ಇಕ್ಬಾಲ್​​​ ಅಲಿಯಾಸ್​ ಫಾರೂಖ್​, ಶಕೀಲ್​ ಅಹ್ಮದ್​, ಮಹಮ್ಮದ್​​ ನಸೀಮ್​ ಅವರನ್ನು ಅಪರಾಧಿಗಳೆಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಮತ್ತೋರ್ವ ಆರೋಪಿ ಮಹಮ್ಮದ್​ ಅಜೀಜ್ ನನ್ನು ನಿರ್ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದೆ.​

ಹದಿನಾಲ್ಕು ವರ್ಷಗಳ ಬಳಿಕ ಪೂರ್ಣಗೊಂಡ ವಿಚಾರಣೆಯಲ್ಲಿ 63 ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿತ್ತು. 2005ರಲ್ಲಿ ನಡೆದ ಅಯೋಧ್ಯೆ ಉಗ್ರರ ದಾಳಿಯ ಸಂಚಿನಲ್ಲಿ ಉಗ್ರರಿಗೆ ಬೇಕಾದ ನೆರವು ನೀಡಿದ್ದರು ಎಂಬ ಆರೋಪದ ಮೇಲೆ ಈ ಐವರನ್ನು ಬಂಧಿಸಲಾಗಿತ್ತು.
 

Trending News