ಉತ್ತರ ಪ್ರದೇಶ: ಟಿವಿ ಬ್ಲಾಸ್ಟ್ ಆಗಿ 3 ಮಕ್ಕಳ ಸಾವು

ಮಕ್ಕಳು ಟಿವಿ ನೋಡುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Last Updated : Apr 3, 2019, 01:24 PM IST
ಉತ್ತರ ಪ್ರದೇಶ: ಟಿವಿ ಬ್ಲಾಸ್ಟ್ ಆಗಿ 3 ಮಕ್ಕಳ ಸಾವು title=

ಲಕ್ನೋ: ಉತ್ತರ ಪ್ರದೇಶದ ಬದಾಯುನ್ ಜಿಲ್ಲೆಯ ಕೈಮೋಲಿ ಎಂಬ ಗ್ರಾಮದಲ್ಲಿ ಟಿವಿ ಸ್ಫೋಟದಿಂದಾಗಿ ಮೂರು ಮಕ್ಕಳು ಮೃತಪಟ್ಟಿದ್ದಾರೆ. ಸ್ಫೋಟದ ಸದ್ದು ಕೇಳುತ್ತಿದ್ದಂತೆ ಸ್ಥಳದಲ್ಲಿ ಜಮಾಯಿಸಿದ ಜನ ಭೀಕರ ದೃಶ್ಯವನ್ನು ಕಂಡು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ತಕ್ಷಣ ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಷ್ಟರಲ್ಲಿ ಮಕ್ಕಳು ಮೃತ ಪಟ್ಟಿದ್ದರು ಎನ್ನಲಾಗಿದೆ.

ಮಾಹಿತಿಯ ಪ್ರಕಾರ, ಬದಾಯುನ್ ಜಿಲ್ಲೆಯ ಉಜನಿ ಕೋಟ್ವಾಲಿಯ ಕೈಮೋಲಿ  ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಲ್ಲಿ, ಒಂದೇ ಕುಟುಂಬದ ನಾಲ್ವರು ಮಕ್ಕಳು ಒಟ್ಟಿಗೆ ಕುಳಿತು  ಟಿವಿ ವೀಕ್ಷಿಸುತ್ತಿದ್ದ ವೇಳೆ ಟಿವಿಯಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು, ಟಿವಿ ಸ್ಪೋಟಗೊಂಡಿದೆ. ಈ ಅಪಘಾತದಲ್ಲಿ ಮೂವರು ಮಕ್ಕಳು ಮೃತಪಟ್ಟಿದ್ದು ಮತ್ತು ತಕ್ಷಣ ಅಲ್ಲಿಂದ ಎದ್ದು ಓಡಿದ ಒಂದು ಮಗು ಮಾತ್ರ ಬದುಕುಳಿದಿದೆ.

ಘಟನೆಯ ಸಮಯದಲ್ಲಿ ಮನೆಯೊಳಗೆ ಯಾರೂ ಇರಲಿಲ್ಲ, ಎಲ್ಲರೂ ಹೊರಗೆ ಮಲಗಿದ್ದರು ಎಂದು ಹೇಳಲಾಗಿದೆ. 

ಬದಾಯುನ್ ಜಿಲ್ಲೆಯ ಕೈಮೋಲಿ ಗ್ರಾಮದಲ್ಲಿ ಸಂಭವಿಸಿರುವ ಅಪಘಾತದಲ್ಲಿ ಮೃತ ಪಟ್ಟಿರುವ ಮೂವರು ಮಕ್ಕಳು ಒಂದೇ ಕುಟುಂಬಕ್ಕೆ ಸೇರಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ ಉಸಿರುಗಟ್ಟಿ ಮಕ್ಕಳು ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಸಿವಿಲ್ ಲೈನ್ಸ್ನ ಠಾಣಾ ಉಸ್ತುವಾರಿ ಒಪಿ ಗೌತಮ್ ತಿಳಿಸಿದ್ದಾರೆ.

Trending News