ಕಾಶ್ಮೀರ್: ಉಗ್ರರ ಅಟ್ಟಹಾಸಕ್ಕೆ ಸೈನಿಕರ ದಿಟ್ಟ ಉತ್ತರ, 3 ಉಗ್ರರ ಬಲಿ

    

Last Updated : Jun 22, 2018, 12:47 PM IST
ಕಾಶ್ಮೀರ್: ಉಗ್ರರ ಅಟ್ಟಹಾಸಕ್ಕೆ ಸೈನಿಕರ ದಿಟ್ಟ ಉತ್ತರ, 3 ಉಗ್ರರ ಬಲಿ title=

ಶ್ರೀನಗರ್: ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸಕ್ಕೆ ಪ್ರತಿಕ್ರಿಯೆ ನೀಡಿರುವ ಸೈನಿಕರು ಮೂವರು ಉಗ್ರರನ್ನು ಹತ್ಯೆಗೈದಿದ್ದಾರೆ .ದಕ್ಷಿಣ ಕಾಶ್ಮೀರದ ಅನಂತ್ ನಾಗ್ ದಲ್ಲಿ  ದಾಳಿ ಮಾಡಿದ್ದ ಉಗ್ರರಿಗೆ ದಿಟ್ಟ ಉತ್ತರವನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ.

ಜಿಲ್ಲೆಯ ಖಿರಾಂ ಎನ್ನುವ ಪ್ರದೇಶದಲ್ಲಿ ಇಂದು ದಾಳಿ ನಡೆಸಿದ್ದ ಉಗ್ರರ ವಿರುದ್ದ ತಕ್ಷಣ ಎಚ್ಚೆತ್ತುಕೊಂಡು  ಸೈನಿಕರು ಕಾರ್ಯಾಚರಣೆಯನ್ನು ನಡೆಸಿದ್ದಾರೆ. ಈಗಾಗಲೇ ಮೂವರು ಉಗ್ರರ ಮೃತರಾಗಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ ಕಾರ್ಯಾಚರಣೆ ವೇಳೆ ಸುಮಾರು ಇಬ್ಬರು ನಾಗರಿಕರು ಗಾಯಗೊಂಡಿದ್ದಾರೆ ಎಂದು ಜಮ್ಮು ಕಾಶ್ಮೀರದ ಡಿಜಿಪಿ ಎಸ್ ಪಿ ವೈದ್ಯ ತಿಳಿಸಿದ್ದಾರೆ. 

ಗುರುವಾರದಂದು ಎನ್ ಎಸ್ ಜಿ ತಂಡವು ಶ್ರೀನಗರಕ್ಕೆ ಉಗ್ರರ ಭೀತಿಯಿಂದಾಗಿ ಅಮರಯಾತ್ರೆಗೆ ಮುಂಚಿತವಾಗಿ ಆಗಮಿಸಿತ್ತು. ಈಗ ಜೀ ನ್ಯೂಸ್ ಗೆ ಸಿಕ್ಕಿರುವ ಮಾಹಿತಿಯಂತೆ ಎನ್ಎಸ್ ಜಿ ಕಮಾಂಡೋ ಗಳನ್ನು ರಾಜ್ಯಾದ್ಯಂತ ನಿಯೋಜಿಸಲಾಗುವುದು ಎಂದು ತಿಳಿದುಬಂದಿದೆ.

Trending News