ಪಟಾಕಿ ರಹಿತ ದೀಪಾವಳಿಗಾಗಿ ದೆಹಲಿಯ ಕನಾಟ್ ಪ್ಲೇಸ್‌ನಲ್ಲಿ 4 ದಿನಗಳ ಲೇಸರ್ ಶೋ

ಹೆಚ್ಚುತ್ತಿರುವ ವಾಯು ಮತ್ತು ಶಬ್ದ ಮಾಲಿನ್ಯದ ಮಧ್ಯೆ ಪಟಾಕಿ ಮುಕ್ತ ದೀಪಾವಳಿಯನ್ನು ಉತ್ತೇಜಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ಶನಿವಾರದಿಂದ ದೆಹಲಿಯ ಕನಾಟ್ ಪ್ಲೇಸ್‌ನಲ್ಲಿ ಮೊದಲ ರೀತಿಯ ಮೆಗಾ ನಾಲ್ಕು ದಿನಗಳ ಲೇಸರ್ ಲೈಟ್ ಶೋ ಆಯೋಜಿಸಲಾಗುವುದು ಎಂದು ಹೇಳಲಾಗಿದೆ.

Updated: Oct 26, 2019 , 11:06 AM IST
ಪಟಾಕಿ  ರಹಿತ ದೀಪಾವಳಿಗಾಗಿ ದೆಹಲಿಯ ಕನಾಟ್ ಪ್ಲೇಸ್‌ನಲ್ಲಿ 4 ದಿನಗಳ ಲೇಸರ್ ಶೋ
Representational image (Courtesy: Pixabay)

ದೆಹಲಿ: ದಿನೇ ದಿನೇ ಹೆಚ್ಚುತ್ತಿರುವ ವಾಯು ಮತ್ತು ಶಬ್ದ ಮಾಲಿನ್ಯವನ್ನು ತಡೆಗಟ್ಟುವ ಉದ್ದೇಶದಿಂದ 'ಪಟಾಕಿ ರಹಿತ ದೀಪಾವಳಿ' ಆಚರಿಸಲು ದೆಹಲಿ ಸರ್ಕಾರ ಮುಂದಾಗಿದೆ. ಹೆಚ್ಚುತ್ತಿರುವ ವಾಯು ಮತ್ತು ಶಬ್ದ ಮಾಲಿನ್ಯದ ಮಧ್ಯೆ ಪಟಾಕಿ ಮುಕ್ತ ದೀಪಾವಳಿಯನ್ನು ಉತ್ತೇಜಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ಶನಿವಾರದಿಂದ ದೆಹಲಿಯ ಕನಾಟ್ ಪ್ಲೇಸ್‌ನಲ್ಲಿ ಮೊದಲ ರೀತಿಯ ಮೆಗಾ ನಾಲ್ಕು ದಿನಗಳ ಲೇಸರ್ ಲೈಟ್ ಶೋ ಆಯೋಜಿಸಲಾಗುವುದು ಎಂದು ಹೇಳಲಾಗಿದೆ.

ಇದಕ್ಕೂ ಮೊದಲು ಅಕ್ಟೋಬರ್ 21 ರಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ, “ಸಮುದಾಯ ಮತ್ತು ಮಾಲಿನ್ಯ ರಹಿತ ದೀಪಾವಳಿಯನ್ನು” ಪ್ರೋತ್ಸಾಹಿಸುವ ಉದ್ದೇಶವನ್ನು ನಮ್ಮ ಸರ್ಕಾರ ಹೊಂದಿದೆ. ಈ ಹಿನ್ನಲೆಯಲ್ಲಿ ಅಕ್ಟೋಬರ್ 26 ರಿಂದ 29 ರವರೆಗೆ ಸಂಜೆ 6 ರಿಂದ ರಾತ್ರಿ 10 ರವರೆಗೆ ವಿವಿಧ ಲೇಸರ್ ಪ್ರದರ್ಶನಗಳನ್ನು ಆಯೋಜಿಸಲಾಗುವುದು. ಈ ಕಾರ್ಯಕ್ರಮಕ್ಕೆ ಹಾಜರಾಗಲು ಮತ್ತು ಪಟಾಕಿ ಇಲ್ಲದೆ ದೀಪಾವಳಿಯನ್ನು ಆಚರಿಸಲು ನಾನು ದೆಹಲಿ ಜನರನ್ನು ಆಹ್ವಾನಿಸುತ್ತೇನೆ ” ಎಂದಿದ್ದರು.

ಸಿಪಿಯ ಸೆಂಟ್ರಲ್ ಪಾರ್ಕ್‌ನಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಯಾವುದೇ ಪ್ರವೇಶ ಪಾಸ್‌ಗಳಿಲ್ಲ ಎಂದು ದೆಹಲಿ ಸಿಎಂ ತಿಳಿಸಿದ್ದಾರೆ. “ಇಡೀ ಸಿಪಿಯನ್ನು ಲೇಸರ್ ದೀಪಗಳಿಂದ ಅಲಂಕರಿಸಲಾಗುವುದು. ಪ್ರದರ್ಶನಗಳು ಪ್ರತಿ ಗಂಟೆಗೆ ನಡೆಯುತ್ತವೆ. ಈ ಸಂದರ್ಭದಲ್ಲಿ ವಿವಿಧ ಕಲಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿವೆ. ಈ ಪ್ರದೇಶದಲ್ಲಿ ಆಹಾರ ಮೇಳ ಮತ್ತು ಮಾರುಕಟ್ಟೆಗಳು ಇರಲಿವೆ ”ಎಂದು ಅವರು ಹೇಳಿದರು.

ಈ 'ಶೋ' ಯಶಸ್ವಿಯಾದರೆ, ಸರ್ಕಾರವು ಈ ಕಾರ್ಯಕ್ರಮವನ್ನು ವಿವಿಧ ಸ್ಥಳಗಳಲ್ಲಿ ಮತ್ತು ಮುಂದಿನ ವರ್ಷ ದೊಡ್ಡ ಪ್ರಮಾಣದಲ್ಲಿ ಆಯೋಜಿಸುತ್ತದೆ ಎಂದು ಅರವಿಂದ್ ಕೇಜ್ರೀವಾಲ್ ತಿಳಿಸಿದ್ದಾರೆ.

ಈ ಕ್ರಮದಿಂದ ಅಸಮಾಧಾನಗೊಂಡ ಕನಾಟ್ ಪ್ಲೇಸ್ ಪ್ರದೇಶದ ವ್ಯಾಪಾರಿಗಳು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರನ್ನು ಸಂಪರ್ಕಿಸಿ ಸೆಂಟ್ರಲ್ ಪಾರ್ಕ್‌ನಂತಹ ತೆರೆದ ಸ್ಥಳಗಳಲ್ಲಿ ಜನಸಂದಣಿಯನ್ನು ಸೇರಿಸಲು ಅನುಮತಿ ನೀಡುವಂತೆ ಮತ್ತು ಪ್ರದೇಶದಲ್ಲಿ ಸಾಕಷ್ಟು ಭದ್ರತಾ ವ್ಯವಸ್ಥೆಗಳನ್ನು ಒದಗಿಸುವಂತೆ ಕೋರಿದ್ದಾರೆ.

"ಅಪಾರ ಜನಸಂದಣಿಯನ್ನು ನಿರೀಕ್ಷಿಸಿದಂತೆ, ದುಷ್ಕರ್ಮಿಗಳು, ಈವ್-ಟೀಸರ್ಗಳು, ಪಿಕ್‌ಪಾಕೆಟ್‌ಗಳು, ಚೈನ್ ಸ್ನ್ಯಾಚರ್‌ಗಳು ಮತ್ತು ಇತರ ಸಾಮಾಜಿಕ ವಿರೋಧಿ ಅಂಶಗಳು ಪರಿಸ್ಥಿತಿಯ ಲಾಭವನ್ನು ಪಡೆದುಕೊಳ್ಳುವ ಸಾಧ್ಯತೆಯಿದೆ" ಎಂದು ನವದೆಹಲಿ ವ್ಯಾಪಾರಿಗಳ ಸಂಘ (ಎನ್‌ಡಿಟಿಎ) ಬೈಜಲ್‌ಗೆ ಬರೆದ ಪತ್ರದಲ್ಲಿ ತಿಳಿಸಿದೆ. 

"ಸೆಂಟ್ರಲ್ ಪಾರ್ಕ್‌ನಂತಹ ತೆರೆದ ಪ್ರದೇಶಗಳಲ್ಲಿ ಜನಸಮೂಹವನ್ನು ಸೇರಿಸಲು ಅನುಮತಿಯನ್ನು ನಿರ್ಬಂಧಿಸಬೇಕೆಂದು ನಾವು ವಿನಂತಿಸುತ್ತೇವೆ. ಸಣ್ಣಪುಟ್ಟ ಘಟನೆಗಳು ದೆಹಲಿ ಪೊಲೀಸ್ ಮತ್ತು ಸರ್ಕಾರಕ್ಕೆ ಕೆಟ್ಟ ಚಿತ್ರಣವನ್ನು ತರುತ್ತವೆ ಎಂದು ನಾವು ಭಯಪಡುತ್ತಿರುವುದರಿಂದ ಇಡೀ ಸಂಕೀರ್ಣದಲ್ಲಿ ಬಿಗಿ ಭದ್ರತೆಯನ್ನು ಒದಗಿಸಬೇಕು" ಎಂದು ಪತ್ರ ಕೋರಲಾಗಿದೆ.

ಕನಾಟ್ ಪ್ಲೇಸ್‌ನಲ್ಲಿನ ವ್ಯಾಪಾರಿಗಳ ಕಳವಳಕ್ಕೆ ಪ್ರತಿಕ್ರಿಯಿಸಿರುವ ಸಿಎಂ ಕೇಜ್ರಿವಾಲ್, ಇದರಿಂದಾಗಿ ವ್ಯಾಪಾರಿಗಳಿಗೆ ಅನುಕೂಲವಾಗುತ್ತದೆ. ನಿಮ್ಮ ವ್ಯಾಪಾರ ಹೆಚ್ಚಾಗುತ್ತದೆ ಮತ್ತು ಖಾಸಗಿ ಸಾರಿಗೆಗೆ ಮಾತ್ರ ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ಹೇಳಿದ್ದಾರೆ.

"ವ್ಯಾಪಾರಿಗಳು ಮತ್ತು ಉದ್ಯಮಿಗಳಿಗೆ ಯಾವುದೇ ನಿರ್ಬಂಧಗಳಿಲ್ಲ. ಬದಲಾಗಿ, ಜನರು ಕನಾಟ್ ಪ್ಲೇಸ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿರುವುದರಿಂದ ವ್ಯಾಪಾರವನ್ನು ದ್ವಿಗುಣಗೊಳಿಸಲಾಗುತ್ತದೆ. ರಸ್ತೆಗಳಲ್ಲಿ ದಟ್ಟಣೆಯನ್ನು ಉಂಟುಮಾಡುವ ಕಾರಣ ಖಾಸಗಿ ವಾಹನಗಳ ಮೇಲೆ ಮಾತ್ರ ನಿರ್ಬಂಧಗಳನ್ನು ವಿಧಿಸಲಾಗಿದೆ" ಎಂದು ಅವರು ಹೇಳಿದರು.