ನವದೆಹಲಿ: ಕಾಶ್ಮೀರದ ಸುಂಜವಾನ್ ಸೇನಾ ಶಿಬಿರದ ಮೇಲೆ ನಡೆದ ದಾಳಿಯಲ್ಲಿ ಕನಿಷ್ಠ ಐದು ಮಂದಿ ಸೈನಿಕರು ಮತ್ತು ಓರ್ವ ನಾಗರಿಕನ ಮೃತಪಟ್ಟಿದ್ದಾನೆ. ಸುಮಾರು 30 ಗಂಟೆಗಳ ಕಾಲ ನಡೆದ ಗುಂಡಿನ ಕಾಳಗದಲ್ಲಿ ಸೈನಿಕರು ಸಹ ನಾಲ್ವರು ಉಗ್ರರನ್ನು ಗುಂಡಿಕ್ಕಿ ಕೊಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಶನಿವಾರ, ಭಯೋತ್ಪಾದಕರು ಆರ್ಮಿ ಶಿಬಿರದಲ್ಲಿ ಮುಂಜಾನೆ ದಾಳಿ ನಡೆಸಿ ಇಬ್ಬರು JCOರನ್ನು ಕೊಂಡಿದ್ದಾರೆ ಇದಕ್ಕೆ ಪ್ರತೀಕಾರವಾಗಿ, ಸೈನಿಕರು ಶನಿವಾರ ಮೂರು ಭಯೋತ್ಪಾದಕರನ್ನು ಮತ್ತು ಭಾನುವಾರದಂದು ಮತ್ತೋರ್ವ ಭಯೋತ್ಪಾದಕನನ್ನು ಹತ್ಯೆ ಗೈದಿದ್ದಾರೆ.
ಕಾರ್ಯಾಚರಣೆಯ ಬಗ್ಗೆ ಪ್ರತಿಕ್ರಯಿಸಿರುವ ಕೇಂದ್ರ ಗೃಹ ಸಚಿವ ರಾಜ್ ನಾಥ್ ಸಿಂಗ್, ನಮ್ಮ ಸೈನಿಕರು ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಮುಗಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.