ಬೆಂಗಳೂರು: ಭಾನುವಾರದಂದು ಹಂಪಿ ಎಕ್ಸ್ ಪ್ರೆಸ್ ಆರು ಗಂಟೆ ತಡವಾಗಿದ್ದಕ್ಕೆ ಸುಮಾರು 500 ವಿದ್ಯಾರ್ಥಿಗಳು ಪರೀಕ್ಷೆಯಿಂದ ತಪ್ಪಿಸಿಕೊಂಡಿದ್ದಾರೆ ಎನ್ನಲಾಗಿದೆ.
Mr. @narendramodi,
Ask @PiyushGoyal to work properly for next few days and then we will set it right. Also, ensure that the aggrieved students get another chance to write NEET exam.
2/2— Siddaramaiah (@siddaramaiah) May 5, 2019
16591- ಬೆಂಗಳೂರಿಗೆ ಹಂಪಿ ಎಕ್ಸ್ಪ್ರೆಸ್ 2:30 ಕ್ಕೆ ತಲುಪಿದೆ, ಆದರೆ ನೀಟ್ ಪರೀಕ್ಷೆ ನಿಗದಿತ ವೇಳೆಯನ್ವಯ 1.30ಕ್ಕೆ ಪ್ರಾರಂಭವಾದ ಹಿನ್ನಲೆಯಲ್ಲಿ ಸುಮಾರು 500 ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಅವಕಾಶದಿಂದ ವಂಚಿತರಾಗಿದ್ದಾರೆ.ಈಗ ರೇಲ್ವೆ ವಿಳಂಭವಾದ ಬಗ್ಗೆ ಟ್ವೀಟ್ ಮಾಡಿ ಕೇಂದ್ರ ಸರ್ಕಾರದ ವಿರುದ್ದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕಿಡಿ ಕಾರಿದ್ದಾರೆ.
"ನರೇಂದ್ರ ಮೋದಿಯವರೇ, ನೀವು ಇತರರ ಸಾಧನೆಗಳಿಗೆ ನಿಮ್ಮ ಬೆನ್ನನ್ನು ತಟ್ಟಿಕೊಂಡು ತೃಪ್ತಿಪಡುತ್ತೀರಿ.ಈಗ ನಿಮ್ಮ ಕ್ಯಾಬಿನೆಟ್ ಸಚಿವರ ಅಸಮರ್ಥತೆಗಳಿಗೆ ನೀವು ಜವಾಬ್ದಾರಿ ತೆಗೆದುಕೊಳ್ಳಿ. ರೈಲಿನ ಸೇವೆಗಳ ವಿಳಂಬದ ಕಾರಣ ಕರ್ನಾಟಕದ ನೂರಾರು ವಿದ್ಯಾರ್ಥಿಗಳು ನೀಟ್ ಪರೀಕ್ಷೆಯನ್ನು ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. " ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ಮುಂದುವರೆದು ಪಿಯುಶ್ ಗೋಯಲ್ ಅವರಿಗೆ ಸರಿಯಾಗಿ ಮುಂದಿನ ಕೆಲವು ದಿನಗಳ ಕಾಲ ಕೆಲಸ ಮಾಡಲು ಹೇಳಿ, ಆದರೆ ರೀತಿ ಪರೀಕ್ಷೆ ವಂಚಿತ ವಿದ್ಯಾರ್ಥಿಗಳಿಗೆ ಬರೆಯಲು ಇನ್ನೊಂದು ಅವಕಾಶ ನೀಡಿ ಎಂದು ಸಿದ್ದರಾಮಯ್ಯ ಮನವಿ ಮಾಡಿಕೊಂಡಿದ್ದಾರೆ.