7th Pay Commission : ರೈಲ್ವೆ ನೌಕರರಿಗೆ ಭರ್ಜರಿ ಸಿಹಿ ಸುದ್ದಿ : ಹಬ್ಬದ ಮೊದಲೇ ಬಾಕಿ ಇರುವ DA ಜೊತೆ ಬೋನಸ್ ಕೈಗೆ

ರೈಲ್ವೆ ಉದ್ಯೋಗಿಗಳ ಜೇಬಿಗೆ ಹಣ ತುಂಬಲಿದೆ. ದುರ್ಗಾ ಪೂಜೆ ಸಮಯದಲ್ಲಿ ನೌಕರರಿಗೆ ಬೋನಸ್ ಸಿಗಲಿದೆ. ಕಳೆದ ವರ್ಷದಂತೆ ಈ ಬಾರಿಯೂ 17951 ರೂ.ನಂತೆ ಒಟ್ಟು 78 ದಿನಗಳ ಬೋನಸ್ ಖಾತೆಗೆ ಜಮಾ ಆಗಲಿದೆ.

Written by - Channabasava A Kashinakunti | Last Updated : Aug 28, 2021, 09:50 AM IST
  • ನೀವು ರೈಲ್ವೇ ಉದ್ಯೋಗಿಯಾಗಿದ್ದರೆ ನಿಮಗಿದು ಭರ್ಜರಿ ಸಿಹಿ ಸುದ್ದಿ
  • ರೈಲ್ವೆ ನೌಕರರಿಗೆ ಹೆಚ್ಚಿದ ಡಿಎ ಜೊತೆಗೆ ಬೋನಸ್
  • ಕಳೆದ ವರ್ಷದಂತೆ ಈ ಬಾರಿಯೂ 17951 ರೂ.ನಂತೆ ಒಟ್ಟು 78 ದಿನಗಳ ಬೋನಸ್
7th Pay Commission : ರೈಲ್ವೆ ನೌಕರರಿಗೆ ಭರ್ಜರಿ ಸಿಹಿ ಸುದ್ದಿ : ಹಬ್ಬದ ಮೊದಲೇ ಬಾಕಿ ಇರುವ DA ಜೊತೆ ಬೋನಸ್ ಕೈಗೆ title=

ನವದೆಹಲಿ : ನೀವು ರೈಲ್ವೇ ಉದ್ಯೋಗಿಯಾಗಿದ್ದರೆ ನಿಮಗೆ ಭರ್ಜರಿ ಸಿಹಿ ಸುದ್ದಿ ಇದಾಗಿದೆ. ಡಿಎ(DA Hike)ಯ ಇತ್ತೀಚಿನ ಹೆಚ್ಚಳದಿಂದ ರೈಲ್ವೇ ಉದ್ಯೋಗಿಗಳು ತುಂಬಾ ಸಂತೋಷದಿಂದ ಇದ್ದಾರೆ. ಈ ಮಧ್ಯ ಮತ್ತೆ ಒಂದು ಸಿಹಿ ಸುದ್ದಿ ಸಿಕ್ಕಿದೆ. ದುರ್ಗಾ ಪೂಜೆಯ ಮೊದಲು, ರೈಲ್ವೆ ಉದ್ಯೋಗಿಗಳ ಜೇಬಿಗೆ ಹಣ ತುಂಬಲಿದೆ. ದುರ್ಗಾ ಪೂಜೆ ಸಮಯದಲ್ಲಿ ನೌಕರರಿಗೆ ಬೋನಸ್ ಸಿಗಲಿದೆ. ಕಳೆದ ವರ್ಷದಂತೆ ಈ ಬಾರಿಯೂ 17951 ರೂ.ನಂತೆ ಒಟ್ಟು 78 ದಿನಗಳ ಬೋನಸ್ ಖಾತೆಗೆ ಜಮಾ ಆಗಲಿದೆ.

ನೌಕರರ ಜೇಬಿಗೆ ಬೋನಸ್ 

ರೈಲ್ವೇ ನೌಕರರಿಗೆ(Railway Employee) ಬೋನಸ್ ಸಿಗಲಿದೆ ಮತ್ತು ಜುಲೈನ ಡಿಎ ಕೂಡ ಅವರ ಸಂಬಳಕ್ಕೆ ಸೇರಿಸಲಾಗುತ್ತದೆ. ಅಂದರೆ, ಈಗ ಬರುವ ಸಂಬಳದಲ್ಲಿ, ಬೋನಸ್ ಜೊತೆಗೆ ಡಿಎ ಕೂಡ ಸಿಗಲಿದೆ. ಗಮನಿಸಬೇಕಾದ ಸಂಗತಿಯೆಂದರೆ, ರೈಲ್ವೆ ಉದ್ಯೋಗಿಗಳು ಇತ್ತೀಚೆಗೆ ಶೇ. 11 ರಷ್ಟು ಹೆಚ್ಚಿದ ಡಿಎ ಲಾಭವನ್ನು ಪಡೆದಿದ್ದಾರೆ. ಕೇಂದ್ರ ಸರ್ಕಾರವು ಜನವರಿ 2020 ರಿಂದ ಬಹಳ ಸಮಯದಿಂದ ಕಾಯುತ್ತಿದ್ದ ನೌಕರರ ಡಿಎ ಮೇಲಿನ ನಿಷೇಧವನ್ನು ತೆಗೆದುಹಾಕಿದ ನಂತರ ಡಿಎ ಶೇ.17 ರಿಂದ ಶೇ.28 ಕ್ಕೆ ಹೆಚ್ಚಾಗಿದೆ. ಈಗ ಜುಲೈ 2021 ರ ಡಿಎಯನ್ನು ಶೇ.3 ರಷ್ಟು ಪಡೆಯುವ ಸಾಧ್ಯತೆಯಿದೆ. ಇದರೊಂದಿಗೆ ಒಟ್ಟು ಡಿಎ ಶೇ.31 ರಷ್ಟಾಗಲಿದೆ ಆಗುತ್ತದೆ.

ಇದನ್ನೂ ಓದಿ: Bank Holidays List: ಸೆಪ್ಟೆಂಬರ್‌ನಲ್ಲಿ 12 ದಿನ ಬ್ಯಾಂಕ್‌ಗಗಳಿಗೆ ರಜೆ, ಮನೆಯಿಂದ ಹೊರಡುವ ಮುನ್ನ ಈ ಪಟ್ಟಿಯನ್ನು ಪರಿಶೀಲಿಸಿ

ನೌಕರರಿಗೆ ಕೋಟ್ಯಂತರ ರೂಪಾಯಿ ವಿತರಣೆ

ಧನ್ಬಾದ್ ರೈಲ್ವೇ ವಿಭಾಗವು ಜಾರ್ಖಂಡ್, ಬಿಹಾರ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶಗಳಲ್ಲಿ ಹರಡಿಕೊಂಡಿದ್ದು ಇದರಲ್ಲಿ ಸುಮಾರು 22222 ಉದ್ಯೋಗಿಗಳು ಸೇವೆ ಸಲ್ಲಿಸುತ್ತಿದ್ದಾರೆ. ಈ ಎಲ್ಲ ಉದ್ಯೋಗಿಗಳು ಹಬ್ಬದ ಮೊದಲು ಬೋನಸ್(Railway Employee Bonus) ಲಾಭವನ್ನು ಪಡೆಯುತ್ತಾರೆ. ಪ್ರತಿ ಉದ್ಯೋಗಿಯು ಕಳೆದ ವರ್ಷದಂತೆ 17951 ರೂ. ಬೋನಸ್ ಆಗಿ ಪಡೆದರೆ, ಸುಮಾರು 39 ಕೋಟಿ 90 ಲಕ್ಷ ರೂ. ಬೋನಸ್ ಮೊತ್ತವಾಗಿ ಮಾತ್ರ ವಿತರಿಸಲಾಗುತ್ತದೆ. ಇದರೊಂದಿಗೆ ಡಿಎ ಮೊತ್ತವೂ ಲಭ್ಯವಿರುತ್ತದೆ. ಡಿಎ ಮೊತ್ತವು ಉದ್ಯೋಗಿ ಮತ್ತು ಅಧಿಕಾರಿಯ ವೇತನವನ್ನು ಆಧರಿಸಿರುತ್ತದೆ.

ಇದನ್ನೂ ಓದಿ: ಇನ್ಮುಂದೆ ಕಡಿಮೆ ದರದಲ್ಲಿ ರೈಲಿನ ಎಸಿ ಕೋಚ್‌ ನಲ್ಲಿ ನೀವು ಪ್ರಯಾಣಿಸಬಹುದು..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News