ನಕ್ಸಲರ ದಾಳಿಗೆ 9 ಸಿಆರ್ಪಿಎಫ್ ಪೊಲೀಸರ ಬಲಿ

    

webmaster A | Updated: Mar 13, 2018 , 07:59 PM IST
ನಕ್ಸಲರ ದಾಳಿಗೆ 9 ಸಿಆರ್ಪಿಎಫ್ ಪೊಲೀಸರ ಬಲಿ

ನವದೆಹಲಿ: ಛತ್ತೀಸ್ ಘಡ್ ನ ಸುಕ್ಮಾ ಜಿಲ್ಲೆಯಲ್ಲಿ ಮಾವೋವಾದಿಗಳು ಎಮ್ಪಿವಿ ವಾಹನವನ್ನು ಸ್ಫೋಟಿಸಿದ ಪರಿಣಾಮವಾಗಿ 9 ಮಂದಿ  ಸಿಆರ್ಪಿಎಫ್ ಪೊಲೀಸರು ಮೃತಪಟ್ಟಿದ್ದಾರೆ.ಅಲ್ಲದೆ ಇಬ್ಬರು ಗಾಯಗೊಂಡದಿದ್ದಾರೆ ಎಂದು ತಿಳಿದುಬಂದಿದೆ. 

ಮಾವೋವಾದಿಗಳು ಸಿಆರ್ಪಿಎಫ್ 212 ನೇ ಬಟಾಲಿಯನ್ ಗುರಿಯಾಗಿಸಿಕೊಂಡು ಈ ದಾಳಿಗೈದಿದ್ದಾರೆ.ಪೊಲೀಸರು ಪ್ರಮುಖವಾಗಿ ಕಿಶ್ತಾರಾಂನ ಅರಣ್ಯ ಪ್ರದೇಶದಲ್ಲಿ ಹೆಚ್ಚಿನ ಪ್ರಾಬಲ್ಯವನ್ನು ಹೊಂದಿದ್ದರು ಎಂದು ಹೇಳಲಾಗಿದೆ. ಪೋಲಿಸ್ ಪಡೆಯ ವಾಹನ ಸಾಗುತ್ತಿರಬೇಕಾದರೆ ನಕ್ಸಲರು ಈ ಕೃತ್ಯಗೈದಿದ್ದಾರೆ ಎಂದು ಹೇಳಲಾಗಿದೆ.

ಈ ಘಟನೆಗೆ ಪ್ರತಿಕ್ರಯಿಸಿರುವ ಪ್ರಧಾನಿ ಮೋದಿ ದಾಳಿಯಲ್ಲಿ ಮೃತರಾದ ಪೋಲೀಸರ ತ್ಯಾಗವನ್ನು ಸ್ಮರಿಸುತ್ತಾ ಸಂತಾಪ ವ್ಯಕ್ತಪಡಿಸಿದ್ದಾರೆ.