ಜಮ್ಮು ಕಾಶ್ಮೀರದಲ್ಲಿ ಸಕ್ರೀಯರಾಗಿದ್ದಾರೆ 97 ಆತಂಕವಾದಿಗಳು, ಉಗ್ರರ ನಿಗ್ರಹಕ್ಕೆ ಸುರಕ್ಷಾ ದಳ ವಿಶೇಷ ಕಾರ್ಯಾಚರಣೆ

ಮೂಲಗಳ ಪ್ರಕಾರ ಕಾಶ್ಮೀರದ 9 ಪ್ರದೇಶಗಳ ಪೈಕಿ ಹೆಚ್ಚಿನ ಭಯೋತ್ಪಾದಕರು ಪುಲ್ವಾಮಾದಲ್ಲಿದ್ದಾರೆ. ಪುಲ್ವಾಮಾದಲ್ಲಿ ಒಟ್ಟು 36 ಭಯೋತ್ಪಾದಕರು ಇದ್ದಾರೆ ಎಂದು ವರದಿಯಾಗಿದೆ.

Written by - Ranjitha R K | Last Updated : Nov 15, 2021, 03:42 PM IST
  • ಭದ್ರತಾ ಸಂಸ್ಥೆಗಳು ಸಿದ್ಧಪಡಿಸಿವೆ ಉಗ್ರರ ಪಟ್ಟಿ
  • 9 ಪ್ರದೇಶಗಳಲ್ಲಿ 97 ಉಗ್ರರ ಪತ್ತೆ
  • ಕಾಶ್ಮೀರದಲ್ಲಿದ್ದಾರೆ 38 ಪಾಕಿಸ್ತಾನಿ ಭಯೋತ್ಪಾದಕರು
ಜಮ್ಮು ಕಾಶ್ಮೀರದಲ್ಲಿ ಸಕ್ರೀಯರಾಗಿದ್ದಾರೆ 97 ಆತಂಕವಾದಿಗಳು, ಉಗ್ರರ ನಿಗ್ರಹಕ್ಕೆ ಸುರಕ್ಷಾ ದಳ ವಿಶೇಷ ಕಾರ್ಯಾಚರಣೆ title=
ಭದ್ರತಾ ಸಂಸ್ಥೆಗಳು ಸಿದ್ಧಪಡಿಸಿವೆ ಉಗ್ರರ ಪಟ್ಟಿ (file photo)

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ (Jammu kashmir) ಉಗ್ರರ ಜಾಲವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಭದ್ರತಾ ಸಂಸ್ಥೆಗಳು ಸಜ್ಜಾಗಿದ್ದು, ಕಾಶ್ಮೀರದ ವಿವಿಧ ಪ್ರದೇಶಗಳಲ್ಲಿ ಇರುವ ಉಗ್ರರ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ. ವಿಶೇಷ ಮಾಹಿತಿಯ ಪ್ರಕಾರ, ಕೇಂದ್ರ ಗುಪ್ತಚರ ಸಂಸ್ಥೆಗಳು ಜಮ್ಮು ಮತ್ತು ಕಾಶ್ಮೀರದ 9 ಪ್ರದೇಶಗಳಲ್ಲಿ ಒಟ್ಟು 97 ಭಯೋತ್ಪಾದಕರನ್ನು (Terrorist) ಗುರುತಿಸಿವೆ. ಈ 97 ಭಯೋತ್ಪಾದಕರ ಪೈಕಿ 24 ಹಿಜ್ಬುಲ್ ಮುಜಾಹಿದ್ದೀನ್, 52 ಲಷ್ಕರ್, 11 ಅಲ್ ಬದರ್ ಮತ್ತು 9 ಭಯೋತ್ಪಾದಕರು ಜೈಶ್-ಎ-ಮೊಹಮ್ಮದ್ ಸಂಘಟನೆಗೆ ಸೇರಿದವರಾಗಿದ್ದಾರೆ. 

ಪುಲ್ವಾಮಾದಲ್ಲಿ ಹೆಚ್ಚಿದೆ ಉಗ್ರರ ಉಪಸ್ಥಿತಿ :
ಮೂಲಗಳ ಪ್ರಕಾರ ಕಾಶ್ಮೀರದ 9 ಪ್ರದೇಶಗಳ ಪೈಕಿ ಹೆಚ್ಚಿನ ಭಯೋತ್ಪಾದಕರು (Terrorist) ಪುಲ್ವಾಮಾದಲ್ಲಿದ್ದಾರೆ. ಪುಲ್ವಾಮಾದಲ್ಲಿ ಒಟ್ಟು 36 ಭಯೋತ್ಪಾದಕರು ಇದ್ದಾರೆ ಎಂದು ವರದಿಯಾಗಿದೆ. ಅವರಲ್ಲಿ 10 ಹಿಜ್ಬುಲ್ ಮುಜಾಹಿದ್ದೀನ್, 17 ಲಷ್ಕರ್, 4 ಅಲಬ್ದಾರ್, 4 ಜೈಶ್ ಭಯೋತ್ಪಾದಕರು. ಇದಾದ ನಂತರ ಶೋಪಿಯಾನ್ ನಲ್ಲಿ ಒಟ್ಟು 24 ಸಕ್ರಿಯ ಭಯೋತ್ಪಾದಕರು ಇದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ.  ಅದರಲ್ಲಿ 5 ಹಿಜ್ಬುಲ್ ಮುಜಾಹಿದ್ದೀನ್, 14 ಲಷ್ಕರ್ ಮತ್ತು ಒಟ್ಟು 5 ಅಲ್ಬದರ್ ಭಯೋತ್ಪಾದಕರು ಇದ್ದಾರೆ ಎನ್ನಲಾಗಿದೆ. ಇನ್ನು ಕುಲ್ಗಾಮ್‌ನಲ್ಲಿ 13, ಶ್ರೀನಗರದಲ್ಲಿ 8, ಅನಂತನಾಗ್‌ನಲ್ಲಿ 8 ಮತ್ತು ಬಾರಾಮುಲ್ಲಾದಲ್ಲಿ 5 ಭಯೋತ್ಪಾದಕರು ಇರುವ ಬಗ್ಗೆ ಮಾಹಿತಿ ಲಭಿಸಿದೆ. ಗುಪ್ತಚರ ಮಾಹಿತಿಯ ಆಧಾರದ ಮೇಲೆ ಎಲ್ಲಾ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಗೆ ಭದ್ರತಾ ಏಜೆನ್ಸಿಗಳು ಸಿದ್ಧತೆಯಲ್ಲಿ ತೊಡಗಿವೆ.

ಇದನ್ನೂ ಓದಿ :  Smartphone ಸ್ಪೀಡ್‌ ಆಗಿ ಚಾರ್ಜ್‌ ಆಗಬೇಕಾದರೆ ನೀವು ಮಾಡುವ ಈ ತಪ್ಪುಗಳನ್ನು ಸರಿಪಡಿಸಿಕೊಳ್ಳಿ

ಈ ವರ್ಷ ನಡೆದಿವೆ 46 ಬಾರಿ ಒಳನುಸುಳುವಿಕೆ ಪ್ರಯತ್ನ : 
ಪಾಕಿಸ್ತಾನದ ಐಎಸ್‌ಐ (ISI) ಯುವಕರನ್ನು ಭಯೋತ್ಪಾದನೆಯ ಹಾದಿಗೆ ತಳ್ಳುವುದರೊಂದಿಗೆ ಗಡಿ ನಿಯಂತ್ರಣ ರೇಖೆ (LOC) ಮೂಲಕ ಕಣಿವೆಯೊಳಗೆ ಭಯೋತ್ಪಾದಕರನ್ನು ನುಸುಳಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ವರದಿಯೊಂದರ ಪ್ರಕಾರ, ಈ ವರ್ಷ ಇದುವರೆಗೆ 46 ಒಳನುಸುಳುವಿಕೆ ಯತ್ನಗಳು ನಡೆದಿವೆ. ಇದರಲ್ಲಿ ಸುಮಾರು 17 ಭಯೋತ್ಪಾದಕರು ಒಳನುಸುಳಿರುವ ಬಗ್ಗೆ ಮಾಹಿತಿ ಲಭಿಸಿದೆ. ಆದರೆ, ಇದುವರೆಗೆ ಎಷ್ಟು ಉಗ್ರರು ನುಸುಳಿದ್ದಾರೆ ಎಂಬ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ.

ಕಾಶ್ಮೀರದಲ್ಲಿ 38 ಪಾಕಿಸ್ತಾನಿ ಭಯೋತ್ಪಾದಕರು :
ಝೀ ಮೀಡಿಯಾಗೆ ಸಿಕ್ಕಿರುವ ವಿಶೇಷ ಮಾಹಿತಿಯ ಪ್ರಕಾರ, ಕಣಿವೆಯಲ್ಲಿ ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿರುವ ಪಾಕಿಸ್ತಾನಿ ಭಯೋತ್ಪಾದಕರ ಪಟ್ಟಿಯನ್ನು ಗುಪ್ತಚರ ಸಂಸ್ಥೆಗಳು ಸಿದ್ಧಪಡಿಸಿವೆ. ಈ ಪಟ್ಟಿಯ ಪ್ರಕಾರ, 38 ಪಾಕಿಸ್ತಾನಿ ಭಯೋತ್ಪಾದಕರು (Pakistan terrorist) ಕಾಶ್ಮೀರದಲ್ಲಿದ್ದಾರೆ, ಇದು ಕಾಶ್ಮೀರದ ಶಾಂತಿ ಮತ್ತು ನೆಮ್ಮದಿಗೆ ಅಪಾಯವಾಗಿ ಪರಿಣಮಿಸಲಿದೆ. 38 ಉಗ್ರರ ಪೈಕಿ 27 ಭಯೋತ್ಪಾದಕರು ಲಷ್ಕರ್ (Lashkar) ಮತ್ತು ಉಳಿದ 11 ಭಯೋತ್ಪಾದಕರು ಜೈಶ್-ಎ-ಮೊಹಮ್ಮದ್ (jaish e mohammad) ಸಂಘಟನೆಯವರಾಗಿದ್ದಾರೆ. ಪಟ್ಟಿಯ ಪ್ರಕಾರ, ಈ ಪೈಕಿ 4 ಭಯೋತ್ಪಾದಕರು ಶ್ರೀನಗರದ ವಿವಿಧ ಪ್ರದೇಶಗಳಲ್ಲಿ, 3 ಕುಲ್ಗಾಮ್, 10 ಪುಲ್ವಾಮಾ, 10 ಬಾರಾಮುಲ್ಲಾ ಮತ್ತು 11 ಭಯೋತ್ಪಾದಕರು ಅಡಗಿಕೊಂಡಿರಬಹುದು ಎನ್ನಲಾಗಿದೆ.

ಭಾರತದ ವಿರುದ್ಧ ದೊಡ್ಡ ಪಿತೂರಿಯಲ್ಲಿ ಐಎಸ್‌ಐ :
ಗುಪ್ತಚರ ಸಂಸ್ಥೆಗಳಿಂದ ಪಡೆದ ಮಾಹಿತಿಯ ಪ್ರಕಾರ, ಪಾಕ್ ಆಕ್ರಮಿತ ಕಾಶ್ಮೀರದ (POK) ಭಯೋತ್ಪಾದಕ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯ ಭಯೋತ್ಪಾದಕರು ಇರುವ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ. ಮಾಹಿತಿ ಪ್ರಕಾರ ಭಯೋತ್ಪಾದಕ ಶಿಬಿರಗಳಲ್ಲಿ 200-300 ಉಗ್ರರು ಇರುವ ಬಗ್ಗೆ ಮಾಹಿತಿ ಲಭಿಸಿದೆ. 

ಇದನ್ನೂ ಓದಿ : Rani Kamalapati Railway Station: ಹೊಸ ಹೆಸರು, ಹೊಸ ಗುರುತು, ಚಿತ್ರಗಳಲ್ಲಿ ರಾಣಿ ಕಮಲಾಪತಿ ರೈಲು ನಿಲ್ದಾಣದ ಭವ್ಯತೆ

ಪಿಒಕೆಯಲ್ಲಿ ಉಗ್ರರ ಕ್ಯಾಂಪ್‌ ಗಳ  ಸಂಖ್ಯೆ 20ಕ್ಕೆ ಏರಿಕೆ : ಭದ್ರತಾ ಏಜೆನ್ಸಿಗಳಿಂದ ಪಡೆದ ಮಾಹಿತಿಯ ಪ್ರಕಾರ, ಅಫ್ಘಾನಿಸ್ತಾನವನ್ನು ತಾಲಿಬಾನ್ (Taliban)ಆಕ್ರಮಿಸಿಕೊಂಡ ನಂತರ, ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ನಲ್ಲಿರುವ ಭಯೋತ್ಪಾದಕ ಶಿಬಿರದಲ್ಲಿ ಕೋಲಾಹಲ ಉಂಟಾಗಿದೆ ಮತ್ತು ಅವರ ಮಾಸ್ಟರ್‌ಮೈಂಡ್‌ಗಳು ಭಯೋತ್ಪಾದಕರನ್ನು ಭಾರತಕ್ಕೆ ನುಸುಳಲು ಸಂಚು ರೂಪಿಸಿವೆ. ಝೀ ಮೀಡಿಯಾ ಪಡೆದ ವಿಶೇಷ ಮಾಹಿತಿಯ ಪ್ರಕಾರ, ಪಿಒಕೆಯಲ್ಲಿ ಮೂರು ಹೊಸ ಭಯೋತ್ಪಾದಕ ಶಿಬಿರಗಳನ್ನು ಸಕ್ರಿಯಗೊಳಿಸಲಾಗಿದೆ. ಈ ಕಾರಣದಿಂದಾಗಿ ಭಯೋತ್ಪಾದಕ ಶಿಬಿರಗಳ ಸಂಖ್ಯೆ ಈಗ 17 ರಿಂದ 20 ಕ್ಕೆ ಏರಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News