ಲಾಕ್ ಡೌನ್ ಹಿನ್ನಲೆಯಲ್ಲಿ 150 ಕಿ.ಮೀ ದೂರ ನಡೆದು ಸಾವನ್ನಪಿದ 12 ವರ್ಷದ ಬಾಲಕಿ

ಕೊರೊನಾವೈರಸ್ ಹಿನ್ನಲೆಯಲ್ಲಿ ಲಾಕ್ ಡೌನ್ ವಿಧಿಸಿದ್ದರಿಂದಾಗಿ 12 ವರ್ಷದ ಬಾಲಕಿ ತೆಲಂಗಾಣದಿಂದ ತನ್ನ ಸ್ಥಳೀಯ ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಗೆ ಸುಮಾರು 150 ಕಿ.ಮೀ ದೂರ ನಡೆದು ಸಾವನ್ನಪ್ಪಿದ್ದಾಳೆ.

Last Updated : Apr 21, 2020, 06:43 PM IST
ಲಾಕ್ ಡೌನ್ ಹಿನ್ನಲೆಯಲ್ಲಿ 150 ಕಿ.ಮೀ ದೂರ ನಡೆದು ಸಾವನ್ನಪಿದ 12 ವರ್ಷದ ಬಾಲಕಿ  title=
ಸಾಂದರ್ಭಿಕ ಚಿತ್ರ

ನವದೆಹಲಿ: ಕೊರೊನಾವೈರಸ್ ಹಿನ್ನಲೆಯಲ್ಲಿ ಲಾಕ್ ಡೌನ್ ವಿಧಿಸಿದ್ದರಿಂದಾಗಿ 12 ವರ್ಷದ ಬಾಲಕಿ ತೆಲಂಗಾಣದಿಂದ ತನ್ನ ಸ್ಥಳೀಯ ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಗೆ ಸುಮಾರು 150 ಕಿ.ಮೀ ದೂರ ನಡೆದು ಸಾವನ್ನಪ್ಪಿದ್ದಾಳೆ.

ತನ್ನ ಕುಟುಂಬಕ್ಕಾಗಿ ಸಂಪಾದಿಸಲು ಮೆಣಸಿನಕಾಯಿ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದ ಜಮ್ಲೋ ಮಕ್ಡಾಮ್ ಕುಸಿದು ಬಿದ್ದು ತನ್ನ ಹಳ್ಳಿಯಿಂದ ಕೇವಲ ಒಂದು ಗಂಟೆ ದೂರದಲ್ಲಿ ಸಾವನ್ನಪ್ಪಿದ್ದಾಳೆ.ಹೆತ್ತವರಿಗೆ ಏಕೈಕ ಮಗು ಆಗಿದ್ದ ಈ ಬಾಲಕಿ ಏಪ್ರಿಲ್ 15 ರಂದು ತೆಲಂಗಾಣದ ಹಳ್ಳಿಯೊಂದರಲ್ಲಿ ಎಂಟು ಮಹಿಳೆಯರು ಮತ್ತು ಅವರೊಂದಿಗೆ ಕೆಲಸ ಮಾಡುತ್ತಿದ್ದ ಇನ್ನೂ ಮೂರು ಮಕ್ಕಳೊಂದಿಗೆ ದೀರ್ಘ ಪ್ರಯಾಣಕ್ಕೆ ಹೊರಟಿದ್ದರು. ಈ ಗುಂಪು ಮೂರು ದಿನಗಳ ಕಾಲ ಹೆದ್ದಾರಿಯನ್ನು ತಪ್ಪಿಸಲು ಕಾಡು ದಾರಿ ಹಿಡಿದು ಕ್ರಮಿಸಿದ್ದರು.

ಶನಿವಾರ ಮಧ್ಯಾಹ್ನ ಜಮ್ಲೋ ಮನೆಯಿಂದ 14 ಕಿ.ಮೀ ದೂರದಲ್ಲಿದ್ದಾಗ, ಊಟದ ನಂತರ, ಅವಳ ಹೊಟ್ಟೆಯಲ್ಲಿ ತೀವ್ರವಾದ ನೋವು ಅನುಭವಿಸಿತು. ಕೊನೆಗೆ ಆಕೆಯ ಶವವನ್ನು ಸರ್ಕಾರಿ ಆಂಬ್ಯುಲೆನ್ಸ್‌ನಲ್ಲಿ ಆಕೆಯ ಮನೆಗೆ ಕೊಂಡೊಯ್ಯಲಾಯಿತು.ಆಕೆ ತೀವ್ರವಾಗಿ ನಿರ್ಜಲೀಕರಣ ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿದ್ದಳು ಎಂದು ವೈದ್ಯರು ಹೇಳುತ್ತಾರೆ. ಆಕೆಯ ಕರೋನವೈರಸ್ ಪರೀಕ್ಷೆಗಳು ನಕಾರಾತ್ಮಕವಾಗಿ ಹೊರಬಂದವು ಎಂದು ಹಿರಿಯ ಜಿಲ್ಲಾ ವೈದ್ಯಕೀಯ ಅಧಿಕಾರಿ ಬಿ.ಆರ್.ಪುಜಾರಿ ಹೇಳಿದರು.

ಬಾಲಕಿಯ ತಂದೆ ಆಂಡೋರಮ್ ಮಡ್ಕಾಮ್ ಅವರು ತೆಲಂಗಾಣದಲ್ಲಿ ಎರಡು ತಿಂಗಳಿನಿಂದ ಕೆಲಸ ಮಾಡುತ್ತಿದ್ದರು ಎಂದು ಹೇಳಿದರು."ಅವಳು ಮೂರು ದಿನಗಳ ಕಾಲ ನಡೆದಿದ್ದಳು. ಅವಳು ವಾಂತಿ ಮತ್ತು ಹೊಟ್ಟೆ ನೋವಿನಿಂದ ಬಳಲುತ್ತಿದ್ದಳು'  ಎಂದು ಅವರು ಹೇಳಿದರು. ಗುಂಪಿನ ಕೆಲವು ಸದಸ್ಯರು ಅವಳು ಚೆನ್ನಾಗಿ ಊಟ ಮಾಡುತ್ತಿರಲಿಲ್ಲ ಎಂದು ಹೇಳಿದರು. ಈಗ ಬಾಲಕಿಯ ಕುಟುಂಬಕ್ಕೆ ರಾಜ್ಯ ಸರ್ಕಾರ ಒಂದು ಲಕ್ಷ ರೂ.ಪರಿಹಾರ ಧನವನ್ನು ಘೋಷಿಸಿದೆ.
 

Trending News