ಕಾಶ್ಮೀರಕ್ಕೆ ಯುರೋಪಿಯನ್ ಸಂಸದೀಯ ನಿಯೋಗ ನೀಡಿರುವುದು ಖಾಸಗಿ ಭೇಟಿ-ಕೇಂದ್ರ ಸ್ಪಷ್ಟನೆ

ಇತ್ತೀಚೆಗೆ ಕಾಶ್ಮೀರಕ್ಕೆ ಭೇಟಿ ನೀಡಿದ ಯುರೋಪಿಯನ್ ಸಂಸದರ ನಿಯೋಗದ್ದು ಖಾಸಗಿ ಭೇಟಿ ಎಂದು ಕೇಂದ್ರ ಸರ್ಕಾರ ಬುಧವಾರ ಸಂಸತ್ತಿಗೆ ತಿಳಿಸಿದೆ.

Updated: Nov 20, 2019 , 05:07 PM IST
ಕಾಶ್ಮೀರಕ್ಕೆ ಯುರೋಪಿಯನ್ ಸಂಸದೀಯ ನಿಯೋಗ ನೀಡಿರುವುದು ಖಾಸಗಿ ಭೇಟಿ-ಕೇಂದ್ರ ಸ್ಪಷ್ಟನೆ
Photo courtesy: PTI(file photo)

ನವದೆಹಲಿ: ಇತ್ತೀಚೆಗೆ ಕಾಶ್ಮೀರಕ್ಕೆ ಭೇಟಿ ನೀಡಿದ ಯುರೋಪಿಯನ್ ಸಂಸದರ ನಿಯೋಗದ್ದು ಖಾಸಗಿ ಭೇಟಿ ಎಂದು ಕೇಂದ್ರ ಸರ್ಕಾರ ಬುಧವಾರ ಸಂಸತ್ತಿಗೆ ತಿಳಿಸಿದೆ.

ಆಡಳಿತ ಮತ್ತು ವಿರೋಧ ಪಕ್ಷಗಳು ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳಿಗೆ ಸೇರಿದ ಯುರೋಪಿಯನ್ ಪಾರ್ಲಿಮೆಂಟ್ (ಎಂಇಪಿ) ಯ 27 ಸದಸ್ಯರ ಗುಂಪು 2019 ರ ಅಕ್ಟೋಬರ್ 28 ರಿಂದ 2019 ರ ನವೆಂಬರ್ 1 ರವರೆಗೆ ದೆಹಲಿ ಮೂಲದ ಥಿಂಕ್ ಟ್ಯಾಂಕ್ ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ನಾನ್ಲೈನ್ಡ್ ಸ್ಟಡೀಸ್ ಆಹ್ವಾನದ ಮೇರೆಗೆ ಭಾರತಕ್ಕೆ ಖಾಸಗಿ ಭೇಟಿ ನೀಡಿದೆ ಎಂದು ಜಮ್ಮು ಮತ್ತು ಕಾಶ್ಮೀರ ಸರ್ಕಾರ ವರದಿ ಮಾಡಿದೆ.ಈ ವಿಚಾರವಾಗಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿ. ಕಿಶನ್ ರೆಡ್ಡಿ ರಾಜ್ಯಸಭೆಯಲ್ಲಿ ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಕಾಶ್ಮೀರ ಪ್ರವಾಸದ ವೆಚ್ಚವನ್ನು ಯಾವ ಸಂಸ್ಥೆ ಆಯೋಜಿಸಿದೆ ಮತ್ತು ಭರಿಸಿದೆ ಮತ್ತು ಅದನ್ನು ಸಂಘಟಿಸಿದ ಸಂಸ್ಥೆ ಕೇಂದ್ರ ಸರ್ಕಾರದ ಸಮನ್ವಯ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂದು ತಿಳಿಯಲು ಪ್ರಯತ್ನಿಸಿದ ಪ್ರಶ್ನೆಗಳಿಗೆ ಅವರು ಉತ್ತರಿಸುತ್ತಿದ್ದರು.

ಜಮ್ಮು-ಕಾಶ್ಮೀರ ವಿಷಯದಲ್ಲಿ ಯಾವುದೇ ಬಾಹ್ಯ ಹಸ್ತಕ್ಷೇಪಕ್ಕೆ ಅವಕಾಶ ನೀಡದಿರುವ ನೀತಿಯಿಂದ ಕೇಂದ್ರ ಸರ್ಕಾರ "ವಿಚಲಿತರಾಗಿದೆಯೆ" ಎಂಬ ಇನ್ನೊಂದು ಪ್ರಶ್ನೆಗೆ, ಉತ್ತರಿಸಿದ ಸಚಿವ ರೆಡ್ಡಿ ಅವರು ಪಾಕಿಸ್ತಾನದೊಂದಿಗಿನ ಸಮಸ್ಯೆಗಳು ಯಾವುದಾದರೂ ಇದ್ದರೆ ದ್ವಿಪಕ್ಷೀಯವಾಗಿ ಮಾತ್ರ ಚರ್ಚಿಸಲ್ಪಡುತ್ತವೆ ಎಂದು ತಿಳಿಸಿದರು.ಯಾವುದೇ ಮೂರನೇ ವ್ಯಕ್ತಿಯ ಪಾತ್ರ ಅಥವಾ ಮಧ್ಯಸ್ಥಿಕೆಗೆ ಯಾವುದೇ ಅವಕಾಶವಿಲ್ಲ" ಎಂದು ಸಚಿವರು ಹೇಳಿದರು.