ದಿನವೊಂದಕ್ಕೆ 15ಕೆಜಿ ಆಹಾರ ತಿನ್ನೋ ಮಹಾನುಭಾವ: ಈತನನ್ನು ಮದುವೆಗೆ ಕರೆಯಲು ಭಯಪಡ್ತಾರೆ ಜನ!

ಹೌದು, ಈ ಸುದ್ದಿ ನೋಡಿದ್ರೆ ಒಮ್ಮೆ ಶಾಕ್‌ ಆಗೋದು ಖಂಡಿತ. ಪ್ರತೀ ದಿನ ಮಾಂಸಾಹಾರ ಸೇವನೆ ಮಾಡುವ ಈ ವ್ಯಕ್ತಿಯ ಹೆಸರು ಮೊಹಮ್ಮದ್‌ ರಫೀಕ್‌ ಅದ್ನಾನ್‌. ವಯಸ್ಸು ಕೇವಲ 30 ವರ್ಷ. ಆದರೆ ಈತನ ಧಡೂತಿ ದೇಹ ಕಂಡರೆ ಎಲ್ಲರೂ ಬೆರಗಾಗೋದು ಖಂಡಿತ. 

Written by - Bhavishya Shetty | Last Updated : Jun 12, 2022, 01:43 PM IST
  • ದಿನಕ್ಕೆ 15 ಕೆಜಿ ಆಹಾರ ಸೇವಿಸುವ ವ್ಯಕ್ತಿ
  • 200 ಕೆಜಿ ತೂಕವಿರುವ ಮೊಹಮ್ಮದ್‌ ರಫೀಕ್‌ ಅದ್ನಾನ್‌
  • ಈತನ ವಯಸ್ಸು ಕೇವಲ 30 ವರ್ಷ
ದಿನವೊಂದಕ್ಕೆ 15ಕೆಜಿ ಆಹಾರ ತಿನ್ನೋ ಮಹಾನುಭಾವ: ಈತನನ್ನು ಮದುವೆಗೆ ಕರೆಯಲು ಭಯಪಡ್ತಾರೆ ಜನ!  title=
Mohmmad Rafiq Adnan

ಇಲ್ಲೊಬ್ಬ ವ್ಯಕ್ತಿ ದಿನಕ್ಕೆ 14ರಿಂದ 15ಕೆಜಿ ಆಹಾರ ಸೇವಿಸುತ್ತಾನಂತೆ. ಕೇಳೋದಿಕ್ಕೆ ಆಶ್ಚರ್ಯ ಆದ್ರೂ ಸತ್ಯ ಸಂಗತಿ. ಈತನ ತೂಕ ಕೇಳಿದ್ರೆ ದಂಗಾಗೋದು ನೀವು ಗ್ಯಾರಂಟಿ. ಬರೋಬ್ಬರಿ 200 ಕೆಜಿ ತೂಕ ಇರುವ ಈ ವ್ಯಕ್ತಿಗೆ ದಿನವೊಂದಕ್ಕೆ 3ಕೆಜಿ ಅನ್ನ, 4ಕೆಜಿ ರೊಟ್ಟಿ, 2 ಕೆಜಿ ಮಾಂಸ, 1.5ಕೆಜಿ ಮೀನು ಬೇಕಂತೆ. 

ಹೌದು, ಈ ಸುದ್ದಿ ನೋಡಿದ್ರೆ ಒಮ್ಮೆ ಶಾಕ್‌ ಆಗೋದು ಖಂಡಿತ. ಪ್ರತೀ ದಿನ ಮಾಂಸಾಹಾರ ಸೇವನೆ ಮಾಡುವ ಈ ವ್ಯಕ್ತಿಯ ಹೆಸರು ಮೊಹಮ್ಮದ್‌ ರಫೀಕ್‌ ಅದ್ನಾನ್‌. ವಯಸ್ಸು ಕೇವಲ 30 ವರ್ಷ. ಆದರೆ ಈತನ ಧಡೂತಿ ದೇಹ ಕಂಡರೆ ಎಲ್ಲರೂ ಬೆರಗಾಗೋದು ಖಂಡಿತ. 

ಇದನ್ನೂ ಓದಿ: PHOTOS: ಮಂತ್ರಾಲಯದ ರಾಯರ ಮಠಕ್ಕೆ ಭೇಟಿ ನೀಡಿದ ನಟ ಜಗ್ಗೇಶ್

ಈ ವ್ಯಕ್ತಿಗೆ ಒಂದಿಷ್ಟು ನಡೆದರೂ ಸಹ ಸುಸ್ತಾಗಿ ಏದುಸಿರು ಬಿಡಲು ಪ್ರಾರಂಭಿಸುತ್ತಾನಂತೆ. ಹೀಗಾಗಿ ಕೊಂಚ ದೂರ ನಡೆಯಬೇಕು ಎಂದರೂ ಸಹ ಬುಲೆಟ್‌ ಬೈಕ್‌ನಲ್ಲಿ ಪ್ರಯಾಣಿಸುತ್ತಾನೆ. ಅತಿಯಾದ ಆಹಾರ ಸೇವನೆಯಿಂದ ದೇಹದ ಗಾತ್ರವೂ ಹೆಚ್ಚಾಗಿದೆ.  ಅಷ್ಟೇ ಅಲ್ಲದೆ, ಈತನ ಆಹಾರ ಪದ್ಧತಿ ಕಂಡ ಜನರು ಯಾವುದೇ ಕಾರ್ಯಕ್ರಮಗಳಿಗೂ ಆಹ್ವಾನ ನೀಡಲ್ವಂತೆ. 

ಅತಿಯಾದ ಬೊಜ್ಜು ಇರೋ ಕಾರಣದಿಂದ ರಫೀಕ್‌ಗೆ ಮಕ್ಕಳಾಗಿಲ್ಲ. ಹೀಗಾಗಿ ಎರಡನೇ ಮದುವೆಯನ್ನು ಸಹ ಆಗಿದ್ದಾರೆ. ಅಷ್ಟೇ ಅಲ್ಲದೆ, ಈತನಿಗೆ ಊಟವನ್ನು ತಯಾರಿಸಲು ಇಬ್ಬರು ಹೆಂಡತಿಯರಿಂದಲೂ ಸಾಧ್ಯವಾಗುತ್ತಿಲ್ಲವಂತೆ. ಇನ್ನು ಬೀದಿಯಲ್ಲಿ ತೆರಳುವಾಗ ರಫೀಕ್‌ ಅವರ ದೇಹವನ್ನು ಕಂಡು ಜನರು ನಗುತ್ತಾರೆ. ಈ ಎಲ್ಲಾ ವಿಚಾರಗಳು ರಫೀಕ್‌ರನ್ನು ತೀವ್ರ ನೋವಿಗೆ ಈಡುಮಾಡಿದೆ. 

ರಫೀಕ್‌ ಅವರು ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿದ್ದರೂ ಸಹ ಅವರಿಗೆ ಬುಲಿಮಿಯಾ ನೆರ್ವೊಸಾ ಎಂಬ ಖಾಯಿಲೆಯಿಂದ ಬಳಲುತ್ತಿದ್ದಾರೆ. ಈ ರೋಗದಿಂದ ಬಳಲುವವರು ಹೆಚ್ಚು ಆಹಾರ ಸೇವನೆ ಮಾಡುತ್ತಾರೆ ಎಂದು ವೈದ್ಯರೊಬ್ಬರು ಹೇಳಿದ್ದಾರೆ. ಅಂತೆಯೇ ರಫೀಕ್‌ ದಿನವೊಂದಕ್ಕೆ 14ರಿಂದ 15 ಕೆಜಿ ಆಹಾರ ಸೇವನೆ ಮಾಡುತ್ತಾರೆ. 

ಇದನ್ನೂ ಓದಿ: IMDb Top Rated Web Series: ಇದೇ ನೋಡಿ ಅತಿಹೆಚ್ಚು ರೇಟಿಂಗ್ ಪಡೆದ ವೆಬ್ ಸೀರೀಸ್

ದೇಹದ ಬೊಜ್ಜು ಕಡಿಮೆ ಮಾಡಬೇಕು ಎಂದು ರಫೀಕ್‌ ಪ್ರಯತ್ನಿಸಿದರೂ ಸಾಧ್ಯವಾಗುತ್ತಿಲ್ಲ. ಅದಕ್ಕೆ ಕಾರಣ ಅವರಿಗೆ ಇರುವ ಆರೋಗ್ಯ ಸಮಸ್ಯೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News