ಆಧಾರ್ ಸಾಫ್ಟ್ ವೇರ್ ಹ್ಯಾಕ್, 2500 ರೂ ಕೊಟ್ರೆ ಪೂರ್ತಿ ಮಾಹಿತಿ ಲಭ್ಯ- ವರದಿ

ಇನ್ನು ಮುಂದೆ ಆಧಾರ ಕಾರ್ಡ್ ನಲ್ಲಿರುವ ಯಾವ ಮಾಹಿತಿಯು ಸುರಕ್ಷಿತವಲ್ಲ ಎಂದು ಹಫಿಂಗ್ತಾನ್ ಇಂಡಿಯಾ ನಡೆಸಿದ ಮೂರು ತಿಂಗಳ ತನಿಖೆಯಿಂದ ತಿಳಿದುಬಂದಿದೆ.

Last Updated : Sep 11, 2018, 03:55 PM IST
ಆಧಾರ್ ಸಾಫ್ಟ್ ವೇರ್ ಹ್ಯಾಕ್, 2500 ರೂ ಕೊಟ್ರೆ ಪೂರ್ತಿ ಮಾಹಿತಿ ಲಭ್ಯ- ವರದಿ title=

ನವದೆಹಲಿ: ಇನ್ನು ಮುಂದೆ ಆಧಾರ ಕಾರ್ಡ್ ನಲ್ಲಿರುವ ಯಾವ ಮಾಹಿತಿಯು ಸುರಕ್ಷಿತವಲ್ಲ ಎಂದು ಹಫಿಂಗ್ತಾನ್ ಇಂಡಿಯಾ ನಡೆಸಿದ ಮೂರು ತಿಂಗಳ ತನಿಖೆಯಿಂದ ತಿಳಿದುಬಂದಿದೆ.

ಆ ಮೂಲಕ ಆಧಾರ ಡಾಟಾ ಸುರಕ್ಷಿತವಲ್ಲ ಎನ್ನುವುದನ್ನು ಮತ್ತೊಮ್ಮೆ ಧೃಡಪಟ್ಟಿದೆ.ಆಧಾರ ಗುರುತಿನ ಡಾಟಾಬೇಸ್ ನ್ನು ಇತರ ಖಾಸಗಿ ವ್ಯಕ್ತಿಗಳು ಉಪಯೋಗಿಸಬೇಕಾದರೆ ಅದಕ್ಕೆ  ಕೇವಲ 2500 ರೂಪಾಯಿಗಳನ್ನು ನೀಡಿದರೆ ಸಾಕು ಎನ್ನಲಾಗುತ್ತದೆ.ಆ ಮೂಲಕ ಜಗತ್ತಿನ ಯಾವುದೇ ಭಾಗದಲ್ಲಿರುವ ವ್ಯಕ್ತಿಯೂ ಸಹಿತ ಉಪಯೋಗಿಸಬಹುದು ಎನ್ನಲಾಗಿದೆ.

ಆ ಮೂಲಕ ವ್ಯಕ್ತಿಯೂಬ್ಬನ ಬಯೋಮೆಟ್ರಿಕ್ ಮಾಹಿತಿಗಳನ್ನು ಇತರರು ಕೂಡ ಪಡೆಯಬಹುದು ಎಂದು ಹೇಳಲಾಗಿದೆ. ಹಫಿಂಗ್ತಾನ್ ಪೋಸ್ಟ್ ತನ್ನ ವರದಿಯಲ್ಲಿ ಪ್ರಸ್ತಾಪಿಸಿರುವಂತೆ ಕಡಿಮೆ ಮೊತ್ತಕ್ಕೆ ಲಭ್ಯವಾಗುತ್ತಿರುವ ಪ್ಯಾಚಗಳು ಆಧಾರ ಕಾರ್ಡ್ ನಲ್ಲಿನ ಮಾಹಿತಿ ರಕ್ಷಣೆಗೆ ಧಕ್ಕೆಯನ್ನು ತರಲಿದೆ ಎಂದು ಅಕ್ಸೆಸ್ ನೌನಲ್ಲಿ  ಮುಖ್ಯ ತಂತ್ರಜ್ನರಾಗಿರುವ  ಗುಸ್ತಾಫ್ ಬ್ಜೋರ್ಕ್ಸ್ತೆನ್ ತಿಳಿಸಿದ್ದಾರೆ. 

ವರದಿಯಲ್ಲಿ ಇನ್ನು ಮುಂದುವರೆದು ಈ ಹ್ಯಾಕ್ ಮೂಲಕ ಐರಿಸ್ ಮತ್ತು ಮುಖವನ್ನು ಗುರುತು ಹಿಡಿಯುವಂತಹ ಎಲ್ಲ ವಿಧಾನಗಳನ್ನು ಅದು ಅದೃಶ್ಯ ಮಾಡಲಿದೆ.ಇನ್ನು ಲಾಗಿನ್ ಸಮಯವನ್ನು ಸಹ ಅದು ವಿಸ್ತರಿಸಲು ಸಹಾಯ ಮಾಡಲಿದೆ ಎಂದು ಹಫಿಂಗ್ತಾನ್ ಪೋಸ್ಟ್ ತನಿಖೆಯ ಮೂಲಕ ತಿಳಿದುಬಂದಿದೆ.

Trending News