Sanjay Singh: ಜೈಲಿನಲ್ಲಿರುವ AAP ನಾಯಕ ಸಂಜಯ್ ಸಿಂಗ್ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸುವಂತಿಲ್ಲ!

Aam Aadmi Party leader Sanjay Singh MP: ಜೈಲಿನಲ್ಲಿರುವ ಆಮ್ ಆದ್ಮಿ ಪಕ್ಷದ (AAP) ನಾಯಕ ಸಂಜಯ್ ಸಿಂಗ್ ಸೋಮವಾರ ೨ನೇ ಬಾರಿಗೆ ರಾಜ್ಯಸಭಾ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಲು ಸಾಧ್ಯವಾಗಲಿಲ್ಲ. ಅವರ ವಿರುದ್ಧದ ಪ್ರಕರಣವು ವಿಶೇಷಾಧಿಕಾರಗಳ ಸಮಿತಿಯ ಮುಂದೆ ಬಾಕಿಯಿದೆ ಎಂದು ರಾಜ್ಯಸಭೆಯ ಮೂಲಗಳು ತಿಳಿಸಿವೆ.

Written by - Puttaraj K Alur | Last Updated : Feb 5, 2024, 05:10 PM IST
  • ಕೋರ್ಟ್ ಅನುಮತಿ ನೀಡಿದರೂ ಆಪ್ ಸಂಜಯ್ ಸಿಂಗ್ ಪ್ರಮಾಣವಚನ ತಡೆದ ರಾಜ್ಯಸಭಾ ಅಧ್ಯಕ್ಷ!
  • ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಾಗದ ಎಎಪಿ ನಾಯಕ ಸಂಜಯ್ ಸಿಂಗ್!
  • ದೆಹಲಿ ಅಬಕಾರಿ ನೀತಿ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯದ ವಶದಲ್ಲಿರುವ ಸಂಜಯ್‌ ಸಿಂಗ್
Sanjay Singh: ಜೈಲಿನಲ್ಲಿರುವ AAP ನಾಯಕ ಸಂಜಯ್ ಸಿಂಗ್ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸುವಂತಿಲ್ಲ! title=
ಸಂಜಯ್ ಸಿಂಗ್ ಪ್ರಮಾಣವಚನಕ್ಕೆ ಬ್ರೇಕ್!

AAP Leader Sanjay Singh News: ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಅನುಮತಿ ನೀಡಿದರೂ ಆಪ್ ನಾಯಕ ಸಂಜಯ್ ಸಿಂಗ್ ಪ್ರಮಾಣವಚನ ಸ್ವೀಕರಿಸುವುದಕ್ಕೆ ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಕರ್ ಬ್ರೇಕ್‌ ಹಾಕಿದ್ದಾರೆ. ಜೈಲಿನಲ್ಲಿರುವ ಆಮ್ ಆದ್ಮಿ ಪಕ್ಷದ (AAP) ನಾಯಕ ಸಂಜಯ್ ಸಿಂಗ್ ಸೋಮವಾರ ೨ನೇ ಬಾರಿಗೆ ರಾಜ್ಯಸಭಾ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಲು ಸಾಧ್ಯವಾಗಲಿಲ್ಲ. ಅವರ ವಿರುದ್ಧದ ಪ್ರಕರಣವು ವಿಶೇಷಾಧಿಕಾರಗಳ ಸಮಿತಿಯ ಮುಂದೆ ಬಾಕಿಯಿದೆ ಎಂದು ರಾಜ್ಯಸಭೆಯ ಮೂಲಗಳು ತಿಳಿಸಿವೆ.

ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ED) ವಶದಲ್ಲಿರುವ ಸಂಜಯ್‌ ಸಿಂಗ್ ಅವರು ಪ್ರಮಾಣ ವಚನ ಸ್ವೀಕರಿಸಲು ಮತ್ತು ನಡೆಯುತ್ತಿರುವ ಬಜೆಟ್ ಅಧಿವೇಶನಕ್ಕೆ ಹಾಜರಾಗಲು ಸಾಧ್ಯವಾಗುವಂತೆ ನ್ಯಾಯಾಲಯದ ಮೊರೆ ಹೋಗಿದ್ದರು. ಬಂಧನದಲ್ಲಿರುವಾಗಲೇ ಪ್ರಮಾಣ ವಚನ ಸ್ವೀಕರಿಸಲು ನ್ಯಾಯಾಲಯ ಅನುಮತಿ ನೀಡಿತ್ತು. ಎಎಪಿ ಮೂಲದ ಪ್ರಕಾರ, ಸಿಂಗ್ ಅವರನ್ನು ಸೋಮವಾರ ಸಂಸತ್ ಭವನಕ್ಕೆ ಕರೆತರಲಾಯಿತು, ಆದರೆ ಪ್ರಮಾಣ ವಚನ ಸ್ವೀಕರಿಸಲು ಅವಕಾಶ ಸಿಗದಿದ್ದಾಗ ಅವರು ಬೇಸರದಿಂದಲೇ ಜೈಲಿಗೆ ಮರಳಿದರು.

ಸದನದ ಸಮಿತಿಯು ಸಂಜಯ್ ಸಿಂಗ್ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಭಾದ್ಯತೆಗಳ ಕುರಿತು ತನಿಖೆ ನಡೆಸುತ್ತಿದೆ. ಈ ಸಮಿತಿ ವರದಿ ಬಳಿಕವೇ ಮುಂದಿನ ನಿರ್ಧಾರ ಪ್ರಕಟಿಸುವುದಾಗಿ ಜಗದೀಪ್ ಧನ್ಕರ್ ಹೇಳಿದ್ದಾರೆ. ರಾಜ್ಯಸಭಾ ಅಧ್ಯಕ್ಷ ಪೀಠಕ್ಕೆ ಅಗೌರವ ತೋರಿದ ಸಂಜಯ್ ಸಿಂಗ್‌ರನ್ನು 2023ರ ಜುಲೈ ತಿಂಗಳಲ್ಲಿ ರಾಜ್ಯಸಭೆಯಿಂದ ಅಮಾನತು ಮಾಡಲಾಗಿತ್ತು. ಇದಾದ ಬಳಿಕ ದೆಹಲಿಯ ಅಬಕಾರಿ ಹಗರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಸಂಜಯ್ ಸಿಂಗ್‌ರನ್ನು ಬಂಧಿಸಿತ್ತು. ಕಳೆದ ತಿಂಗಳು ಅವಧಿ ಮುಗಿಯುತ್ತಿದ್ದ ರಾಜ್ಯಸಭಾ ಸಂಸದರ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ರಾಜ್ಯಸಭೆಯಲ್ಲಿ ನಡೆದ ಚುನಾವಣೆಯಲ್ಲಿ ಆಪ್‌ನ ಮೂವರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರು. 

ಇದನ್ನೂ ಓದಿ: Hindu Mythology: ಕೃಷ್ಣನ ಸಾವು ಮತ್ತು ದ್ವಾರಕೆಯ ನಾಶ..! ಆ ತಾಯಿಯ ಕಣ್ಣೀರೇ ಕಾರಣ..

ದೆಹಲಿಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಸ್ವಾತಿ ಮಲಿವಾಲ್‌ ಹಾಗೂ ಎನ್‌.ಡಿ.ಗುಪ್ತಾ ಮತ್ತು ಸಂಜಯ್‌ ಸಿಂಗ್‌ ಆಯ್ಕೆಯಾಗಿದ್ದರು. ಈ ಮೂವರ ವಿರುದ್ಧ ಯಾವುದೇ ಅಭ್ಯರ್ಥಿ ಇಲ್ಲದ ಕಾರಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆದರೆ ಜೈಲು ಪಾಲಾಗಿದ್ದ ಸಂಜಯ್ ಸಿಂಗ್ ಕೋರ್ಟ್ ಅನುಮತಿ ಪಡೆದು ಪ್ರಮಾಣವಚನಕ್ಕೆ ಆಗಮಿಸಿದ್ದರು. ಆದರೆ ಕೋರ್ಟ್‌ ಅನುಮತಿ ನೀಡಿದರೂ ಸಹ ಸಂಜಯ್‌ ಸಿಂಗ್‌ಗೆ ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಕರ್ ಅವರು ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಲು ಅನುಮತಿ ನಿರಾಕರಿಸಿದರು. ಸದನದ ಸಮಿತಿ ವರದಿ ಬಳಿಕವೇ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ. 

ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ ಎಎಪಿ ವಕ್ತಾರ ಸೌರಭ್ ಭಾರದ್ವಾಜ್, ʼರಾಜ್ಯಸಭೆಯ ಅಧ್ಯಕ್ಷರು ಈ ದೇಶದ ಸಾಂವಿಧಾನಿಕ ನಿಬಂಧನೆಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಸಂವಿಧಾನದ 99ನೇ ವಿಧಿಯು ಪ್ರಮಾಣ ವಚನ ಬೋಧಿಸಲಾಗುವುದು, ಪ್ರತಿಯೊಬ್ಬ ಸದಸ್ಯರು ಪ್ರಮಾಣ ವಚನ ಸ್ವೀಕರಿಸಬೇಕು ಎಂದು ಹೇಳುತ್ತದೆ. ಇದರರ್ಥ ಅದು ಆಗಬೇಕು. ಈ ಸವಲತ್ತುಗಳ ವಿಷಯವು ಅವರ ಸದಸ್ಯತ್ವಕ್ಕೆ ಸಂಬಂಧಿಸಿದೆ, ಅದು ಈಗಾಗಲೇ ಅವಧಿ ಮೀರಿದೆʼ ಎಂದು ಹೇಳಿದ್ದಾರೆ.

ʼಅಮಾನತುಗೊಳಿಸುವ ಬದಲು, ಅವರನ್ನು ಹೊರಹಾಕಲಾಯಿತು ಅಥವಾ ಅವರ ಸದಸ್ಯತ್ವವನ್ನು ಕಸಿದುಕೊಳ್ಳಲಾಯಿತು ಎಂದು ಪರಿಗಣಿಸಲಾಗಿದ್ದರೂ ಸಹ ರಾಜ್ಯಸಭೆಯ ಅಧ್ಯಕ್ಷರು ವಿಶೇಷಾಧಿಕಾರ ಸಮಿತಿಯ ಮೂಲಕ ಮಾಡಬಹುದಾದ ಕೆಲಸ ಮಾಡಿಲ್ಲ. ರಾಜ್ಯಸಭೆಯಲ್ಲಿ ಸಿಂಗ್ ಅವರ ಅಧಿಕಾರಾವಧಿ ಮುಗಿದಿದೆ. ಇದು ಹೊಸ ಅಧಿಕಾರಾವಧಿ. ಹೀಗಾಗಿ ಹೊಸ ಅವಧಿಗೆ ಪ್ರಮಾಣ ವಚನ ಸ್ವೀಕರಿಸುವ ಅವಕಾಶವನ್ನು ನಿರಾಕರಿಸುವಂತಿಲ್ಲʼವೆಂದು ಅವರು ಹೇಳಿದ್ದಾರೆ.   

ಇದನ್ನೂ ಓದಿ: ಏಕರೂಪ ನಾಗರಿಕ ಸಂಹಿತೆಗೆ ಅಸ್ತು ಎಂದ ಕ್ಯಾಬಿನೆಟ್: ಈ ರಾಜ್ಯದಲ್ಲಿ ಮೊದಲ ಬಾರಿಗೆ ಜಾರಿಯಾಗಲಿದೆ UCC!

ʼಈಗ ನಾನು ನೈತಿಕತೆಯ ಸ್ಥಾನಕ್ಕೆ ಬಂದಿದ್ದೇನೆ. ವಿಶೇಷಾಧಿಕಾರ ಸಮಿತಿಗೆ ವಿಷಯ ನೀಡಿ ಸಮಿತಿ ತೀರ್ಮಾನಿಸುವವರೆಗೆ ಸದಸ್ಯರನ್ನು ಅಮಾನತು ಮಾಡಿ ಎಂದು ನನ್ನ ಇಡೀ ಜೀವನದಲ್ಲೀಯೇ ಕೇಳಿಲ್ಲ. ಈ ರೀತಿಯಾಗಿ, ನೀವು ಸದಸ್ಯರನ್ನು ಅಮಾನತುಗೊಳಿಸುತ್ತೀರಾ? ವಿಶೇಷಾಧಿಕಾರ ಸಮಿತಿಯು 30 ದಿನಗಳಲ್ಲಿ ವಿಷಯವನ್ನು ನಿರ್ಧರಿಸಬೇಕು, ಇದು ಕಾನೂನು. ನಿಮ್ಮ ಸಮಿತಿಯು ಎಂದಿಗೂ ನಿರ್ಧರಿಸುವುದಿಲ್ಲ ಮತ್ತು ಸದಸ್ಯರು ಯಾವಾಗಲೂ ತಮ್ಮ ಜೀವನದುದ್ದಕ್ಕೂ ಸಂಸತ್ತಿನಿಂದ ಹೊರಗುಳಿಯುತ್ತಾರೆʼ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News