Aapka Ram Rajya : ರಾಮನವಮಿಯಂದು ಎಎಪಿ ಪಕ್ಷದಿಂದ ಕಾರ್ಯವೈಖರಿ ಪ್ರದರ್ಶಿಸಲು ವೆಬ್ ಸೈಟ್ ಆರಂಭ

AAP Website : ಲೋಕಸಭಾ ಚುನಾವಣೆ ಹಿನ್ನೆಲೆ ಆಮ್ ಆದ್ಮಿ ಪಕ್ಷವು (ಎಎಪಿ) ತನ್ನ ಕಾರ್ಯವೈಖರಿ ಪ್ರದರ್ಶನಕ್ಕೆ 'ಆಪ್ ಕಾ ರಾಮ್ ರಾಜ್ಯ' ವೆಬ್‌ಸೈಟ್ ಅನ್ನು ಪ್ರಾರಂಭಿಸಿದೆ.  

Written by - Zee Kannada News Desk | Last Updated : Apr 17, 2024, 04:55 PM IST
  • ವೆಬ್‌ಸೈಟ್ ಬಿಡುಗಡೆಯ ಸಂದರ್ಭದಲ್ಲಿ, ಸಿಂಗ್, ಅತಿಶಿ, ಸೌರಭ್ ಭಾರದ್ವಾಜ್ ಮತ್ತು ಜಾಸ್ಮಿನ್ ಶಾ ಉಪಸ್ಥಿತರಿದ್ದರು.
  • ರಾಜ್ಯದಲ್ಲಿನ ಶಿಕ್ಷಣ, ವಿದ್ಯುತ್, ನೀರಿನ ಸಂಪರ್ಕ ಮುಂತಾದ ಕ್ಷೇತ್ರಗಳಲ್ಲಿ ಪಕ್ಷ ಮಾಡಿರುವ ಕಾರ್ಯಗಳನ್ನು ಈ ಆಪ್ ಪ್ರದರ್ಶಿಸುತ್ತದೆ
  • ಲೋಕಸಭಾ ಚುನಾವಣೆ ಹಿನ್ನೆಲೆ ಆಮ್ ಆದ್ಮಿ ಪಕ್ಷವು (ಎಎಪಿ) ತನ್ನ ಕಾರ್ಯವೈಖರಿ ಪ್ರದರ್ಶನಕ್ಕೆ 'ಆಪ್ ಕಾ ರಾಮ್ ರಾಜ್ಯ' ವೆಬ್‌ಸೈಟ್ ಅನ್ನು ಪ್ರಾರಂಭಿಸಿದೆ
Aapka Ram Rajya  : ರಾಮನವಮಿಯಂದು ಎಎಪಿ ಪಕ್ಷದಿಂದ ಕಾರ್ಯವೈಖರಿ ಪ್ರದರ್ಶಿಸಲು ವೆಬ್ ಸೈಟ್ ಆರಂಭ title=

Aap ka Raam Raajya :  2024 ರ ಲೋಕಸಭಾ ಚುನಾವಣೆಗೆ ಕೇವಲ ಎರಡು ದಿನಗಳ ಮೊದಲು, ಆಮ್ ಆದ್ಮಿ ಪಕ್ಷ (ಎಎಪಿ) ದೆಹಲಿ ಮತ್ತು ಪಂಜಾಬ್‌ನಲ್ಲಿ ಪಕ್ಷದ ಕೆಲಸವನ್ನು ಪ್ರದರ್ಶಿಸಲು " ಆಪ್ ಕಾ ರಾಮ್ ರಾಜ್ಯ " ಎಂಬ ವೆಬ್‌ಸೈಟ್ ಅನ್ನು ಇಂದು ಪ್ರಾರಂಭಿಸಿದೆ. 

ಇದನ್ನು ಓದಿ : Viral Video: ಕಾರಿನಲ್ಲಿ ಮತ್ತೊಬ್ಬ ವ್ಯಕ್ತಿಯೊಂದಿಗಿದ್ದ ಪತ್ನಿ, ಬ್ಯಾಟ್‌ನಿಂದ ಥಳಿಸಿದ ಪತಿ..! 

ರಾಜ್ಯದಲ್ಲಿನ ಶಿಕ್ಷಣ, ವಿದ್ಯುತ್, ನೀರಿನ ಸಂಪರ್ಕ ಮುಂತಾದ ಕ್ಷೇತ್ರಗಳಲ್ಲಿ ಪಕ್ಷ ಮಾಡಿರುವ ಕಾರ್ಯಗಳನ್ನು ಈ ಆಪ್ ಪ್ರದರ್ಶಿಸುತ್ತದೆ.

ದೆಹಲಿ ಮತ್ತು ಪಂಜಾಬ್ ನಲ್ಲಿ  ಶಿಕ್ಷಣ, ವಿದ್ಯುತ್, ನೀರು ಸಂಪರ್ಕ ಮುಂತಾದ ಕ್ಷೇತ್ರಗಳಲ್ಲಿ ಪಕ್ಷದ ಸರ್ಕಾರ ಮಾಡಿರುವ ಕೆಲಸಗಳನ್ನು ವೆಬ್‌ಸೈಟ್ ಪ್ರದರ್ಶಿಸಲಿದೆ ಎಂದು ಆಪ್ ಮುಖಂಡರು ತಿಳಿಸಿದ್ದಾರೆ.

ಈ ಹೊಸ " ಆಪ್ ಕಾ ರಾಮ್ ರಾಜ್ಯ " ವೆಬ್ ಸೈಟ್  ಅನ್ನು ಆಮ್ ಆದ್ಮಿ ಪಕ್ಷ ರಾಮ ನವಮಿಯಂದು ಬಿಡುಗಡೆ ಗೊಳಿಸಿದ್ದಾರೆ 

ಪತ್ರಿಕಾ ಹೇಳಿಕೆಯಲ್ಲಿ, ರಾಜ್ಯಸಭಾ ಸಂಸದ ಸಂಜಯ್ ಸಿಂಗ್, “ಮುಖ್ಯಮಂತ್ರಿ ಕೇಜ್ರಿವಾಲ್ ಕಳೆದ 10 ವರ್ಷಗಳಲ್ಲಿ ‘ರಾಮ ​​ರಾಜ್ಯ’ ಸಾಕಾರಕ್ಕಾಗಿ ಉತ್ತಮ ಶಾಲೆಗಳು, ಮೊಹಲ್ಲಾ ಚಿಕಿತ್ಸಾಲಯಗಳು, ಉಚಿತ ನೀರು ಮತ್ತು ವಿದ್ಯುತ್ ಮತ್ತು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಅದ್ಭುತವಾದ ಕೆಲಸಗಳನ್ನು ಮಾಡಿದ್ದಾರೆ. AAP ರಾಷ್ಟ್ರ ರಾಜಧಾನಿಯಲ್ಲಿ ಸರಿಸುಮಾರು 10 ವರ್ಷಗಳಿಂದ ಮತ್ತು ಪಂಜಾಬ್‌ನಲ್ಲಿ ಎರಡು ವರ್ಷಗಳಿಂದ ಅಧಿಕಾರದಲ್ಲಿದೆ ಎಂದು ಹೇಳಿದರು. 

ರಾಮರಾಜ್ಯದ ನಮ್ಮ ಕಲ್ಪನೆಯನ್ನು ನೋಡಲು ಬಯಸುವವರು ನಮ್ಮ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ದೆಹಲಿ ಮತ್ತು ಪಂಜಾಬ್‌ನಲ್ಲಿ ನಾವು ಯಾವ ಕೆಲಸ ಮಾಡಿದ್ದೇವೆ? ನೀವು ಎಲ್ಲವನ್ನೂ ನೋಡಿ ನಂತರ ನಮ್ಮೊಂದಿಗೆ ನೀವು ಸೇರಿಕೊಳ್ಳಬಹುದು" ಎಂದು ಸಂಜಯ್ ಸಿಂಗ್ ಮಾತನಾಡಿದರು. 

ದೇಶದ ಜನರಿಗೆ ಸರಿಯಾದ ಸ್ಥಳದಲ್ಲಿ ಮತ ಚಲಾಯಿಸಿದರೆ ಏನು ಮಾಡಬಹುದು ಎಂಬುದನ್ನು ತೋರಿಸಲು ಪಕ್ಷವು ರಾಮರಾಜ್ಯವನ್ನು ಆಧರಿಸಿ ವೆಬ್‌ಸೈಟ್ ಅನ್ನು ಪ್ರಾರಂಭಿಸಿದೆ ಎಂದು ಅತಿಶಿ ಗಮನಸೆಳೆದರು.

ಇದನ್ನು ಓದಿ : ಕಾಂತಿಯುತ ತ್ವಚೆಗಾಗಿ ಮನೆಯಲ್ಲೇ ಸುಲಭವಾಗಿ ತಯಾರಿಸಿ ಕಡಲೆ ಹಿಟ್ಟಿನ ಫೇಸ್‌ ಪ್ಯಾಕ್‌!

ವೆಬ್‌ಸೈಟ್ ಬಿಡುಗಡೆಯ ಸಂದರ್ಭದಲ್ಲಿ, ಸಿಂಗ್, ಅತಿಶಿ, ಸೌರಭ್ ಭಾರದ್ವಾಜ್ ಮತ್ತು ಜಾಸ್ಮಿನ್ ಶಾ ಉಪಸ್ಥಿತರಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News