ದೆಹಲಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ವಿಫಲರಾದ ಅರವಿಂದ್ ಕೇಜ್ರಿವಾಲ್!

ರ್ಯಾಲಿ ಸಂದರ್ಭದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜನರು ನೀಡಿದ ಬೆಂಬಲಕ್ಕೆ ಧನ್ಯವಾದಗಳನ್ನು ಅರ್ಪಿಸಿದರು ಮತ್ತು ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ(AAP) ಮತ ಚಲಾಯಿಸುವಂತೆ ಒತ್ತಾಯಿಸಿದರು.  

Last Updated : Jan 21, 2020, 06:28 AM IST
ದೆಹಲಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ವಿಫಲರಾದ ಅರವಿಂದ್ ಕೇಜ್ರಿವಾಲ್!  title=

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸೋಮವಾರ ಬೃಹತ್ ರೋಡ್ ಶೋಗೆ ನಾಂದಿ ಹಾಡಿದರು.  ಆದರೆ ದೆಹಲಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಅರವಿಂದ್ ಕೇಜ್ರಿವಾಲ್(Arvind Kejriwal)  ವಿಫಲರಾಗಿದ್ದಾರೆ.

ಹೌದು, 2020 ರ ಫೆಬ್ರವರಿ 8ರಂದು ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆ (Delhi Assembly elections 2020)ಗೆ ನಾಮಪತ್ರ ಸಲ್ಲಿಸಲು ಜನವರಿ 21 ಕೊನೆಯದಿನವಾಗಿದೆ.  ಈ ಹಿನ್ನೆಲೆಯಲ್ಲಿ ಜನವರಿ 20ರಂದು ರೋಡ್ ಶೋ ನಡೆಸಿ ನವದೆಹಲಿ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲು ಮುಂದಾಗಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಬೃಹತ್ ರೋಡ್ ಶೋ ನಡೆಸಿ ನಾಮಪತ್ರ ಸಲ್ಲಿಸಲು ಚುನಾವಣಾ ಅಧಿಕಾರಿಗಳ ಕಚೇರಿಗೂ ತೆರಳಿದ್ದರು. ಆದರೆ ಅಲ್ಲಿ ಆಗಿದ್ದೆ ಬೇರೆ. ವಾಸ್ತವವಾಗಿ ಅರವಿಂದ್ ಕೇಜ್ರಿವಾಲ್ ತಮ್ಮ ನಾಮಪತ್ರ ಸಲ್ಲಿಕೆ ವೇಳೆ ಕರೆ ನೀಡಿದ್ದ ರೋಡ್ ಶೋಗೆ ನಿರೀಕ್ಷೆಗಿಂತ ಹೆಚ್ಚು ಸಮಯ ತೆಗೆದುಕೊಂಡಿದ್ದರಿಂದ ಸಮಯಕ್ಕೆ ಸರಿಯಾಗಿ ಚುನಾವಣಾ ಅಧಿಕಾರಿಗಳ ಕಚೇರಿಗೆ ತಲುಪಲು ಸಾಧ್ಯವಾಗದ ಕಾರಣ ಅನಿವಾರ್ಯವಾಗಿ ನಾಮಪತ್ರ ಸಲ್ಲಿಸದೆಯೇ ಹಿಂದಿರುಗಬೇಕಾಯಿತು.

ಬಳಿಕ ಮಾತನಾಡಿದ ಅರವಿಂದ್ ಕೇಜ್ರಿವಾಲ್, "ನಾನು ಇಂದು(ಜನವರಿ 20) ನನ್ನ ನಾಮನಿರ್ದೇಶನವನ್ನು ಸಲ್ಲಿಸಬೇಕಿತ್ತು. ಆದರೆ ಈಗಾಗಲೇ ಮಧ್ಯಾಹ್ನ 3 ಗಂಟೆಯಾಗಿದೆ ಮತ್ತು ಮಧ್ಯಾಹ್ನ 3 ರ ಹೊತ್ತಿಗೆ ಕಚೇರಿ ಮುಚ್ಚಲ್ಪಡುತ್ತದೆ. ಅದಕ್ಕೂ ಮೊದಲೇ ನಾಮಪತ್ರ ಸಲ್ಲಿಸಬೇಕು ಎಂದು ಅಧಿಕಾರಿಗಳು ನನಗೆ ತಿಳಿಸಿದರು. ಆದರೆ ನಾನು ಅವರನ್ನು (ರೋಡ್ ಶೋನಲ್ಲಿ ಭಾಗಿಯಾಗಿದ್ದ ಜನರನ್ನು) ಬಿಟ್ಟು ಹೇಗೆ ಹೋಗಬಹುದು ಎಂದು ಹೇಳಿದೆ. ಅದಾಗ್ಯೂ ಕಛೇರಿ ವೇಳೆ ಮುಗಿದಿದ್ದರಿಂದ ನಾನು ಜನವರಿ 21(ಮಂಗಳವಾರ) ನಾಮಪತ್ರ ಸಲ್ಲಿಸಲಿದ್ದೇನೆ" ಎಂದು ಹೇಳಿದರು. 

ರ್ಯಾಲಿ ಸಂದರ್ಭದಲ್ಲಿ ಜನರು ನೀಡಿದ ಬೆಂಬಲಕ್ಕೆ ಧನ್ಯವಾದಗಳನ್ನು ಅರ್ಪಿಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ (AAP) ಮತ ಚಲಾಯಿಸುವಂತೆ ಒತ್ತಾಯಿಸಿದರು.

"ಈಗ ಚುನಾವಣೆಗೆ ಕೇವಲ 20 ದಿನಗಳು ಉಳಿದಿವೆ, ನಾವು ಪ್ರತಿ ಮನೆಗೆ ಹೋಗಿ ಎಎಪಿಗೆ ಮತ ಚಲಾಯಿಸುವಂತೆ ಒತ್ತಾಯಿಸುತ್ತೇವೆ" ಎಂದು ಕೇಜ್ರಿವಾಲ್ ಹೇಳಿದರು.

ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಡಳಿತಾರೂಢ ಆಮ್ ಆದ್ಮಿ ಪಕ್ಷ ದೆಹಲಿ ವಿಧಾನಸಭಾ ಚುನಾವಣೆಗೆ ಎಲ್ಲಾ 70 ಕ್ಷೇತ್ರಗಳ ಅಭ್ಯರ್ಥಿಗಳನ್ನೂ ಘೋಷಿಸಿದೆ. ಈ ಹಿಂದೆ ಎರಡು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿರುವ ಅರವಿಂದ್ ಕೇಜ್ರಿವಾಲ್ ಸತತ ಮೂರನೇ ಬಾರಿಗೆ ಚುನಾವಣಾ ಕಣದಲ್ಲಿದ್ದಾರೆ.

ಫೆಬ್ರವರಿ 8 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಎಲ್ಲಾ 70 ಅಭ್ಯರ್ಥಿಗಳನ್ನು ಘೋಷಿಸಿದ ದೆಹಲಿಯ ಮೂರು ಪ್ರಮುಖ ಸ್ಪರ್ಧಿಗಳಲ್ಲಿ ಎಎಪಿ ಮೊದಲನೆಯದು. 2015 ರಲ್ಲಿ ನಡೆದ ಕಳೆದ ದೆಹಲಿ ಅಸೆಂಬ್ಲಿ ಚುನಾವಣೆಯಲ್ಲಿ ಪಕ್ಷವು 70 ಸ್ಥಾನಗಳಲ್ಲಿ 67 ಸ್ಥಾನಗಳನ್ನು ಗೆದ್ದಿದೆ.
 

Trending News