ನವದೆಹಲಿ: ನೆರೆಯ ರಾಜ್ಯಗಳಲ್ಲಿ ಒಣ ಕೃಷಿ ಉತ್ಪನ್ನಗಳನ್ನು ಸುಡುವುದರಿಂದಾಗಿ ವಿಷಕಾರಿ ಹೊಗೆ ಶನಿವಾರದಂದು ದೆಹಲಿಯಲ್ಲಿ ದಟ್ಟವಾದ ಹೊಂಜನ್ನು ಹುಟ್ಟು ಹಾಕಿದೆ.
ಈ ವರ್ಷ ದೆಹಲಿಯಲ್ಲಿ ಮಾರಕ ವಾಯು ಮಾಲಿನ್ಯಕಾರಕದ ಮಟ್ಟವನ್ನು ಅಳೆಯುವ ಸೂಚ್ಯಂಕವು 500ರ ಪ್ರಮಾಣದಲ್ಲಿ 480 ಕ್ಕೆ ತಲುಪಿದೆ, ಇದು ಸರ್ಕಾರದ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಾರ ಅತ್ಯಂತ ಕಳಪೆ ಎನ್ನಲಾಗುತ್ತಿದೆ.
Major pollutants PM 2.5 at 500 & PM 10 at 500 remain in 'severe' category in Lodhi Road area, according to Air Quality Index data. Yesterday, Environment Pollution (Prevention&Control) Authority declared public health emergency in Delhi due to rising air pollution levels. pic.twitter.com/K8ZWjRCHPi
— ANI (@ANI) November 2, 2019
ಹಿಸಾರ್ನಲ್ಲಿ ಮಾಲಿನ್ಯ ಸೂಚ್ಯಂಕವು 804, ಗುರುಗ್ರಾಮ್ 585, ಗಾಜಿಯಾಬಾದ್ 496, ಗ್ರೇಟರ್ ನೋಯ್ಡಾ 496, ಫರಿದಾಬಾದ್ 479 ಮತ್ತು ನೋಯ್ಡಾ 578 ಕ್ಕೆ ತಲುಪಿವೆ . ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ, ವಾಯು ಗುಣಮಟ್ಟದ ಸೂಚ್ಯಂಕ (ಎಕ್ಯೂಐ) 339 ಆಗಿದ್ದು, ಎನ್‌ಸಿಆರ್ ಪ್ರದೇಶದಲ್ಲಿ ನೋಯ್ಡಾ ಅತ್ಯಂತ ಕಲುಷಿತ ನಗರವಾಗಿದೆ.
ಸೂಚ್ಯಂಕವು ಶ್ವಾಸಕೋಶದ ಆಳಕ್ಕೆ ಹೋಗುವ ಸಣ್ಣ ಕಣಗಳ ಮಟ್ಟ ಪಿಎಂ 2.5 ಕ್ಕೆ ತಲುಪಿದ್ದು, ಇನ್ನು ಸೂಚ್ಯಂಕ 400 ಕ್ಕಿಂತ ಅಧಿಕವಿದ್ದರೆ ಉಸಿರಾಟದ ಕಾಯಿಲೆ ಇರುವ ಜನರಿಗೆ ಅಪಾಯವನ್ನು ಉಂಟು ಮಾಡುತ್ತದೆ ಮತ್ತು ಆರೋಗ್ಯಕರ ಶ್ವಾಸಕೋಶವನ್ನು ಹೊಂದಿರುವವರ ಮೇಲೂ ಪರಿಣಾಮ ಬೀರುತ್ತದೆ.
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ನವೆಂಬರ್ 5 ರವರೆಗೆ ರಾಷ್ಟ್ರ ರಾಜಧಾನಿಯ ಎಲ್ಲಾ ಶಾಲೆಗಳನ್ನು ಮುಚ್ಚುವಂತೆ ಆದೇಶಿಸಿದ್ದಾರೆ. ಎಎಪಿ ಸರ್ಕಾರವು ನವೆಂಬರ್ 21 ರಿಂದ ಪ್ರಾರಂಭವಾಗುವ 12 ದಿನಗಳ ಬೆಸ-ಸಮ-ಯೋಜನೆಯ ಅನುಷ್ಠಾನದ ಸಮಯದಲ್ಲಿ ತನ್ನ 21 ಇಲಾಖೆಗಳ ಕೆಲಸದ ಸಮಯವನ್ನು ಸ್ಥಗಿತಗೊಳಿಸಿದೆ.
ಶುಕ್ರವಾರದಂದು ಸಿಎಂ ಕೇಜ್ರಿವಾಲ್ ಹರಿಯಾಣ ಮತ್ತು ಪಂಜಾಬ್ ಸರ್ಕಾರಗಳು ತಮ್ಮ ರೈತರಿಗೆ ಕಳೆಯನ್ನು ಸುಡುವಂತೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಿದರು, ಇದರಿಂದಾಗಿ ರಾಷ್ಟ್ರ ದೆಹಲಿಯಲ್ಲಿ ಮಾಲಿನ್ಯಕ್ಕೆ ಕಾರಣ ಎಂದು ಅವರು ಹೇಳಿದರು.