ನವದೆಹಲಿ: ಕೇಂದ್ರ ಸರ್ಕಾರವು ಬುಧವಾರದಂದು ಮದುವೆಯ ಪಾವಿತ್ರತೆಯನ್ನು ಕಾಪಾಡಲು ವ್ಯಭಿಚಾರಕ್ಕೆ ಶಿಕ್ಷೆಯಾಗಲೇಬೇಕು ಎಂದು ಸುಪ್ರಿಂ ಕೋರ್ಟ್ ಗೆ ತಿಳಿಸಿದೆ.
ಜೋಸೆಪ್ ಶೈನ್ ಎನ್ನುವವರು ಪುರುಷ ಮತ್ತು ಮಹಿಳೆರಿಬ್ಬರು ಕೂಡ ವ್ಯಭಿಚಾರದಡಿಯಲ್ಲಿ ಶಿಕ್ಷೆಗೆ ಸಮಾನವಾಗಿ ಅರ್ಹರು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೇಂದ್ರ ಸರ್ಕಾರವು ವಿರೋಧಿಸಿದೆ.
ಕೋರ್ಟ್ ವಿಚಾರಣೆಯಲ್ಲಿ ಅಭಿಪ್ರಾಯಪಟ್ಟಿರುವ ಕೇಂದ್ರ ಸರ್ಕಾರವು ಐಪಿಸಿ ಕಾಯ್ದೆ 497 ಮದುವೆಯ ವ್ಯಭಿಚಾರವನ್ನು ಅಪರಾಧ ಎಂದು ಪರಿಗಣಿಸಿದೆ ಅದನ್ನು ತಿದ್ದುಪಡಿ ಅಥವಾ ಬದಲಾವಣೆ ಮಾಡುವುದರಿಂದ ಅದು ಮದುವೆಯ ಪಾವಿತ್ರ್ಯತೆಯನ್ನು ಹಾಳು ಮಾಡುತ್ತದೆ ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ.
ಸುಮಾರು 157 ವರ್ಷಗಳ ಬ್ರಿಟಿಷರು ರೂಪಿಸಿದ ಈ ಕಾನೂನಿನಡಿಯಲ್ಲಿ ಯಾವುದೇ ವ್ಯಕ್ತಿಯು ಇತರ ವ್ಯಕ್ತಿಯ ಪತ್ನಿಯೊಂದಿಗೆ ಲೈಂಗಿಕ ಸಂಬಂಧವನ್ನು ಹೊಂದಿದ್ದರೆ ಅವನಿಗೆ ಕಾನೂನಿನಡಿಯಲ್ಲಿ ಐದು ವರ್ಷಗಳ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಲಾಗುತ್ತದೆ.
ಜನೆವರಿ 2018 ರಲ್ಲಿ ಐಪಿಸಿ ಸೆಕ್ಷನ್ 497 ನ್ನು ಪ್ರಶ್ನಿಸಿ ಅರ್ಜಿಯನ್ನು ಸಲ್ಲಿಸಲಾಗಿತ್ತು. ಆಗ ಈ ವಿಷಯವನ್ನು ಸುಪ್ರಿಂ ಕೋರ್ಟ್ ಐವರು ನ್ಯಾಯಾಧೀಶರನ್ನು ಒಳಗೊಂಡ ಪೀಠಕ್ಕೆ ಶಿಪಾರಸ್ಸು ಮಾಡಿತ್ತು .ಸದ್ಯದ ಕಾನೂನಿನಡಿಯಲ್ಲಿ ಈ ಕಾಯ್ದೆಯು ವಿವಾಹಿತ ವ್ಯಕ್ತಿ ಇನ್ನೊಬ್ಬ ವಿವಾಹಿತ ಮಹಿಳೆಯ ಜೊತೆ ಲೈಂಗಿಕ ಸಂಬಂಧವನ್ನು ಹೊಂದಿದ್ದರೆ ಮಾತ್ರ ಅಂತಹ ವ್ಯಕ್ತಿಯನ್ನು ಶಿಕ್ಷೆಗೆ ಒಳಪಡಿಸುತ್ತದೆ.
ಈಗ ಈ ಕಾಯ್ದೆಯನ್ನು ಮರುಪರಿಶೀಲಿಸುವ ನಿಟ್ಟಿನಲ್ಲಿ ಜೋಷೆಪ್ ಶೈನ್ ಅರ್ಜಿಯನ್ನು ಸಲ್ಲಿಸಿದ್ದರು.ಆದರೆ ಸರ್ಕಾರ ಇದನ್ನು ವಿರೋಧಿಸಿ ಈಗಿರುವ ಕಾನೂನನ್ನು ಯಥಾ ಸ್ಥಿತಿಯಲ್ಲಿ ಮುಂದುವರೆಸಿಕೊಂಡು ಹೋಗಲು ಅದು ಸುಪ್ರಿಂ ಕೋರ್ಟ್ ಗೆ ತಿಳಿಸಿದೆ.