Fire Golgappa: 'ಫೈರ್ ಪಾನ್' ಅಲ್ಲ 'ಫೈರ್ ಗೋಲ್ಗಪ್ಪಾ' ಎಂದಾದರು ಟೇಸ್ಟ್ ಮಾಡಿದ್ದೀರಾ? ವಿಡಿಯೋ ವೈರಲ್

Fire Golgappa: ಇತ್ತೀಚಿನ ದಿನಗಳಲ್ಲಿ 'ಫೈರ್ ಗೋಲ್ಗಪ್ಪಾ' ಇಂಟರ್ನೆಟ್‌ಗೆ ಬೆಂಕಿ ಹಚ್ಚಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ವೀಡಿಯೊವನ್ನು ಅಹಮದಾಬಾದ್‌ನಲ್ಲಿ ಚಿತ್ರೀಕರಿಸಲಾಗಿದೆ ಎಂದು ಹೇಳಲಾಗುತ್ತಿದೆ.

Written by - Yashaswini V | Last Updated : Dec 7, 2021, 06:58 AM IST
  • ಗೋಲ್ಗಪ್ಪಾ, ಪಾನಿ ಕೆ ಬತಾಶೆ ಅಥವಾ ಪಾನಿ ಪುರಿ... ಹೆಸರು ಕೇಳಿದರೆ ಬಾಯಲ್ಲಿ ನೀರು ಬರದವರಿಲ್ಲ
  • ಹೆಚ್ಚಿನ ಜನರು ಇದನ್ನು ಮಸಾಲೆಯುಕ್ತ ಅಥವಾ ಸಿಹಿ ಮತ್ತು ಕೂಲ್ ಪಾನಿ ಜೊತೆಗೆ ಇಷ್ಟಪಡುತ್ತಾರೆ
  • ಆದರೆ ಯಾರಾದರೂ ಗೋಲ್ಗಪ್ಪವನ್ನು ಬೆಂಕಿಯೊಂದಿಗೆ ತಿನ್ನಿಸಿದರೆ ಹೇಗಿರುತ್ತೆ?
Fire Golgappa: 'ಫೈರ್ ಪಾನ್' ಅಲ್ಲ 'ಫೈರ್ ಗೋಲ್ಗಪ್ಪಾ' ಎಂದಾದರು ಟೇಸ್ಟ್ ಮಾಡಿದ್ದೀರಾ? ವಿಡಿಯೋ ವೈರಲ್ title=
Fire Golgappa; latest viral video in social media

Fire Golgappa: ಗೋಲ್ಗಪ್ಪಾ, ಪಾನಿ ಕೆ ಬತಾಶೆ ಅಥವಾ ಪಾನಿ ಪುರಿ... ಹೆಸರು ಕೇಳಿದರೆ ಬಾಯಲ್ಲಿ ನೀರು ಬರದವರಿಲ್ಲ. ಹೆಚ್ಚಿನ ಜನರು ಇದನ್ನು ಮಸಾಲೆಯುಕ್ತ ಅಥವಾ ಸಿಹಿ ಮತ್ತು ಕೂಲ್ ಪಾನಿ ಜೊತೆಗೆ ಇಷ್ಟಪಡುತ್ತಾರೆ. ಆದರೆ ಯಾರಾದರೂ ಗೋಲ್ಗಪ್ಪವನ್ನು ಬೆಂಕಿಯೊಂದಿಗೆ ತಿನ್ನಿಸಿದರೆ ಹೇಗಿರುತ್ತೆ?  ಹೌದು, ಸುಡುವ ಗೋಲ್ಗಪ್ಪ. ಇದನ್ನು 'ಫೈರ್ ಗೋಲ್ಗಪ್ಪಾ' (Fire Golgappa) ಎಂದು ಕರೆಯಲಾಗುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ  'ಫೈರ್ ಗೋಲ್ಗಪ್ಪಾ' ಹೆಚ್ಚು ಸದ್ದು ಮಾಡುತ್ತಿದೆ.

ಏನಿದು  'ಫೈರ್ ಗೋಲ್ಗಪ್ಪಾ' ?
ಈ ದಿನಗಳಲ್ಲಿ 'ಬೆಂಕಿ ಗೊಲ್ಗಪ್ಪ' ಅಥವಾ  'ಫೈರ್ ಗೋಲ್ಗಪ್ಪಾ' (Fire Golgappa) ಇಂಟರ್ನೆಟ್‌ಗೆ ಬೆಂಕಿ ಹಚ್ಚಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social Media) ಸಖತ್ ವೈರಲ್ ಆಗುತ್ತಿದೆ. ವೀಡಿಯೊವನ್ನು ಅಹಮದಾಬಾದ್‌ನಲ್ಲಿ ಚಿತ್ರೀಕರಿಸಲಾಗಿದೆ ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ- Viral Video: ಅಪಾಯಕಾರಿ King Cobra ಹಿಡಿಯಲು ಹೋದ ವ್ಯಕ್ತಿ, ಮುಂದೇನಾಯ್ತು ನೀವೇ ನೋಡಿ

ವೈರಲ್ ಕ್ಲಿಪ್‌ನಲ್ಲಿ, ರಸ್ತೆ ಬದಿಯ ಅಂಗಡಿಯವನು ಹುಡುಗಿಗೆ ಬೆಂಕಿ ಗೊಲ್ಗಪ್ಪಾ ತಿನ್ನಿಸುತ್ತಿರುವುದನ್ನು ಕಾಣಬಹುದು. ಮೊದಲು ಅಂಗಡಿಯವನು ಲೈಟರ್‌ನಿಂದ ಗೋಲ್ಗಪ್ಪನಿಗೆ ಬೆಂಕಿ ಹಚ್ಚುತ್ತಾನೆ ಮತ್ತು ನಂತರ ಹುಡುಗಿಗೆ 'ಫೈರ್ ಪಾನ್'ನಂತೆ ಫೈರ್ ಗೋಲ್ಗಪ್ಪನ್ನು (Fire Golgappa) ತಿನ್ನಿಸುತ್ತಾನೆ.

ಇದನ್ನೂ ಓದಿ- Bike Stunts Video: ಹುಡ್ಗಿಯರ ಮುಂದೆ ಡೌಲು ಹೊಡೆಯಲು ಹೋಗಿ ಬೈಕ್ ಮೇಲಿಂದ ಬಕ್ ಬಾರ್ ಬಿದ್ದ ಭೂಪ

ಪಾನಿ ಪುರಿಯಲ್ಲಿ ಬೆಂಕಿ ಹೇಗೆ ಸಾಧ್ಯ!
ವಾಸ್ತವವಾಗಿ, ನೀವು ಪಾನಿ ಎಂದರೆ ನೀರಿನಲ್ಲಿ ಬೆಂಕಿ ಹತ್ತಲು ಹೇಗೆ ಸಾಧ್ಯ ಎಂದು ಯೋಚಿಸುತ್ತಿರಬಹುದು. ಆದರೆ ಈ  'ಫೈರ್ ಗೋಲ್ಗಪ್ಪಾ'ದಲ್ಲಿ ಕರ್ಪೂರವಿತ್ತು.  ಅದರ ಸಹಾಯದಿಂದ ಅಂಗಡಿಯವನು 'ಗೋಲ್ಗಪ್ಪಾ'ದಲ್ಲಿ ಬೆಂಕಿ ಹಚ್ಚುತ್ತಾನೆ. ಸಾಮಾಜಿಕ ಜಾಲತಾಣಗಳಲ್ಲಿ ಇದರ ಅಪಾಯದ ಬಗ್ಗೆ ಜನರು ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಅದಾಗ್ಯೂ, ವಿಡಿಯೋ ಶೇರ್ ಮಾಡಿರುವ ಫುಡ್ ಬ್ಲಾಗರ್ ಫೈರ್ ಗೋಲ್ಗಪ್ಪಾ ಸಂಪೂರ್ಣ ಸೇಫ್. ಅದನ್ನು ತಿನ್ನುವಾಗ ಬಾಯಿಯೂ ಸುಡಲಿಲ್ಲ ಎಂದಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News