ಅಡುಗೆ ಮನೆಗೆ ನುಗ್ಗಿದ ದೈತ್ಯ ನಾಗರಹಾವು, ಬೆಚ್ಚಿ ಬೀಳಿಸುವ King Cobra Video ಇದು

ಈ ವಿಡಿಯೋದಲ್ಲಿ,   ಮನೆಯ ಅಡುಗೆ ಮನೆಯೊಳಗೆ ಅಡಗಿಕೊಂಡಿದ್ದ ಅಪಾಯಕಾರಿ ನಾಗರಹಾವನ್ನು ಕಾಣಬಹುದು.

Written by - Ranjitha R K | Last Updated : Dec 4, 2021, 07:45 AM IST
  • ಅಡುಗೆ ಮನೆಯೊಳಗೆ ಅಡಗಿಕೊಂಡಿದ್ದ ಅಪಾಯಕಾರಿ ನಾಗರಹಾವು
  • ದೈತ್ಯಾಕಾರದ ಹಾವನ್ನು ನೋಡಿ, ಬೆಚ್ಚಿ ಬಿದ್ದ ಮನೆಮಂದಿ
  • ವೈರಲ್ ಆಯಿತು ನಾಗರಾಜನ ವಿಡಿಯೋ
ಅಡುಗೆ ಮನೆಗೆ ನುಗ್ಗಿದ ದೈತ್ಯ ನಾಗರಹಾವು, ಬೆಚ್ಚಿ ಬೀಳಿಸುವ King Cobra Video ಇದು  title=
ಅಡುಗೆ ಮನೆಯೊಳಗೆ ಅಡಗಿಕೊಂಡಿದ್ದ ಅಪಾಯಕಾರಿ ನಾಗರಹಾವು (photo yutube)

ನವದೆಹಲಿ : ಇಂಟರ್ ನೆಟ್ ಲೋಕದಲ್ಲಿ ಅನೇಕ ರೀತಿಯ ವಿಡಿಯೋಗಳನ್ನು (Video) ಕಾಣಬಹುದು. ಹೀಗೆ ಬರುವ ಕೆಲವು ವಿಡಿಯೋಗಳು ಕ್ಷಣ ಮಾತ್ರದಲ್ಲಿ ವೈರಲ್ (Viral video) ಆಗಿ ಬಿಡುತ್ತವೆ. ಅಂಥದ್ದೇ ಒಂದು ವಿಡಿಯೋ ಇಲ್ಲಿದೆ. ಈ ವಿಡಿಯೋದಲ್ಲಿ,   ಮನೆಯ ಅಡುಗೆ ಮನೆಯೊಳಗೆ ಅಡಗಿಕೊಂಡಿದ್ದ ಅಪಾಯಕಾರಿ ನಾಗರಹಾವನ್ನು ಕಾಣಬಹುದು. ಈ ದೈತ್ಯಾಕಾರದ ಹಾವನ್ನು ನೋಡುವಾಗಲೇ ಭಯವಾಗುತ್ತದೆ. ಅಂಥದ್ದರಲ್ಲಿ ಈ ಹಾವು ಇಡೀ ಅಡುಗೆ ಮನೆಯಲ್ಲಿ ಹರಿದಾಡುತ್ತಿದೆ.  

ಮನೆಯ ಸದಸ್ಯರೊಬ್ಬರು ಅಡುಗೆ ಕೋಣೆಗೆ ಬಂದಾಗ, ಕೊನೆಯ ಮೂಲೆಯಲ್ಲಿ ಅಡಗಿ ಕುಳಿತಿರುವ ಹಾವು (Snake video) ಅವರ ಕಣ್ಣಿಗೆ ಬಿದ್ದಿದೆ. ಇಷ್ಟು ದೈತ್ಯಾಕಾರದ ಹಾವನ್ನು ನೋಡಿ, ಅವರು ಬೆಚ್ಚಿ ಬಿದ್ದಿದ್ದಾರೆ. ಅಲ್ಲದೆ, ಕಿರುಚಾಡಿಕೊಂಡು ಮನೆಯ ಹೊರಗೆ ಓಡಿದ್ದಾರೆ. ಇದಾದ ಬಳಿಕ ಮನೆ ಮಂದಿಯೆಲ್ಲಾ ಮನೆಯಿಂದ ಹೊರ ಬಂದಿದ್ದಾರೆ. ನನತರ ಹಾವು ಹಿಡಿಯುವ ವ್ಯಕ್ತಿಯನ್ನು ಕರೆಸಲಾಗಿದೆ.

ಇದನ್ನೂ ಓದಿ : ಕೋಳಿಯನ್ನು ದುರ್ಬಲ ಎಂದುಕೊಂಡು ಜಗಳಕ್ಕೆ ನಿಂತ ಬೆಕ್ಕು, ಆದರೆ ಆಗಿದ್ದೇನು ? ಫೈಟಿಂಗ್ ನ full video ಇಲ್ಲಿದೆ

ಹಾವು ಹಿಡಿಯುವ ವ್ಯಕ್ತಿ ಬಂದಿದ್ದೇ  ತಡ, ನಾಗರಾಜ ತನ್ನ ಆಟ ಶುರು ಮಾಡಿದ್ದಾನೆ. ಅಡುಗೆ ಮನೆಯ (Kitchen) ಯಾವ ಮೂಲೆಯನ್ನು ಬಿಡದೆ ಹರಿದಾಡಿ ಬಿಟ್ಟಿದೆ. ಹಾವು ಹಿಡಿಯುವ ವ್ಯಕ್ತಿಯನ್ನು ಕೂಡಾ ಸುಸ್ತು ಮಾಡಿ ಬಿಟ್ಟಿದೆ. ಪ್ರತೀ ಬಾರಿ ವ್ಯಕ್ತಿ ಇನ್ನೇನು ಹಾವನ್ನು ಹಿಡಿದೇ ಬಿಟ್ಟರು ಎನ್ನುವಷ್ಟರಲ್ಲಿ ಹಾವು ಮತ್ಯಾವುದೋ   ಮೂಲೆ ಸೇರುತ್ತಿತ್ತು. ಅಲ್ಲದೆ, ಅನೇಕ ಬಾರಿ ವ್ಯಕ್ತಿಗೆ ಕಚ್ಚುವ ಪ್ರಯತ್ನ ಕೂಡಾ  ಮಾಡಿದೆ. 

 

ಈ ವೀಡಿಯೋ ಯಾವಾಗದ್ದು ಮತ್ತು ಎಲ್ಲಿಯದ್ದು ಎನ್ನುವುದು ತಿಳಿದಿಲ್ಲ. ಆದರೆ ಅದನ್ನು ಹೆಚ್ಚಿನ  ಸಂಖ್ಯೆಯಲ್ಲಿ ವೀಕ್ಷಿಸಲಾಗುತ್ತಿದೆ. MIRZA MD ARIF ಚಾನೆಲ್‌ನಲ್ಲಿ ಈ ವೀಡಿಯೊವನ್ನು YouTube ಗೆ ಅಪ್‌ಲೋಡ್ ಮಾಡಲಾಗಿದೆ. ಈ ವೀಡಿಯೋವನ್ನು (Viral video) ಇಲ್ಲಿಯವರೆಗೆ ಮೂರು ಕೋಟಿಗೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಅಲ್ಲದೆ, ನೆಟ್ಟಿಗರು ಕೂಡಾ ಕಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ : Viral Video: ಜಿಮ್‌ನಲ್ಲಿ ಗೆಳತಿಯೊಂದಿಗೆ ರೆಡ್ ಹ್ಯಾಂಡ್ ಆಗಿ ಹೆಂಡತಿಗೆ ಸಿಕ್ಕಿಬಿದ್ದ ಪತಿರಾಯ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News