ರಾಜಸ್ಥಾನದ ನಂತರ ಈಗ ಬಿಹಾರದಲ್ಲಿ ಕರೋನಾ ವೈರಸ್ ಅಲರ್ಟ್

ಚಪ್ರಾ ಜಿಲ್ಲೆಯಲ್ಲಿ ಕರೋನಾ ರೋಗಿಯೊಬ್ಬರು ಪತ್ತೆಯಾಗಿದ್ದು, ಆ ರೋಗಿಯಲ್ಲಿ ಕರೋನಾ ವೈರಸ್ ಲಕ್ಷಣಗಳು ಕಂಡುಬಂದಿವೆ. ಉತ್ತಮ ಚಿಕಿತ್ಸೆಗಾಗಿ ಅವರನ್ನು ಪಿಎಂಸಿಎಚ್‌ಗೆ ಕಳುಹಿಸಲಾಗಿದೆ.

Last Updated : Jan 27, 2020, 12:23 PM IST
ರಾಜಸ್ಥಾನದ ನಂತರ ಈಗ ಬಿಹಾರದಲ್ಲಿ ಕರೋನಾ ವೈರಸ್ ಅಲರ್ಟ್ title=

ಚಪ್ರಾ: ಚೀನಾದಿಂದ ಜಗತ್ತಿಗೆ ಬೆದರಿಕೆ ಒಡ್ಡಿರುವ ಮಹಾಮಾರಿ ಕರೋನಾ ವೈರಸ್ ಬಿಹಾರದಲ್ಲೂ ತನ್ನ ಪ್ರಭಾವ ಬೀರಿದೆ. ವಾಸ್ತವವಾಗಿ, ಚಾಪ್ರಾ ಜಿಲ್ಲೆಯಲ್ಲಿ ರೋಗಿಯೊಬ್ಬರಿಗೆ ಕರೋನಾ ವೈರಸ್ ಲಕ್ಷಣಗಳು ಕಂಡುಬಂದಿವೆ. ಉತ್ತಮ ಚಿಕಿತ್ಸೆಗಾಗಿ ಅವರನ್ನು ಪಿಎಂಸಿಎಚ್‌ಗೆ ಕಳುಹಿಸಲಾಗಿದೆ. ವೈರಸ್ ಲಕ್ಷಣಗಳು ಕಂಡು ಬಂದಿರುವ ಹುಡುಗಿ ಶಾಂತಿನಗರ ನಿವಾಸಿ ಮತ್ತು ಚೀನಾದಲ್ಲಿ ನರ ವಿಜ್ಞಾನವನ್ನು ಅಧ್ಯಯನ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಕರೋನಾ ವೈರಸ್ ಮೊದಲು ಚಪ್ರಾದಲ್ಲಿ ಕೋಲಾಹಲವನ್ನು ಉಂಟುಮಾಡಿತು ಮತ್ತು ನಂತರ ವೈದ್ಯರು ಅವರನ್ನು ಚಿಕಿತ್ಸೆಗಾಗಿ ಪಿಎಂಸಿಎಚ್‌ಗೆ ಕರೆದೊಯ್ದರು.

ರಾಜಸ್ಥಾನದಲ್ಲಿ ಕರೋನಾ ವೈರಸ್ ಲಕ್ಷಣ ಇರುವವರನ್ನು ಪ್ರತ್ಯೇಕವಾಗಿ ಇರಿಸಲು ಸೂಚನೆ:
ಚೀನಾದಲ್ಲಿ ಎಂಬಿಬಿಎಸ್ ಓದುತ್ತಿರುವ ವೈದ್ಯರಿಗೆ ಕರೋನಾ ವೈರಸ್‌ನಿಂದ ತೊಂದರೆಯಾಗಬಹುದೆಂದು ಶಂಕಿಸಿದರೆ ಶಂಕಿತ ರೋಗಿಯನ್ನು ತಕ್ಷಣವೇ ಪ್ರತ್ಯೇಕವಾಗಿ ಇರಿಸಿ ಮತ್ತು ಅವರ ಇಡೀ ಕುಟುಂಬವನ್ನು ಪರೀಕ್ಷಿಸುವಂತೆ ಎಸ್‌ಎಂಎಸ್ ವೈದ್ಯಕೀಯ ಕಾಲೇಜು ಆಡಳಿತಕ್ಕೆ ವೈದ್ಯಕೀಯ ಮತ್ತು ಆರೋಗ್ಯ ಸಚಿವ ಡಾ. ರಘು ಶರ್ಮಾ ಸೂಚನೆ ನೀಡಿದ್ದಾರೆ. 

ಪೂನಾದಲ್ಲಿರುವ ರಾಷ್ಟ್ರೀಯ ವೈರಾಲಜಿ ಲ್ಯಾಬ್ ಗೆ ಆರೋಗ್ಯ ಇಲಾಖೆಯು ಶಂಕಿತ ರೋಗಿಯ ಮಾದರಿಗಳನ್ನು ಕಳುಹಿದ್ದು,  ತಕ್ಷಣ ಅದನ್ನು ಪರೀಕ್ಷಿಸುವಂತೆ ಸೂಚನೆ ನೀಡಿದೆ. ಸ್ವೀಕರಿಸಿದ ಮಾಹಿತಿಯ ಪ್ರಕಾರ, ಚೀನಾಕ್ಕೆ ಪ್ರಯಾಣಿಸಿದ ನಂತರ ರಾಜ್ಯದ 4 ಜಿಲ್ಲೆಗಳಿಂದ 18 ಜನರು ಮರಳಿದ್ದಾರೆ ಎಂದು ಅವರು ಹೇಳಿದರು. ಇವರನ್ನು 28 ದಿನಗಳ ಕಾಲ ನಿರಂತರ ಮೇಲ್ವಿಚಾರಣೆಯಲ್ಲಿಡಲು ಸಂಬಂಧಪಟ್ಟ ನಾಲ್ಕು ಜಿಲ್ಲೆಗಳ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅನುಮಾನಾಸ್ಪದವೆಂದು ಕಂಡುಬಂದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿಂದ ಆಗಮಿಸುವ ವ್ಯಕ್ತಿಗಳ ಸಂಪೂರ್ಣ ತಪಾಸಣೆ ನಡೆಸಬೇಕೆಂದು ವೈದ್ಯಕೀಯ ಮತ್ತು ಆರೋಗ್ಯ ಸಚಿವರು ಕೇಂದ್ರ ಸರ್ಕಾರವನ್ನು ಕೋರಿದ್ದಾರೆ.

ಕರೋನಾ ಎಂದರೇನು?
ಕರೋನಾ ವೈರಸ್ ಪ್ರಾಣಿಗಳಿಂದ ಮನುಷ್ಯರನ್ನು ತಲುಪುತ್ತದೆ ಮತ್ತು ನ್ಯುಮೋನಿಯಾಕ್ಕೂ ಕಾರಣವಾಗಬಹುದು. WHO ಪ್ರಕಾರ, ಕರೋನಾ ವೈರಸ್ ಒಂದು ಜೂನೋಟಿಕ್ ಎಂದು ನಂಬಲಾಗಿದೆ. ಸಿ-ಫುಡ್(ಸಮುದ್ರ ಆಹಾರ) ತಿನ್ನುವುದರಿಂದ ರೋಗ ಹರಡುತ್ತದೆ ಮತ್ತು ಕರೋನಾದ ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬರುವ ಮೂಲಕ ಹರಡಬಹುದು ಎಂದು ನಂಬಲಾಗಿದೆ.
 

Trending News