ಅಹ್ಮದಾಬಾದ್-ಮುಂಬೈ ನಡುವಿನ ಬುಲೆಟ್ ರೈಲಿಗೆ ಇಂದು ಶಂಕುಸ್ಥಾಪನೆ

ಪ್ರಧಾನಿ ಮೋದಿ ಮತ್ತು ಜಪಾನ್ ಪ್ರಧಾನಿ ಶಿಂಜೋ ಭಾರತದ ಮೊದಲ ಬುಲೆಟ್ ರೈಲಿನ ಯೋಜನೆಗೆ ಅಹ್ಮದಾಬಾದ್ ನಲ್ಲಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

Last Updated : Sep 14, 2017, 10:01 AM IST
ಅಹ್ಮದಾಬಾದ್-ಮುಂಬೈ ನಡುವಿನ ಬುಲೆಟ್ ರೈಲಿಗೆ ಇಂದು ಶಂಕುಸ್ಥಾಪನೆ title=

ಅಹ್ಮದಾಬಾದ್: ಅಹ್ಮದಾಬಾದ್-ಮುಂಬೈ ನಡುವಿನ 1.08ಲಕ್ಷ ಕೋಟಿ ಮೌಲ್ಯದ ಬುಲೆಟ್ ರೈಲು ಯೋಜನೆಗೆ ಇಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಶಿಂಜೋ ಅವರಿಂದ ಶಂಕುಸ್ಥಾಪನೆ ಮಾಡುವ ಮೂಲಕ ಚಾಲನೆ ದೊರೆಯಲಿದೆ. 

ಇದು ಭಾರತದ ಮೊಟ್ಟ ಮೊದಲ ಬುಲೆಟ್ ರೈಲು ಯೋಜನೆಯಾಗಿದ್ದು, ಈ ಯೋಜನೆಯು 2022ಕ್ಕೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಗುಜರಾತ್ ನ ಅಹ್ಮದಾಬಾದ್ ನಿಂದ ಮುಂಬೈಗೆ ದೇಶದ ಪ್ರಪ್ರಥಮ ಬುಲೆಟ್ ರೈಲು ಸಂಚಾರ ಮಾಡಲಿದೆ.

ಬುಲೆಟ್ ರೈಲಿನ ಯೋಜನೆ ಪೂರ್ಣಗೊಂಡ ನಂತರ ಕೇವಲ 2 ಗಂಟೆಗಳಲ್ಲಿ ಅಹ್ಮದಾಬಾದ್ ನಿಂದ ಮುಂಬೈಗೆ ಸಂಚರಿಸಬಹುದೆಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

Trending News