ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆಯ ಕುರಿತು ದೇಶಾದ್ಯಂತ ನಡೆಯುತ್ತಿರುವ ಚರ್ಚೆಯ ಮಧ್ಯೆ ಅಸದುದ್ದೀನ್ ಒವೈಸಿ ಪಕ್ಷ AIMIM ಮುಖಂಡ ವಾರಿಸ್ ಪಠಾಣ್ ಒಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮುಸ್ಲಿಂ ಮಹಿಳೆಯರ ನೇತೃತ್ವದಲ್ಲಿ ದೆಹಲಿಯ ಶಾಹೀನ್ ಬಾಗ್ ನಲ್ಲಿ ನಡೆಯುತ್ತಿರುವ CAA ವಿರೋಧಿ ಪ್ರತಿಭಟನೆಯ ಕುರಿತು ಮಾತನಾಡಿರುವ ಅವರು, ಸದ್ಯ ನಾವು ನಮ್ಮ ಮಹಿಳೆಯರನ್ನು ಮುಂದಕ್ಕೆ ಹೋಗಲು ಬಿಟ್ಟಿದ್ದೇವೆ. ಆದರೆ, ಕೇವಲ ಹೆಣ್ಣು ಸಿಂಹಗಳು ಮಾತ್ರ ಇದೀಗ ರಸ್ತೆಗಿಳಿದಿದ್ದು, ನೀವು ಬೆವರುತ್ತಿರುವಿರಿ. ಒಂದು ವೇಳೆ ಎಲ್ಲರು ಹೊರಬಂದರೆ, ನಮ್ಮ 15ಕೋಟಿ ಸಂಖ್ಯೆ ನಿಮ್ಮ 100 ಕೋಟಿಯ ಮೇಲೆ ಬಾರೀ ಬೀಳಲಿದೆ ನೆನಪಿರಲಿ ಎಂದು ಹೇಳಿದ್ದಾರೆ.
ಸದ್ಯ ವಾರಿಸ್ ಪಠಾಣ್ ನೀಡಿರುವ ಈ ವಿವಾದಾತ್ಮಕ ಹೇಳಿಕೆಯ ವಿಡಿಯೋ ಭಾರಿ ವೈರಲ್ ಆಗುತ್ತಿದ್ದು, ಇದರಲ್ಲಿ ಅವರು ನಾವು ಸ್ವಾತಂತ್ರ್ಯವನ್ನು ಪಡೆದೆ ತೀರುತ್ತೇವೆ ಎಂದಿದ್ದಾರೆ. ವಾರೀಸ್ ಪಠಾಣ್, ಮಹಾರಾಷ್ಟ್ರ ವಿಧಾನಸಭೆಯ ಸದಸ್ಯರಾಗಿದ್ದರು. ಗುಲ್ಬರ್ಗಾದಲ್ಲಿ ಆಯೋಜಿಸಲಾಗಿದ್ದ CAA ವಿರೋಧಿ ಸಭೆಯಲ್ಲಿ ನೀಡಿದ್ದಾರೆ. ಫೆಬ್ರವರಿ 15ಕ್ಕೆ ಆಯೋಜಿಸಲಾಗಿದ್ದ ಈ ಸಭೆಯಲ್ಲಿ AIMIM ಮುಖ್ಯಸ್ಥ ಅಸದುದ್ದೀನ್ ಒವೈಸಿ ಕೂಡ ಹಾಜರಿದ್ದರು.
#WATCH AIMIM leader Waris Pathan: ...They tell us that we've kept our women in the front - only the lionesses have come out&you're already sweating. You can understand what would happen if all of us come together. 15 cr hain magar 100 ke upar bhaari hain, ye yaad rakh lena.(15.2) pic.twitter.com/KO8kqHm6Kg
— ANI (@ANI) February 20, 2020
ವಾರಿಸ್ ಪಠಾಣ್ ಈ ರೀತಿ ರೋಚ್ಚಿಗೆಬ್ಬಿಸುವ ಭಾಷಣ ಮಾಡಿರುವುದು ಇದೆ ಮೊದಲ ಬಾರಿಗೆ ಅಲ್ಲ. ಹಿಂದೂಗಳ ಮೇಲೆ ಪರೋಕ್ಷ ರೂಪದಲ್ಲಿ ದಾಳಿ ನಡೆಸಿರುವ ವಾರಿಸ್ ಪಠಾಣ್, ದೇಶದ ಎಲ್ಲ ಮುಸ್ಲಿಮರು ಒಂದುಗೂಡಿ ಸ್ವ್ಯಾತಂತ್ರ್ಯ ಪಡೆಯುವ ಕಾಲ ಕೂಡಿಬಂದಿದೆ ಎಂದೂ ಕೂಡ ಹೇಳಿದ್ದಾರೆ. ಈ ದೇಶದಲ್ಲಿ ಮುಸ್ಲಿಮರ ಸಂಖ್ಯೆ 15 ಕೋಟಿಯಷ್ಟೇ ಇದ್ದರೂ ಸಹ 100 ಕೋಟಿ ಹಿಂದೂಗಳ ಮೇಲೆ ತಮ್ಮ ಒತ್ತಡ ಹೇರುತ್ತಾರೆ ಎಂದಿದ್ದಾರೆ.