ದೆಹಲಿಯಲ್ಲಿ ಕಳಪೆ ಮಟ್ಟಕ್ಕೆ ತಲುಪಿದ ವಾಯು ಮಾಲಿನ್ಯ

ದೆಹಲಿ ಆಗಾಗ ವಾಯುಮಾಲಿನ್ಯದ ಕಾರಣದಿಂದ ಸುದ್ದಿಯಲ್ಲಿರುತ್ತದೆ.ಈಗ ಮತ್ತೆ ಅದೇ ಕಾರಣಕ್ಕಾಗಿ ಮತ್ತೊಮ್ಮೆ ಕಳಪೆ ವಾಯುಗುಣ ಮಟ್ಟದಿಂದಾಗಿ ಸುದ್ದಿಯಲ್ಲಿದೆ.ಭಾನುವಾರದಂದು ದೆಹಲಿಯಲ್ಲಿ ವಾಯುಮಾಲಿನ್ಯ ಪ್ರಮಾಣವು ಅಧಿಕಗೊಂಡಿದೆ ಎಂದು ತಿಳಿದುಬಂದಿದೆ. ಇನ್ನು ಕೆಲವು ದಿನಗಳ ಕಾಲ ಇದೇ ಪರಿಸ್ಥಿತಿ ಮುಂದುವರೆಯಲಿದೆ ಎನ್ನಲಾಗಿದೆ.

Last Updated : Jan 20, 2019, 12:54 PM IST
ದೆಹಲಿಯಲ್ಲಿ ಕಳಪೆ ಮಟ್ಟಕ್ಕೆ ತಲುಪಿದ ವಾಯು ಮಾಲಿನ್ಯ title=

ನವದೆಹಲಿ: ದೆಹಲಿ ಆಗಾಗ ವಾಯುಮಾಲಿನ್ಯದ ಕಾರಣದಿಂದ ಸುದ್ದಿಯಲ್ಲಿರುತ್ತದೆ.ಈಗ ಮತ್ತೆ ಅದೇ ಕಾರಣಕ್ಕಾಗಿ ಮತ್ತೊಮ್ಮೆ ಕಳಪೆ ವಾಯುಗುಣ ಮಟ್ಟದಿಂದಾಗಿ ಸುದ್ದಿಯಲ್ಲಿದೆ.ಭಾನುವಾರದಂದು ದೆಹಲಿಯಲ್ಲಿ ವಾಯುಮಾಲಿನ್ಯ ಪ್ರಮಾಣವು ಅಧಿಕಗೊಂಡಿದೆ ಎಂದು ತಿಳಿದುಬಂದಿದೆ. ಇನ್ನು ಕೆಲವು ದಿನಗಳ ಕಾಲ ಇದೇ ಪರಿಸ್ಥಿತಿ ಮುಂದುವರೆಯಲಿದೆ ಎನ್ನಲಾಗಿದೆ.

ಎಸ್ಎಎಫ್ಎಆರ್(ಸಫರ್) ಬಿಡುಗಡೆ ಮಾಡಿದ ಇತ್ತೀಚಿನ ಅಂಕಿ ಅಂಶಗಳನ್ನು ಗಮನಿಸಿದಾಗ ದೆಹಲಿಯ ಗಾಳಿಯಲ್ಲಿ ಪ್ರಮುಖ ಮಾಲಿನ್ಯಕಾರಕಗಳ ಕಣಗಳ ಮಟ್ಟವು 369 ರಷ್ಟಿತ್ತು ಎಂದು ತಿಳಿದುಬಂದಿದೆ. ಇದನ್ನು 'ತುಂಬಾ ಕಳಪೆ' ಎಂದು ಹೇಳಲಾಗಿದೆ. ಸಾಮಾನ್ಯವಾಗಿ ಎಕ್ಯೂಐ ಪ್ರಕಾರ  51 ರಿಂದ 100 ನ್ನು ತೃಪ್ತಿದಾಯಕವೆಂದು ಪರಿಗಣಿಸಲಾಗುತ್ತದೆ, 101-200ನ್ನು ಮಧ್ಯಮ ಎಂದು , 201-300 ಕಳಪೆ ,  401-500 ಪ್ರಮಾಣವನ್ನು ಅತಿ ಕಳಪೆ ಎಂದು ವರ್ಗಿಕರಿಸಲಾಗುತ್ತದೆ. 

ಮಾಲಿನ್ಯದ ಪ್ರಮಾಣವು ಹೆಚ್ಚಿರುವುದರಿಂದ ಈಗ ಜನರಿಗೆ ಬಾಹ್ಯ ಚಟುವಟಿಕೆಗಳಲ್ಲಿ ಭಾಗಿಯಾಗುವುದನ್ನು ಕಡಿಮೆ ಮಾಡಬೇಕು ಎಂದು ಸಂಸ್ಥೆ ಹೇಳಿದೆ. "ನೀವು ಯಾವುದೇ ಕೆಮ್ಮು, ಎದೆಯ ಅಸ್ವಸ್ಥತೆ, ಉಬ್ಬಸ, ಉಸಿರಾಟದ ತೊಂದರೆ, ಅಥವಾ ಆಯಾಸ ಅನುಭವಿಸಿದರೆ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು ಎನ್ನುವ ಸಲಹೆ ನೀಡಲಾಗಿದೆ. ನವೆಂಬರ್ 2018 ರಲ್ಲಿ ಸಫರ್ ನಡೆಸಿದ ಒಂದು ಅಧ್ಯಯನದಲ್ಲಿ ಸಾರಿಗೆ ವಲಯದ ಮೂಲಕ ದೆಹಲಿಯ ಮಾಲಿನ್ಯದಲ್ಲಿ ಶೇಕಡಾ 41ರಷ್ಟು ಪ್ರಮಾಣವನ್ನು ಹೊಂದಿದೆ ಎಂದು ಬಹಿರಂಗಪಡಿಸಿದೆ. ಬೀಸುವ ಗಾಳಿಯಿಂದಾದ ಮಾಲಿನ್ಯ ಶೇಕಡಾ 21.5 ರಷ್ಟಿದ್ದಿರೆ, ಕೈಗಾರಿಕೆ ಪ್ರಮಾಣ ಶೇಕಡಾ 18.6 ಎಂದು ಸಂಸ್ಥೆ ತಿಳಿಸಿದೆ.

ಇನ್ನು ಇತರ ಸಣ್ಣ ಪಾಲುದಾರರು, ಇಂದನ ಮತ್ತು ವಸತಿ ವಲಯಗಳು ಕ್ರಮವಾಗಿ 4.9 ಮತ್ತು ಶೇ.3 ಪಾಲನ್ನು ಹೊಂದಿವೆ. ಇನ್ನು ಉಳಿದ ಶೇ .11ರಲ್ಲಿ ಕೊಳೆಗೇರಿ, ಸಗಣಿ ಸವಲತ್ತು, ಬೀದಿ ಮಾರಾಟ, ಮನೆ, ಡಿಜಿ ಸೆಟ್,ಕಟ್ಟಿಗೆ ಸುಡುವಿಕೆ ಇತ್ಯಾದಿ ಎಂದು ಸಂಸ್ಥೆ ಹೇಳಿದೆ.

Trending News