ದೆಹಲಿಯ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಶೀಘ್ರದಲ್ಲೇ ಬಂದ್ ಆಗಲಿವೆ ಟಿಕೆಟ್ ಕೌಂಟರ್! ಈಗ ಟಿಕೆಟ್ ಹೇಗೆ ಪಡೆಯಬಹುದೆಂದು ತಿಳಿಯಿರಿ

ಟೋಕನ್ ಕೌಂಟರ್ ರೈಲು ನಿಲ್ದಾಣ ಮತ್ತು ಬಸ್ ಟರ್ಮಿನಲ್ ಗಳು ಪರಸ್ಪರ ಸಂಪರ್ಕಗೊಳ್ಳುವ ನಿಲ್ದಾಣದಲ್ಲಿ ಮಾತ್ರ ಲಭ್ಯವಿರುತ್ತವೆ.

Last Updated : Apr 21, 2018, 11:19 AM IST
ದೆಹಲಿಯ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಶೀಘ್ರದಲ್ಲೇ ಬಂದ್ ಆಗಲಿವೆ ಟಿಕೆಟ್ ಕೌಂಟರ್!   ಈಗ ಟಿಕೆಟ್ ಹೇಗೆ ಪಡೆಯಬಹುದೆಂದು ತಿಳಿಯಿರಿ title=

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಶೀಘ್ರದಲ್ಲೇ ಎಲ್ಲಾ ಟಿಕೆಟ್ ಕೌಂಟರ್ ಮುಚ್ಚಲಾಗುವುದು. ಮುಂಬರುವ ದಿನಗಳಲ್ಲಿ ಎಲ್ಲಾ ಮೆಟ್ರೋ ಕೇಂದ್ರಗಳಲ್ಲಿ ಟೋಕನ್ಗಳ ವಿತರಣಾ ಯಂತ್ರವನ್ನು (ಟಿವಿಎಮ್) ಸ್ಥಾಪಿಸಲು ದೆಹಲಿ ಮೆಟ್ರೊ ರೈಲ್ವೆ ಕಾರ್ಪೊರೇಷನ್ (ಡಿಎಂಆರ್ಸಿ) ಯೋಜಿಸುತ್ತಿದೆ. ಇದರಿಂದಾಗಿ ಕೌಂಟರ್ ಗಳನ್ನು ಕೌಂಟರ್ ಲೆಸ್ ಮಾಡಬಹುದು. ವರದಿಗಳ ಪ್ರಕಾರ, DMRC ಈ ಯೋಜನೆಗೆ ಸಂಬಂಧಿಸಿದ ಕೆಲಸವನ್ನು ಪ್ರಾರಂಭಿಸಿದೆ ಮತ್ತು ಇದು ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ.

ಇನ್ನು ಈ ಸ್ಥಳಗಳಲ್ಲಿ ಮಾತ್ರ ಟಿಕೆಟ್ ಕೌಂಟರ್ ಗಳು ಲಭ್ಯ 
ಟೈಮ್ಸ್ ಆಫ್ ಇಂಡಿಯಾದಲ್ಲಿ ಪ್ರಕಟವಾದ ಸುದ್ದಿ ಪ್ರಕಾರ, ಟೋಕನ್ ಕೌಂಟರ್ ರೈಲು ನಿಲ್ದಾಣ ಮತ್ತು ಬಸ್ ಟರ್ಮಿನಲ್ ಗಳು ಪರಸ್ಪರ ಸಂಪರ್ಕಗೊಳ್ಳುವ ನಿಲ್ದಾಣದಲ್ಲಿ ಮಾತ್ರ ಲಭ್ಯವಿರುತ್ತವೆ. ಡಿಎಂಆರ್ ಸಿ ವಕ್ತಾರ ಈ ಕುರಿತು ಮಾಹಿತಿ ನೀಡುತ್ತಿದ್ದಾಗ, ದೆಹಲಿಯಲ್ಲಿ 118 ಕೇಂದ್ರಗಳಲ್ಲಿ ಟೋಕನ್ ಕೌಂಟರ್ಗಳನ್ನು 519 ಟಿವಿಎಂಗೆ ಪರಿವರ್ತಿಸುವ ಕಾರ್ಯ ಪೂರ್ಣಗೊಂಡಿದೆ. ದೆಹಲಿ ಮೆಟ್ರೊಗೆ ಪ್ರಸ್ತುತ 183 ಕೇಂದ್ರಗಳಿವೆ ಮತ್ತು 3ನೇ ಹಂತದ ನಿರ್ಮಾಣದ ನಂತರ ಒಟ್ಟು 227 ಕೇಂದ್ರಗಳು ಇರಲಿವೆ ಎಂದು ತಿಳಿಸಿದೆ.

ಭವಿಷ್ಯದಲ್ಲಿ ಎಲ್ಲಾ ಕೇಂದ್ರಗಳನ್ನು ಕೌಂಟರ್ ಲೆಸ್ ಕೇಂದ್ರಗಳಾಗಿ ಮಾಡಲಾಗುವುದು ಎಂದು DMRC ಅಧಿಕಾರಿಯೊಬ್ಬರು ತಿಳಿಸಿದರು. ಅವರು ದೆಹಲಿಯಲ್ಲಿ ಕೆಲವು ನಿಲ್ದಾಣಗಳಲ್ಲಿ ಟೋಕನ್ ಕೌಂಟರ್ಗಳಿದ್ದವು, ಆದರೆ ಮುಂಬರುವ ಸಮಯದಲ್ಲಿ ಅವುಗಳನ್ನು ತೆಗೆದುಹಾಕಲಾಗುವುದು. ದೆಹಲಿ ಮೆಟ್ರೋ ಈಗ ಕೌಂಟರ್ ಲೆಸ್ ನಿಲ್ದಾಣದತ್ತ ತಿರುಗುತ್ತಿದೆ. ಆ ಸಂಪನ್ಮೂಲಗಳನ್ನು ಬೇರೆಡೆ ಬಳಸಬಹುದು ಎಂದು ಅಧಿಕಾರಿ ಹೇಳಿದರು.  ಪ್ರಯಾಣಿಕರು ದೆಹಲಿ ಮೆಟ್ರೋದಲ್ಲಿ ಹೆಚ್ಚು ಆಧುನಿಕ ಪ್ರಯಾಣ ಮಾಡುವಂತೆ ಮಾಡಲು ಈ ಹೆಜ್ಜೆ ತೆಗೆದುಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.

Trending News