ಇಮ್ರಾನ್ ಖಾನ್ ಗೆ ತಿರುಗೇಟು ನೀಡಿದ ಪಂಜಾಬ್ ಸಿಎಂ ಅಮರಿಂದರ್ ಸಿಂಗ್

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಮೇಲಾದ ಉಗ್ರರ ದಾಳಿಗೂ  ಪಾಕ್ ಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದ ಪಾಕ್  ಪ್ರಧಾನಿ ಇಮ್ರಾನ್ ಖಾನ್ ಗೆ ಈಗ ಪಂಜಾಬ್ ಸಿಎಂ ತಿರುಗೇಟು ನೀಡಿದ್ದಾರೆ.ಮಸೂದ್ ಅಜರ್ ಈಗ ಪಾಕಿಸ್ತಾನದ ಬಹಾಲ್ಪುರ್ ದಲ್ಲಿದ್ದಾನೆ ಅವನನ್ನು ಬಂಧಿಸಿ ಇಲ್ಲವಾದಲ್ಲಿ ಭಾರತ ನಿಮಗಾಗಿ ಆ ಕೆಲಸ ಮಾಡುತ್ತದೆ ಎಂದು ತಿಳಿಸಿದ್ದಾರೆ.

Last Updated : Feb 19, 2019, 06:16 PM IST
ಇಮ್ರಾನ್ ಖಾನ್ ಗೆ ತಿರುಗೇಟು ನೀಡಿದ ಪಂಜಾಬ್ ಸಿಎಂ ಅಮರಿಂದರ್ ಸಿಂಗ್  title=

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಮೇಲಾದ ಉಗ್ರರ ದಾಳಿಗೂ  ಪಾಕ್ ಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದ ಪಾಕ್  ಪ್ರಧಾನಿ ಇಮ್ರಾನ್ ಖಾನ್ ಗೆ ಈಗ ಪಂಜಾಬ್ ಸಿಎಂ ತಿರುಗೇಟು ನೀಡಿದ್ದಾರೆ.ಮಸೂದ್ ಅಜರ್ ಈಗ ಪಾಕಿಸ್ತಾನದ ಬಹಾಲ್ಪುರ್ ದಲ್ಲಿದ್ದಾನೆ ಅವನನ್ನು ಬಂಧಿಸಿ ಇಲ್ಲವಾದಲ್ಲಿ ಭಾರತ ನಿಮಗಾಗಿ ಆ ಕೆಲಸ ಮಾಡುತ್ತದೆ ಎಂದು ತಿಳಿಸಿದ್ದಾರೆ.

ಇಮ್ರಾನ್ ಖಾನ್ ಅವರ ಹೇಳಿಕೆಯನ್ನು ಕಟುವಾಗಿ ಟೀಕಿಸಿದ ಅಮರಿಂದರ್ ಸಿಂಗ್ " ಇನ್ನೆಷ್ಟು ಸಾಕ್ಷಿ ಅವನಿಗೆ ಬೇಕು ? ಜೈಶ್ ಇ ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಅಲ್ಲಿ ಕುಳಿತಿದ್ದಾನೆ. ನಮ್ಮ ಸೈನಿಕರು ಉಗ್ರರನ್ನು ಕೊಂದಿರುವ ದೇಹವನ್ನು ತೋರಿಸಿದಲ್ಲಿ ಅದನ್ನು ಅವರು ಒಪ್ಪುತ್ತಾರೆಯೇ ? ಇದೆಂಥಹ ಹೇಳಿಕೆ?  ಇಡೀ ಜಗತ್ತಿಗೆ ಸತ್ಯ ಏನೆಂದು ತಿಳಿದಿದೆ.ನಮ್ಮ ಒಬ್ಬ ಸೈನಿಕ ಹತರಾದಾಗ ನಾವು ಅವರ ಇಬ್ಬರು ಸೈನಿಕರನ್ನು ಹತ್ಯೆ ಮಾಡಿದರೆ ಮಾತ್ರ ಅವರಿಗೆ ತಿಳಿಯುತ್ತದೆ. ಈಗಾಗಲೇ ನಾವು ಸರ್ಕಾರ ತೆಗೆದುಕೊಳ್ಳುವ ಎಲ್ಲ ನಿರ್ಧಾರಕ್ಕೆ ನಮ್ಮ ಬೆಂಬಲವಿದೆ" ಎಂದು ಹೇಳಿದರು.

ಒಂದು ವೇಳೆ ಪಾಕಿಸ್ತಾನ ಜೈಶ್ ಇ ಮೊಹಮ್ಮದ್ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಿದ್ದರೆ ಭಾರತ ಆ ಕೆಲಸವನ್ನು ಮಾಡುತ್ತದೆ ಎಂದು ಹೇಳಿದರು.ಅಲ್ಲದೆ ಮುಂಬೈ ದಾಳಿಗೆ ಯಾವ ಸಾಕ್ಷ್ಯಗಳಿದ್ದವು ಹೇಳಿ. ಇದು ನುಡಿದಂತೆ ನಡೆಯುವ ಸಮಯ ಎಂದು ಅವರು ಹೇಳಿದರು. 

 

Trending News