ನವದೆಹಲಿ: ದೆಹಲಿಯ ಇಂದಿರಾ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಎಐಐಎಂಎಸ್) ನಿಂದ ಒಂದು ದಿನ ಅಥವಾ ಎರಡು ದಿನಗಳಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ಬಿಜೆಪಿ ವಕ್ತಾರ ಅನಿಲ್ ಬಲೂನಿ ಗುರುವಾರ ತಿಳಿಸಿದರು.
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಶಾ ಈಗ ಆರೋಗ್ಯವಾಗಿದ್ದಾರೆ. ಏಮ್ಸ್ ನಿಂದ ಒಂದೆರಡು ದಿನಗಳಲ್ಲಿ ಅವರು ಡಿಸ್ಚಾರ್ಜ್ ಆಗಲಿದ್ದಾರೆ ಎಂದು ಅನಿಲ್ ಬಲೂನಿ ಹೇಳಿದರು. ಅದಾಗ್ಯೂ, ಏಮ್ಸ್ ವತಿಯಿಂದ ಅಮಿತ್ ಶಾ ಅವರ ಆರೋಗ್ಯದ ಬಗೆಗೆ ಯಾವುದೇ ಪ್ರಕಟಣೆ ಮಾಡಲಾಗಿಲ್ಲ. ಹಂದಿ ಜ್ವರದಿಂದ ಬಳಲುತ್ತಿರುವ ಅಮಿತ್ ಶಾ ಬುಧವಾರ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ವಿಷಯವನ್ನು ಟ್ವೀಟ್ ಮೂಲಕ ತಿಳಿಸಿರುವ ಅಮಿತ್ ಶಾ, "ನಾನು ಹೆಚ್1 ಎನ್1 ನಿಂದ ಬಾಧಿತನಾದಿದ್ದೇವೆ. ದೇವರ ದಯೆಯಿಂದ, ನಿಮ್ಮ ಪ್ರೀತಿ ಮತ್ತು ಹಾರಿಕೆಯಿಂದ ಶೀಘ್ರ ಗುಣಮುಖನಾಗಲಿದ್ದೇವೆ" ಎಂದು ಹೇಳಿದ್ದಾರೆ.
ಏಮ್ಸ್ ಮೂಲಗಳ ಪ್ರಕಾರ, ಎದೆ ಬಿಗಿತ ಮತ್ತು ಉಸಿರಾಟದ ತೊಂದರೆಯಿಂದಾಗಿ ಅಮಿತ್ ಶಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ರಾತ್ರಿ ಸುಮಾರು ಒಂಬತ್ತು ಗಂಟೆಗೆ ಶಾ ಆಸ್ಪತ್ರೆಗೆ ದಾಖಲಾಗಿದ್ದು, ಏಮ್ಸ್ ನಿರ್ದೇಶಕ ರಂದೀಪ್ ಗುಲೇರಿಯಾ ಅವರ ಮೇಲ್ವಿಚಾರಣೆಯಲ್ಲಿ ಶಾ ಗೆ ಚಿಕಿತ್ಸೆ ನೀಡಲಾಗುತ್ತಿದೆ.