ವಿದ್ಯಾರ್ಥಿಗೆ ರಾಡ್‌ನಿಂದ ಥಳಿಸಿ, ಐರನ್‌ಬಾಕ್ಸ್‌ನಿಂದ ಸುಟ್ಟ ಸಹಪಾಠಿಗಳು : ಭಯಾನಕ ವಿಡಿಯೋ ನೋಡಿ..!

ವಿದ್ಯಾರ್ಥಿಯೊಬ್ಬನಿಗೆ ಅವನ ಸಹಪಾಠಿಗಳೇ ಅತಿ ಕ್ರೂರವಾಗಿ ಥಳಿಸಿರುವ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಈ ಆಘಾತಕಾರಿ ಘಟನೆ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಭೀಮಾವರಂನಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.

Written by - Krishna N K | Last Updated : Nov 5, 2022, 03:39 PM IST
  • ವಿದ್ಯಾರ್ಥಿಗೆ ರಾಡ್‌ನಿಂದ ಥಳಿಸಿ, ಐರನ್‌ಬಾಕ್ಸ್‌ನಿಂದ ಸುಟ್ಟ ಸಹಪಾಠಿಗಳು
  • ಭಯಾನಕ ವಿಡಿಯೋ ನೋಡಿ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌
  • ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಭೀಮಾವರಂನಲ್ಲಿ ನಡೆದ ಘಟನೆ
ವಿದ್ಯಾರ್ಥಿಗೆ ರಾಡ್‌ನಿಂದ ಥಳಿಸಿ, ಐರನ್‌ಬಾಕ್ಸ್‌ನಿಂದ ಸುಟ್ಟ ಸಹಪಾಠಿಗಳು : ಭಯಾನಕ ವಿಡಿಯೋ ನೋಡಿ..! title=

ಆಂಧ್ರಪ್ರದೇಶ : ವಿದ್ಯಾರ್ಥಿಯೊಬ್ಬನಿಗೆ ಅವನ ಸಹಪಾಠಿಗಳೇ ಅತಿ ಕ್ರೂರವಾಗಿ ಥಳಿಸಿರುವ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಈ ಆಘಾತಕಾರಿ ಘಟನೆ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಭೀಮಾವರಂನಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.

ವೈರಲ್‌ ಆಗಿರುವ ವಿಡಿಯೋದಲ್ಲಿ, ಕೊಠಡಿಯ ಬಾಗಿಲು ಮುಚ್ಚಿ ಯುವಕನೊಬ್ಬನನ್ನು ಕೆಲವರು ಅಮಾನುಷವಾಗಿ ಥಳಿಸುತ್ತಿರುವುದನ್ನು ಕಾಣಬಹುದು. ಥಳಿಸಿದರಲ್ಲದೆ, ಕೆಲ ನಿರ್ದಯಿ ಯುವಕರು ಆತನ ದೇಹವನ್ನು ಐರನ್‌ಬಾಕ್ಸ್‌ನಿಂದ ಸುಟ್ಟು ಹಾಕಲು ಯತ್ನಿಸುತ್ತಿರುವ ಭಯಾನಕ ದೃಶ್ಯ ವಿಡಿಯೋದಲ್ಲಿದೆ. ತನ್ನನ್ನು ಸಾಯಿಸಬೇಡ ಎಂದು ಯುವಕ ಪರಿಪರಿಯಾಗಿ ಅಳುತ್ತಾ ಬೇಡಿಕೊಂಡಿದ್ದಾನೆ. 

ಇದನ್ನೂ ಓದಿ:ಕೇಂದ್ರೀಯ ವಿದ್ಯಾಲಯದಲ್ಲಿ PGT, TGT 4014 ಹುದ್ದೆಗಳಿಗೆ ಅರ್ಜಿ!

ಇಷ್ಟೇ ಅಲ್ಲದೆ, ಅವನ ಮುಂದೆ ನಿಂತಿದ್ದ ಯುವಕರು ಕತ್ತು ಹಿಸುಕಲು ಯತ್ನಿಸುತ್ತಿದ್ದಾರೆ. ಅವನ ಪಕ್ಕದಲ್ಲಿ ಹಾಸಿಗೆಯ ಮೇಲೆ ಇಬ್ಬರು ಕಾಣಿಸಿಕೊಂಡಿದ್ದಾರೆ, ಅವರಲ್ಲಿ ಒಬ್ಬರು ಮಧ್ಯದಲ್ಲಿ ಎದ್ದು ಕಬ್ಬಿಣದ ರಾಡ್‌ನಿಂದ ಅವನ ಕೈಗೆ ಹೊಡೆಯಲು ಪ್ರಾರಂಭಿಸುತ್ತಾರೆ. ಬಡ ಯುವಕ ತನ್ನನ್ನು ಬಿಡುವಂತೆ ಬೇಡಿಕೊಳ್ಳುತ್ತಿದ್ದಾನೆ, ಆದರೆ ಕರುಣೆ ಮರೆತ ಕ್ರೂರರು ನಿರ್ದಯವಾಗಿ ಹಿಂಸಿಸಿದ್ದಾರೆ. ವರದಿಯ ಪ್ರಕಾರ, ಸಂತ್ರಸ್ತ ಯುವಕ ಮತ್ತು ಆರೋಪಿ ವಿದ್ಯಾರ್ಥಿಗಳು ಆಂಧ್ರಪ್ರದೇಶದ ಭೀಮಾವರಂ ಎಸ್‌ಆರ್‌ಕೆಆರ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಓದುತ್ತಿದ್ದಾರೆ ಎಂದು ತಿಳಿದು ಬಂದಿದೆ. 

ಈ ಘಟನೆ ಕೆಲ ದಿನಗಳ ಹಿಂದೆ ನಡೆದಿದೆ ಎನ್ನಲಾಗಿದೆ. ವಿಡಿಯೋ ವೈರಲ್ ಆದ ಬಳಿಕ ಈ ಅಮಾನವೀಯ ಕೃತ್ಯ ಬೆಳಕಿಗೆ ಬಂದಿದ್ದು, ಇದೀಗ ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಆದರೆ ಸಂತ್ರಸ್ತ ಯುವಕನಿಗೆ ಹೊಡೆದ ಮತ್ತು ಸುಟ್ಟ ಗಾಯಗಳಾಗಿವೆ. ಇನ್ನು ವಿಡಿಯೋ ನೋಡಿದ ನೆಟ್ಟಿಗರು ಅಸಮಾಧಾನ ವ್ಯಕ್ತವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News