ಪಿಎಂ ಕಿಸಾನ್ ಯೋಜನೆಯಲ್ಲಿ 6000 ರೂ.ಗಳ ಹೊರತಾಗಿ ರೈತರಿಗೆ ಸಿಗಲಿದೆ 3 ದೊಡ್ಡ ಪ್ರಯೋಜನ

ಲಾಕ್​ಡೌನ್ ಮಧ್ಯೆ ಸರ್ಕಾರವು ರೈತರಿಗೆ ಸಹಾಯಕವಾಗುವಂತೆ ಪಿಎಂ ಕಿಸಾನ್ ಸಮ್ಮನ್ ಯೋಜನೆಯ ಮೂಲಕ ಹಣಕಾಸಿನ ನೆರವು ಒದಗಿಸಿದೆ.  

Written by - Yashaswini V | Last Updated : May 22, 2020, 01:46 PM IST
ಪಿಎಂ ಕಿಸಾನ್ ಯೋಜನೆಯಲ್ಲಿ 6000 ರೂ.ಗಳ ಹೊರತಾಗಿ ರೈತರಿಗೆ ಸಿಗಲಿದೆ 3 ದೊಡ್ಡ ಪ್ರಯೋಜನ title=

ನವದೆಹಲಿ: ಲಾಕ್​ಡೌನ್ ಮಧ್ಯೆ ಸರ್ಕಾರವು ರೈತರಿಗೆ ಸಹಾಯಕವಾಗುವಂತೆ ಪಿಎಂ ಕಿಸಾನ್ ಸಮ್ಮನ್ ನಿಧಿ (PM Kisan Samman Nidhi) ಯ ಮೂಲಕ ಹಣಕಾಸಿನ ನೆರವು ಒದಗಿಸಿದೆ. ಈ ಯೋಜನೆಯಡಿ ಸರ್ಕಾರವು ಈವರೆಗೆ ಸುಮಾರು 75 ಸಾವಿರ ಕೋಟಿಗಳನ್ನು ರೂ.ಗಳನ್ನು  ರೈತರಿಗೆ  (Farmers) ನೀಡಿದೆ. ಈ ಯೋಜನೆಯಲ್ಲಿ ಸರ್ಕಾರವು ವಾರ್ಷಿಕವಾಗಿ 6,000 ರೂಪಾಯಿಗಳನ್ನು ನೀಡುತ್ತದೆ. ಈ ಯೋಜನೆಯ ಪ್ರಯೋಜನಗಳ ಬಗ್ಗೆ ಇಂದು ನಾವು ನಿಮಗೆ ಹೇಳುತ್ತೇವೆ. ವಾರ್ಷಿಕವಾಗಿ 6 ​​ಸಾವಿರ ರೂಪಾಯಿಗಳನ್ನು ಪಡೆಯುವುದರ ಹೊರತಾಗಿ ಸರ್ಕಾರವು ಈ ಯೋಜನೆಯಲ್ಲಿ ಅನೇಕ ಪ್ರಯೋಜನಗಳನ್ನು ಸಹ ನೀಡುತ್ತದೆ.

ಕಿಸಾನ್ ಕ್ರೆಡಿಟ್ ಕಾರ್ಡ್:
ವಾರ್ಷಿಕವಾಗಿ 6 ​​ಸಾವಿರ ರೂಪಾಯಿಗಳನ್ನು ಪಡೆಯುವುದರ ಹೊರತಾಗಿ ನೀವು ಕ್ರೆಡಿಟ್ ಕಾರ್ಡ್ನ ಪ್ರಯೋಜನವನ್ನು ಸಹ ಪಡೆಯುತ್ತೀರಿ. ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ಪಿಎಂ ಕಿಸಾನ್ ಯೋಜನೆಗೆ ಸೇರಿಸಲಾಗಿದೆ. ಈ ಯೋಜನೆಯ ಫಲಾನುಭವಿಗಳಿಗೆ ಸರ್ಕಾರದಿಂದ ಕ್ರೆಡಿಟ್ ಕಾರ್ಡ್ ನೀಡಲಾಗುತ್ತಿದೆ. ಇದನ್ನು ತಯಾರಿಸುವುದು ತುಂಬಾ ಸುಲಭ. ಪ್ರಸ್ತುತ ಸುಮಾರು 7 ಕೋಟಿ ರೈತರು ಕೆಸಿಸಿ ಹೊಂದಿದ್ದಾರೆ.

PM Kisan: ಕೋಟ್ಯಾಂತರ ರೈತರಿಗೆ ಹಣ, ನಿಮ್ಮ ಖಾತೆಗೂ ಬಂದಿದೆಯೇ ಎಂಬುದನ್ನು ಹೀಗೆ ಪರಿಶೀಲಿಸಿ

ಪಿಂಚಣಿ  ಪ್ರಯೋಜನ:
ಇದಲ್ಲದೆ ರೈತರಿಗೆ ಪಿಂಚಣಿ ಯೋಜನೆಯ ಲಾಭವೂ ಸಿಗುತ್ತದೆ. ಪಿಎಂ ಕಿಸಾನ್ ಮಾಂಧನ್ ಯೋಜನೆಗಾಗಿ ನಿಮಗೆ ಯಾವುದೇ ರೀತಿಯ ದಾಖಲೆ ಅಗತ್ಯವಿಲ್ಲ. ನೀವು 18ನೇ ವಯಸ್ಸಿನಲ್ಲಿ ಸೇರಿದರೆ, ಮಾಸಿಕ ಮೊತ್ತವು 55 ರೂ. ಅಥವಾ 660 ರೂ. ಅದೇ ಸಮಯದಲ್ಲಿ ನೀವು 40 ನೇ ವಯಸ್ಸಿನಲ್ಲಿ ಸೇರಿದರೆ ನೀವು ತಿಂಗಳಿಗೆ 200 ರೂಪಾಯಿ ಅಥವಾ ವಾರ್ಷಿಕವಾಗಿ 2400 ರೂಪಾಯಿಗಳನ್ನು ನೀಡಬೇಕಾಗುತ್ತದೆ.

ಸಮಾನವಾಗಿ ಕೊಡುಗೆ ನೀಡಲಿರುವ ಸರ್ಕಾರ:
ರೈತನ ಕೊಡುಗೆ ಪಿಎಂ ಕಿಸಾನ್ ಮಂದನ್‌ಗೆ ಸಮನಾಗಿರುತ್ತದೆ. ಪಿಎಂ ಕಿಸಾನ್ ಖಾತೆಗೆ ಸರ್ಕಾರ ಸಮಾನವಾಗಿ ಕೊಡುಗೆ ನೀಡುತ್ತದೆ. ಅಂದರೆ ನಿಮ್ಮ ಕೊಡುಗೆ 55 ರೂಪಾಯಿಗಳಾಗಿದ್ದರೆ ಸರ್ಕಾರವು ಸಹ 55 ರೂಪಾಯಿಗಳನ್ನು ನೀಡುತ್ತದೆ.

ರೈತ ಬೆಳೆದರೆ ಮಾತ್ರ ದೇಶದ ಉದ್ಧಾರ ಎಂದು ಕೃಷಿ ವಲಯಕ್ಕೆ ಲಾಕ್ ಡೌನ್ ವಿನಾಯಿತಿ: ಗೋಪಾಲಯ್ಯ

ಮಧ್ಯದಲ್ಲಿ ಬಿಡುವುದರಿಂದ ಹಣದ ನಷ್ಟವಿಲ್ಲ:
ಒಬ್ಬ ರೈತನು ಯೋಜನೆಯನ್ನು ಮಧ್ಯದಲ್ಲಿ ಬಿಡಲು ಬಯಸಿದರೆ ಅವನ ಹಣವು ನಷ್ಟವಾಗುವುದಿಲ್ಲ. ಅವನು ಯೋಜನೆಯನ್ನು ತೊರೆಯುವವರೆಗೂ ಠೇವಣಿ ಇಡಲಾಗುವುದು, ಅವನು ಬ್ಯಾಂಕುಗಳ ಉಳಿತಾಯ ಖಾತೆಗೆ ಸಮಾನವಾದ ಬಡ್ಡಿಯನ್ನು ಪಡೆಯುತ್ತಾನೆ. ಪಾಲಿಸಿ ಹೊಂದಿರುವ ರೈತ ಸತ್ತರೆ, ಅವನ ಹೆಂಡತಿಗೆ 50 ಪ್ರತಿಶತ ಸಿಗುತ್ತದೆ. ಎಲ್‌ಐಸಿ ರೈತರ ಪಿಂಚಣಿ ನಿಧಿಯನ್ನು ನಿರ್ವಹಿಸಲಿದೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮನ್ ನಿಧಿ ವೆಬ್‌ಸೈಟ್ www.pmkisan.gov.in ನಲ್ಲಿ ಇದರ ವಿಶೇಷ ಲಕ್ಷಣಗಳುಒಬ್ಬ ರೈತ ಪಿಎಂ-ಕಿಸಾನ್ ಸಮ್ಮನ್ ನಿಧಿಯ ಲಾಭವನ್ನು ಪಡೆದುಕೊಳ್ಳುತ್ತಿದ್ದರೆ, ಅವರು ಪ್ರಧಾನಿ ಕಿಸಾನ್ ಮಂಧನ್ ಯೋಜನೆಗಾಗಿ ಯಾವುದೇ ದಾಖಲೆಗಳನ್ನು ಒದಗಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸುತ್ತದೆ. ವಾಸ್ತವವಾಗಿ ಪಿಎಂ ಕಿಸಾನ್ ಸಮ್ಮನ್ ನಿಧಿಯಲ್ಲಿ ನೋಂದಣಿ ಸಮಯದಲ್ಲಿ ಸರ್ಕಾರವು ನಿಮ್ಮ ಎಲ್ಲಾ ಅಗತ್ಯ ದಾಖಲೆಗಳನ್ನು ಸಲ್ಲಿಸುತ್ತದೆ. ಅದೇ ಸಮಯದಲ್ಲಿ ಈ ಯೋಜನೆಯಡಿಯಲ್ಲಿ ಪಿಎಂ ಕಿಸಾನ್ ಸಮ್ಮನ್ ನಿಧಿ ಅಡಿಯಲ್ಲಿ ಪಡೆದ ಕಂತುಗಳಲ್ಲಿ ರೈತ ನೇರವಾಗಿ ಪಿಎಂ ಕಿಸಾನ್ ಮಂದನ್‌ಗೆ ಕೊಡುಗೆ ನೀಡುವ ಆಯ್ಕೆಯನ್ನು ಪಡೆಯುತ್ತಾನೆ. ಅಂದರೆ ಅವನು ತನ್ನ ಜೇಬಿನಿಂದ ಏನನ್ನೂ ಕೊಡಬೇಕಾಗಿಲ್ಲ.

Trending News