close

News WrapGet Handpicked Stories from our editors directly to your mailbox

ಮತ್ತೆ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿದ ಪಾಕ್; ಓರ್ವ ಯೋಧ ಹುತಾತ್ಮ

ಡೆಹ್ರಾಡೂನ್ ನಿವಾಸಿ ಲ್ಯಾನ್ಸ್ ನಾಯಕ್ ಸಂದೀಪ್ ಥಾಪಾ (35) ಗುಂಡಿನ ದಾಳಿಯಲ್ಲಿ ಮೃತರಾದ ಯೋಧ ಎಂದು ರಕ್ಷಣಾ ಇಲಾಖೆ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Updated: Aug 17, 2019 , 04:07 PM IST
ಮತ್ತೆ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿದ ಪಾಕ್; ಓರ್ವ ಯೋಧ ಹುತಾತ್ಮ

ಶ್ರೀನಗರ: ಜಮ್ಮು-ಕಾಶ್ಮೀರದ ರಾಜೌರಿ ಜಿಲ್ಲೆ ಸಮೀಪದ ಗಡಿ ನಿಯಂತ್ರಣ ರೇಖೆ ಬಳಿ ಶನಿವಾರ ಕದನ ವಿರಾಮ ಉಲ್ಲಂಘಿಸಿ ಪಾಕಿಸ್ತಾನ ಪಡೆ ನಡೆಸಿದ ಗುಂಡಿನ ದಾಳಿಯಲ್ಲಿ ಓರ್ವ ಭಾರತೀಯ ಯೋಧ ಹುತಾತ್ಮರಾಗಿರುವ ಘಟನೆ ನಡೆದಿದೆ.

ಡೆಹ್ರಾಡೂನ್ ನಿವಾಸಿ ಲ್ಯಾನ್ಸ್ ನಾಯಕ್ ಸಂದೀಪ್ ಥಾಪಾ (35) ಗುಂಡಿನ ದಾಳಿಯಲ್ಲಿ ಮೃತರಾದ ಯೋಧ ಎಂದು ರಕ್ಷಣಾ ಇಲಾಖೆ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಗಡಿನಿಯಂತ್ರಣ ರೇಖೆ ಬಳಿ ಶನಿವಾರ ಬೆಳಿಗ್ಗೆ 6.30ರಿಂದಲೇ ಗುಂಡಿನ ದಾಳಿ ಆರಂಭವಾಗಿದ್ದು, ಪಾಕ್ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆಯೂ ಪ್ರತಿದಾಳಿ ನಡೆಸಿದೆ. ಈ ಸಂದರ್ಭದಲ್ಲಿ ಭಾರತೀಯ ಯೋಧರೊಬ್ಬರು ಹುತಾತ್ಮರಾಗಿದ್ದಾರೆ.

ಭಾರತೀಯ ಸೇನಾಪಡೆಯ ದಾಳಿಗೆ ಪಾಕಿಸ್ತಾನದ ನಾಲ್ಕು ಸೈನಿಕರು ಸಾವನ್ನಪ್ಪಿರುವುದಾಗಿ ಹೇಳಿಕೆ ನೀಡಿದ ಎರಡು ದಿನದ ಬಳಿಕ ಕದನ ವಿರಾಮ ಉಲ್ಲಂಘಿಸಿ ಪಾಕ್ ಈ ದಾಳಿ ನಡೆಸಿದೆ ಎಂದು ವರದಿ ತಿಳಿಸಿದೆ.