ಧಂಡುಕ : ಸುನ್ನಿ ವಕ್ಫ್ ಮಂಡಳಿ ಪ್ರತಿನಿಧಿಯಾಗಿರುವ ವಕೀಲ ಕಪಿಲ್ ಸಿಬಲ್ ಅವರು ಅಯೋಧ್ಯೆಯ ವಿವಾದದ ವಿಚಾರಣೆಯನ್ನು 2019ರ ಲೋಕಸಭೆ ಚುನಾವಣೆ ನಂತರ ನಡೆಸಬೇಕು ಎಂದು ನ್ಯಾಯಾಲಯದಲ್ಲಿ ಮಂಡಿಸಿದ ವಾದದ ಹಿಂದಿನ ತರ್ಕವನ್ನು ಪ್ರಧಾನಿ ನರೇಂದ್ರ ಮೋದಿ ಪ್ರಶ್ನಿಸಿದ್ದಾರೆ.
ಈ ಎರಡು ಸಮಸ್ಯೆಗಳು ಒಂದಕ್ಕೊಂದು ಹೇಗೆ ಸಂಬಂಧಿಸಿವೆ ಎಂದು ಮೋದಿ ಕಾಂಗ್ರೆಸ್ ನಾಯಕನನ್ನು ಕೇಳಿದ್ದಾರೆ. "ಕಪಿಲ್ ಸಿಬಲ್ ಮುಸ್ಲಿಂ ಸಮುದಾಯದ ಪರವಾಗಿ ಹೋರಾಡುತ್ತಿರುವ ಕುರಿತು ಯಾವುದೇ ಆಕ್ಷೇಪಣೆಯಿಲ್ಲ. ಆದರೆ ಮುಂದಿನ ಚುನಾವಣೆ ತನಕ ಅಯೋಧ್ಯಾ ವಿವಾದಕ್ಕೆ ಪರಿಹಾರ ದೊರೆಯುವುದಿಲ್ಲವೆಂದು ಅವರು ಹೇಗೆ ಹೇಳಬಹುದು? ಲೋಕಸಭಾ ಚುನಾವಣೆಗೆ ಅದು ಹೇಗೆ ಸಂಬಂಧಿಸಿದೆ" ಎಂದು ಧಂದೂಕದಲ್ಲಿ ನಡೆದ ಚುನಾವಣಾ ರ್ಯಾಲಿಯೊಂದರಲ್ಲಿ ಮೋದಿ ಪ್ರಶ್ನಿಸಿದ್ದಾರೆ.
ಅಯೋಧ್ಯಾ ರಾಮ್ ಮಂದಿರ ನಿರ್ಮಾಣ ವಿವಾದದ ಅಂತಿಮ ಹಂತದ ವಿಚಾರಣೆಯನ್ನು ಸುಪ್ರಿಂಕೋರ್ಟ್ ಡಿ.5 ರಂದು ಆರಂಭಿಸಿತು. ಆದರೆ, ಕಪಿಲ್ ಸಿಬಲ್ ಅವರು 2019ರ ಲೋಕಸಭಾ ಚುನಾವಣೆ ನಂತರ ವಿಚಾರಣೆ ನಡೆಸುವಂತೆ ಮನವಿ ಸಲ್ಲಿಸಿದ್ದರಿಂದ ನ್ಯಾಯಾಲಯ ವಿಚಾರಣೆಯನ್ನು ಮುಂದೂಡಿತು.