13 ವರ್ಷಗಳ ನಂತರ ಮತ್ತೆ ರಸ್ತೆಗಿಳಿಯಲಿದೆ 'ಬಜಾಜ್ ಚೇತಕ್'!

'ನಮ್ಮ ಬಜಾಜ್' ಎಂದರೆ ಅಜ್ಜಿ-ತಾತನ ಸ್ಕೂಟರ್ ಎಂದು ನೆನಪಿಸುವ ಸ್ಕೂಟರ್ ಬಜಾಜ್ ಚೇತಕ್. ದಶಕಗಳ ಕಾಲ ಭಾರತೀಯ ರಸ್ತೆಗಳಲ್ಲಿ ದೀರ್ಘಕಾಲ ರಾರಾಜಿಸಿದ ಸ್ಕೂಟರ್ ಅದೇ ಚೇತಕ್. ಈಗ ಈ ಮೆಚ್ಚಿನ ಸ್ಕೂಟರ್ ಅನ್ನು ಮತ್ತೊಮ್ಮೆ ಬಿಡುಗಡೆ ಮಾಡಲು ಕಂಪನಿ ತಯಾರಿ ನಡೆಸುತ್ತಿದೆ ಎಂಬ ಸುದ್ದಿ ಇದೆ.  

Last Updated : Aug 30, 2019, 11:02 AM IST
13 ವರ್ಷಗಳ ನಂತರ ಮತ್ತೆ ರಸ್ತೆಗಿಳಿಯಲಿದೆ 'ಬಜಾಜ್ ಚೇತಕ್'! title=

ನವದೆಹಲಿ: 'ನಮ್ಮ ಬಜಾಜ್' ಎಂದರೆ ಅಜ್ಜಿ-ತಾತನ ಸ್ಕೂಟರ್ ಎಂದು ನೆನಪಿಸುವ ಸ್ಕೂಟರ್ ಬಜಾಜ್ ಚೇತಕ್. ದಶಕಗಳ ಕಾಲ ಭಾರತೀಯ ರಸ್ತೆಗಳಲ್ಲಿ ದೀರ್ಘಕಾಲ ರಾರಾಜಿಸಿದ ಸ್ಕೂಟರ್ ಅದೇ ಚೇತಕ್. ಈಗ ಈ ಮೆಚ್ಚಿನ ಸ್ಕೂಟರ್ ಅನ್ನು ಮತ್ತೊಮ್ಮೆ ಬಿಡುಗಡೆ ಮಾಡಲು ಕಂಪನಿ ತಯಾರಿ ನಡೆಸುತ್ತಿದೆ ಎಂಬ ಸುದ್ದಿ ಇದೆ.

ಈ ಬಾರಿ, ಸ್ಕೂಟರ್ ಮಾರುಕಟ್ಟೆಯ ಟ್ರೆಂಡ್ ಪ್ರಕಾರ, ಆಟೋ ಗೇರ್ ಸೌಲಭ್ಯ ಹೊಂದಿರುವ ಸಾಧ್ಯತೆ ಹೆಚ್ಚು. ಬಜಾಜ್ ಆಟೋ ತನ್ನ ಸ್ಕೂಟರ್ ಬ್ರಾಂಡ್ 'ಚೇತಕ್' ಅನ್ನು ಮರು ನೋಂದಾಯಿಸಿದಾಗಿನಿಂದ ಚೇತಕ್ ಆಗಮನದ ವರದಿಗಳು ಬರುತ್ತಲೇ ಇವೆ. ಸ್ಕೂಟರ್‌ನ ಹೊಸ ಅವತಾರ ಇ-ಸ್ಕೂಟರ್ ರೂಪದಲ್ಲಿರಬಹುದು ಎಂಬ ಸುದ್ದಿಯೂ ಇದೆ.

ಸ್ಕೂಟರ್ ಸೆಪ್ಟೆಂಬರ್‌ನಲ್ಲಿ ಲಾಂಚ್ ಆಗುವ ಸಾಧ್ಯತೆ:
ಸ್ಕೂಟರ್‌ಗಳ ಹೆಚ್ಚುತ್ತಿರುವ ಬೇಡಿಕೆಯ ದೃಷ್ಟಿಯಿಂದ, ಬಜಾಜ್ ಮತ್ತೊಮ್ಮೆ ಈ ವಿಭಾಗಕ್ಕೆ ಮರಳಲು ತಯಾರಿ ನಡೆಸುತ್ತಿದ್ದಾರೆ ಮತ್ತು ಅದೂ ಎಲೆಕ್ಟ್ರಿಕ್ ಸ್ಕೂಟರ್‌ಗಳೊಂದಿಗೆ ಎಂದು ಹೇಳಲಾಗಿದೆ. ಈ ಸ್ಕೂಟರ್ ಅನ್ನು ಬಜಾಜ್ ಆಟೋದ ವಿದ್ಯುತ್ ವಿಭಾಗವಾದ ಬಜಾಜ್ ಅರ್ಬನ್ ಮೂಲಕ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು. ದೇಶದಲ್ಲಿ ಟೆಸ್ಟಿಂಗ್ ಸಮಯದಲ್ಲಿ ಬಜಾಜ್ ಅರ್ಬನೈಟ್ ಸ್ಕೂಟರ್ ಹಲವು ಬಾರಿ ಕಂಡುಬಂದಿದೆ. ಇತ್ತೀಚೆಗೆ, ಈ ಸ್ಕೂಟರ್ ಟೆಸ್ಟಿಂಗ್ ಸಮಯದಲ್ಲಿ ಕೆಲವು ಚಿತ್ರಗಳು ಮತ್ತು ವೀಡಿಯೊಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿವೆ. ಇದು 2019 ರ ಸೆಪ್ಟೆಂಬರ್‌ನಲ್ಲಿ ಸ್ಕೂಟರ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಆದರೆ, ಬಿಡುಗಡೆಯಾಗುವ ನಿಗದಿತ ದಿನಾಂಕ ಇನ್ನೂ ಬಹಿರಂಗಗೊಂಡಿಲ್ಲ.

ಈ ಸ್ಕೂಟರ್ ಹಳೆಯ ಸ್ಕೂಟರ್‌ನಂತೆ ಕಾಣಿಸುತ್ತದೆ:
ಬಜಾಜ್ ಅವರ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗಗೊಂಡಿಲ್ಲ, ಆದರೆ ಇದರ ಸ್ಟೈಲಿಂಗ್ ಕಂಪನಿಯ ಹಳೆಯ ಸ್ಕೂಟರ್‌ನಂತೆಯೇ ಇರಬಹುದು ಎನ್ನಲಾಗಿದೆ. ಇದು ರೆಟ್ರೊ ಲುಕ್ ಹೊಂದಿರುವ ಸ್ಕೂಟರ್‌ಗಳನ್ನು ನೆನಪಿಸುತ್ತದೆ. ವಿಶಾಲ ಮುಂಭಾಗದ ಏಪ್ರನ್, ಬಾಗಿದ ಸೈಡ್ ಪ್ಯಾನೆಲ್‌ಗಳು ಮತ್ತು ದೊಡ್ಡ ರಿಯರ್ ವ್ಯೂ ಮಿರರ್‌ನೊಂದಿಗೆ ಸ್ಕೂಟರ್‌ನ ಒಟ್ಟಾರೆ ನೋಟವು ಬಲವಾಗಿರುತ್ತದೆ. ಆದಾಗ್ಯೂ, ರೆಟ್ರೊ ಮತ್ತು ಆಧುನಿಕ ನಡುವೆ ಸಮತೋಲನವನ್ನು ಸೃಷ್ಟಿಸಲು, ಕಂಪನಿಯು  ಸ್ಕೂಟರ್‌ನಲ್ಲಿ ಅಲಾಯ್ ವೀಲ್‌ಗಳು, ಫ್ರಂಟ್ ಮತ್ತು ರಿಯರ್ ಡಿಸ್ಕ್ ಬ್ರೇಕ್ ಮತ್ತು ಎಲ್ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಟೈಲ್ ಲೈಟ್‌ಗಳನ್ನು ನೀಡಬಹುದು.

2006 ರಲ್ಲಿ ಸ್ಕೂಟರ್ ತಯಾರಿಕೆಯನ್ನು ನಿಲ್ಲಿಸಲಾಯಿತು:
ಗಮನಿಸಬೇಕಾದ ಸಂಗತಿಯೆಂದರೆ, 2006 ರಲ್ಲಿ, ರಾಹುಲ್ ಬಜಾಜ್ ಅವರ ಪುತ್ರ ರಾಜೀವ್ ಬಜಾಜ್ ಕಂಪನಿಯ ಆಡಳಿತವನ್ನು ವಹಿಸಿಕೊಂಡ ನಂತರ, ಬಜಾಜ್ ಸ್ಕೂಟರ್ ತಯಾರಿಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವ ಮೂಲಕ ಮೋಟರ್ ಸೈಕಲ್‌ಗಳತ್ತ ಮಾತ್ರ ಗಮನಹರಿಸಲು ಪ್ರಾರಂಭಿಸಿದರು. ರಾಜೀವ್ ಬಜಾಜ್ ಕಂಪನಿಯು ಹೊಸ ಪೀಳಿಗೆಯೊಂದಿಗೆ ಸಂಪರ್ಕ ಸಾಧಿಸುವ ಮೂಲಕ ಮಾರುಕಟ್ಟೆಯನ್ನು ಸಂಪರ್ಕಿಸಬೇಕಾಗುತ್ತದೆ ಎಂದು ನಂಬಿದ್ದರು. ಆದರೆ ಅವರ ತಂದೆ ರಾಹುಲ್ ಬಜಾಜ್ ಅವರು ಸ್ಕೂಟರ್ ನಿರ್ಮಾಣವನ್ನು ಸ್ಥಗಿತಗೊಳಿಸದಂತೆ ಸಲಹೆ ನೀಡಿದರು.

ಬೈಕ್‌ಗಳಿಗೆ ಹೋಲಿಸಿದರೆ ಸ್ಕೂಟರ್ ಮಾರಾಟ ಹೆಚ್ಚಾಗಿದೆ:
ಬಜಾಜ್ ಆಟೋ ತನ್ನ ಸ್ಕೂಟರ್ ಬ್ರಾಂಡ್ 'ಚೇತಕ್' ಅನ್ನು ತನ್ನ ಉತ್ಪಾದನೆಯನ್ನು ಪ್ರಾರಂಭಿಸಲು ಮರು ನೋಂದಾಯಿಸಿತ್ತು. ಭಾರತೀಯ ವಾಹನ ಮಾರುಕಟ್ಟೆಯಲ್ಲಿ ನಾಲ್ಕು ಚಕ್ರ ವಾಹನಗಳಿಗಿಂತ ದ್ವಿಚಕ್ರ ವಾಹನಗಳ ಮಾರಾಟ ಯಾವಾಗಲೂ ಹೆಚ್ಚಾಗಿದೆ. ದ್ವಿಚಕ್ರ ವಾಹನಗಳಲ್ಲಿ, ಇತ್ತೀಚಿನ ವರ್ಷಗಳಲ್ಲಿ ಮೋಟರ್ ಸೈಕಲ್‌ಗಳಿಗೆ ಹೋಲಿಸಿದರೆ ಸ್ಕೂಟರ್‌ಗಳ ಮಾರಾಟ ಹೆಚ್ಚಾಗಿದೆ. ಸ್ಕೂಟರ್ ವಿಭಾಗದಿಂದ ಸಂಪೂರ್ಣವಾಗಿ ನಿರ್ಗಮಿಸಿರುವ ಬಜಾಜ್ ಆಟೋ, ಸ್ಕೂಟರ್ ಮಾರುಕಟ್ಟೆಯನ್ನು ಗಂಭೀರವಾಗಿ ಪರಿಗಣಿಸಿದೆ ಮತ್ತು ಚೇತಕ್ ಉತ್ಪಾದನೆಯನ್ನು ಪುನರಾರಂಭಿಸಲು ಯೋಜಿಸಿದೆ.

ಬಜಾಜ್ ಕ್ರಿಸ್ಟಲ್ ಈ ಕಂಪನಿಯಿಂದ ತಯಾರಾಗಿದ್ದ ಕೊನೆಯ ಸ್ಕೂಟರ್:
ಹ್ಯಾಂಡಲ್‌ನಲ್ಲಿ ಗೇರ್ ಬಾಕ್ಸ್‌ನೊಂದಿಗೆ ಬಂದ ಕಂಪನಿಯ ಕೊನೆಯ ಮತ್ತು ಜನಪ್ರಿಯ ಸ್ಕೂಟರ್ ಬಜಾಜ್ ಚೇತಕ್. ಆದಾಗ್ಯೂ, ಹೋಂಡಾ, ಹೀರೋ ಮತ್ತು ಟಿವಿ-ಎಸ್‌ನಂತಹ ಕಂಪನಿಗಳು ಸ್ವಯಂಚಾಲಿತ ಗೇರ್‌ಬಾಕ್ಸ್‌ನೊಂದಿಗೆ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿದ ನಂತರ, ಅದರ ಮಾರಾಟವು ಕಡಿಮೆಯಾಗಲು ಪ್ರಾರಂಭಿಸಿತು ಮತ್ತು ಕಂಪನಿಯು ಅದನ್ನು ತಯಾರಿಸುವುದನ್ನು ನಿಲ್ಲಿಸಿತು. ಚೇತಕ್ ನಂತರ, ಬಜಾಜ್ ಆಟೋ ತನ್ನ ಸ್ವಯಂಚಾಲಿತ ಸ್ಕೂಟರ್ ಕ್ರಿಸ್ಟಲ್ ಅನ್ನು ಕ್ರಿಸ್ಟಲ್ ಎಂಬ ಹೆಸರಿನಿಂದ ಬಿಡುಗಡೆ ಮಾಡಿತು. ಆದಾಗ್ಯೂ, ಬೇಡಿಕೆಯ ಕೊರತೆಯಿಂದಾಗಿ ಅದು ಸಹ ವಿಫಲವಾಗಿದೆ. ಕಂಪನಿಯು ಪ್ರಸ್ತುತ ಬೈಕುಗಳನ್ನು ಮಾತ್ರ ತಯಾರಿಸಲು ಹೆಚ್ಚು ಗಮನ ಹರಿಸುತ್ತಿದೆ.

ಚೇತಕ್ ಟ್ರೆಂಡ್ ಗೆ ಅನುಗುಣವಾಗಿರುತ್ತದೆ:
ಮಾರುಕಟ್ಟೆಯ ಟ್ರೆಂಡ್ ಗಮನಿಸಿ ಬಜಾಜ್ ಚೇತಕ್ ಅನ್ನು ಮತ್ತೆ ಪ್ರಾರಂಭಿಸಲು ಕಂಪನಿಯು ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಆದಾಗ್ಯೂ, ಇಂದಿನ ಪೀಳಿಗೆಗೆ ಅನುಗುಣವಾಗಿ ತನ್ನ ಹೊಸ ಚೇತಕ್ ಸಾಂಪ್ರದಾಯಿಕ ಅಥವಾ ಸ್ವಯಂಚಾಲಿತವಾಗಿದೆಯೇ ಎಂದು ಕಂಪನಿಯು ಇನ್ನೂ ಬಹಿರಂಗಪಡಿಸಿಲ್ಲ.
 

Trending News