ಮೇ ತಿಂಗಳಿನಲ್ಲಿ ಹಲವು ದಿನ ಬ್ಯಾಂಕ್ ಗಳು ಬಂದ್ ಇರಲಿವೆ, ನಿಮ್ಮ ಹಣಕಾಸಿನ ವ್ಯವಹಾರ ಶೀಘ್ರ ಪ್ಲಾನ್ ಮಾಡಿ

ದೇಶಾದ್ಯಂತ Lockdown ಘೋಷಣೆಯ ಮಧ್ಯೆಯೇ ಮೇ ತಿಂಗಳು ಕೂಡ ಆರಂಭಗೊಂಡಿದೆ. 

Last Updated : May 1, 2020, 02:51 PM IST
ಮೇ ತಿಂಗಳಿನಲ್ಲಿ ಹಲವು ದಿನ ಬ್ಯಾಂಕ್ ಗಳು ಬಂದ್ ಇರಲಿವೆ, ನಿಮ್ಮ ಹಣಕಾಸಿನ ವ್ಯವಹಾರ ಶೀಘ್ರ ಪ್ಲಾನ್ ಮಾಡಿ title=

ನವದೆಹಲಿ: ಮೇ ತಿಂಗಳು ಆರಂಭಗೊಂಡಿದೆ. ಕೊರೊನಾ ವೈರಸ್ ಪ್ರಕೋಪದ ಹಿನ್ನೆಲೆ ಈಗಾಗಲೇ ದೇಶಾದ್ಯಂತ ಎಲ್ಲ ವ್ಯವಹಾರಗಳು ಸ್ಥಗಿತಗೊಂಡಿವೆ. ಈ ತಿಂಗಳಿನಲ್ಲಿ ಭಾರತದಲ್ಲಿ ಹಲವು ಪ್ರಮುಖ ಪರ್ವಗಳಿವೆ. ಹೀಗಾಗಿ ಅಂದಿನ ದಿನ ಮಹತ್ವದ ಸೇವೆಗಳೂ ಕೂಡ ಬಂದ್ ಇರಲಿವೆ. ಈ ತಿಂಗಳಿನಲ್ಲಿ ಬುದ್ಧ ಪೌರ್ಣಿಮೆ ಹಾಗೂ ಈದ್ ಈ ಎರಡು ಮಹಾಪರ್ವಗಳಿವೆ. ಹೀಗಾಗಿ ದೇಶಾದ್ಯಂತ ಈ ಎರಡು ದಿನ ಎಲ್ಲ ಆರ್ಥಿಕ ವ್ಯವಹಾರಗಳು ಬಂದ್ ಇರಲಿವೆ ಇದಲ್ಲದೆ ಈ ತಿಂಗಳಲ್ಲಿ ಒಟ್ಟು ಆರು ದಿನಗಳ ಕಾಲ ಸಾರ್ವತ್ರಿಕ ರಜೆಗಳು ಇರಲಿವೆ.

ಪಶ್ಚಿಮ ಬಂಗಾಳ
ದೇಶದ ಕೆಲ ಇತರೆ ರಾಜ್ಯಗಳಲ್ಲಿ ಸ್ಥಳೀಯ ರಜಾದಿನಗಳು ಇರುವ ಕಾರಣ ಬ್ಯಾಂಕ್ ಹಾಗೂ ಇತರೆ ಆವಶ್ಯಕ ಸರ್ಕಾರಿ ಸೇವೆಗಳು ಬಂದ್ ಇರಲಿವೆ. ಪಶ್ಚಿಮ ಬಂಗಾಳದಲ್ಲಿ ಇದೆ ತಿಂಗಳು ರವಿಂದ್ರ ಜಯಂತಿ ಆಚರಿಸಲಾಗುತ್ತದೆ. ಮೇ 8 ರಂದು ರವಿಂದ್ರ ಜಯಂತಿ ಆಚರಿಸಲಾಗುತ್ತದೆ.

ಜಮ್ಮು-ಕಾಶ್ಮೀರ 
ದೇಶ ಹಾಗೂ ವಿಶ್ವದ ಮುಸ್ಲಿಂ ಬಾಂಧವರ ಪಾಲಿಗೆ ಈದ್ ಅತಿ ದೊಡ್ಡ ಹಬ್ಬವಾಗಿದೆ. ಹೀಗಾಗಿ ಮುಸ್ಲಿಂ ಬಾಹುಳ್ಯವುಳ್ಳ ಜಮ್ಮು ಮಾತು ಕಾಶ್ಮೀರದಲ್ಲಿ ಈದ್ ಹಬ್ಬಕ್ಕೂ ಮೊದಲು ಐದು ದಿನಗಳ ಕಾಲ ರಜೆ ಇರಲಿದೆ. ಇದಲ್ಲದೆ ರಾಜ್ಯದಲ್ಲಿ ಮೇ 21ಕ್ಕೆ Shab-E-Qadr ಹಾಗೋ ಮೇ 22 ಕ್ಕೆ Jamat-ul-Vida ಅಂಗವಾಗಿ ರಜೆ ಇರಲಿವೆ.

ಈ ತಿಂಗಳ ರಜಾ ದಿನಗಳ ಪಟ್ಟಿ ಇಲ್ಲಿದೆ 
1 ಮೇ 2020- ಶುಕ್ರವಾರ- ಕಾರ್ಮಿಕ ದಿನಾಚರಣೆ/ ಮೇ ದಿವಸ
3 ಮೇ 2020-ಭಾನುವಾರ -ಸಾಪ್ತಾಹಿಕ ರಜೆ.
7 ಮೇ 2020 - ಗುರುವಾರ-ಬುದ್ಧ ಪೌರ್ಣಿಮೆ
9 ಮೇ 2020- ಶನಿವಾರ-ತಿಂಗಳ ಎರಡನೇ ಶನಿವಾರ
10 ಮೇ 2020 -ಭಾನುವಾರದ ರಜೆ
17 ಮೇ 2020- ಭಾನುವಾರದ ರಜೆ
23 ಮೇ 2020- ಶನಿವಾರ- ತಿಂಗಳ ನಾಲ್ಕನೇ ಶನಿವಾರ 
24 ಮೇ 2020 -ಮತ್ತೆ ಭಾನುವಾರದ ರಜೆ
25 ಮೇ 2020 -ಸೋಮವಾರ- ಈದ್-ಉಲ್-ಫಿತ್ರ್ ಹಬ್ಬದ ಪ್ರಯುಕ್ತ ರಜೆ
31 ಮೇ 2020-ಭಾನುವಾರದ ರಜೆ.

Trending News