ನವದೆಹಲಿ: ಕೃಷಿ ಕಾನೂನುಗಳ ವಿರುದ್ಧ ರೈತರು ಇಂದು ಭಾರತ್ ಬಂದ್ಗೆ ಕರೆ ನೀಡಿದ್ದಾರೆ. ಹೊಸ ಕೃಷಿ ಮಸೂದೆ ವಿರುದ್ಧವಾಗಿ ರೈತರು ನಡೆಸುತ್ತಿರುವ ಹೋರಾಟಕ್ಕೆ ನಮ್ಮ ಬೆಂಬಲ ಇದೆ. ಆದರೆ ಭಾರತ್ ಬಂದ್ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಬ್ಯಾಂಕ್ ಒಕ್ಕೂಟಗಳು ಸ್ಪಷ್ಟಪಡಿಸಿವೆ.
ಭಾರತ್ ಬಂದ್ನಲ್ಲಿ ಬ್ಯಾಂಕುಗಳು ಪಾಲ್ಗೊಳ್ಳುವುದಿಲ್ಲ:
ರೈತರ ಹೋರಾಟಕ್ಕೆ ಬ್ಯಾಂಕುಗಳ ಒಕ್ಕೂಟ ಬೆಂಬಲ ನೀಡಲಿದೆ. ಆದರೆ ರೈತರು ಕರೆ ನೀಡಿರುವ ಭಾರತ್ ಬಂದ್ನಲ್ಲಿ (Bharat Bandh) ಪಾಲ್ಗೊಳ್ಳುವುದಿಲ್ಲ ಎಂದು ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟದ (ಎಐಬಿಒಸಿ) ಪ್ರಧಾನ ಕಾರ್ಯದರ್ಶಿ ಸೌಮ್ಯಾ ದತ್ತಾ ಹೇಳಿದ್ದಾರೆ. ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (ಎಐಬಿಇಎ) ಪ್ರಧಾನ ಕಾರ್ಯದರ್ಶಿ ಸಿ.ಎಚ್.ವೆಂಕಟಾಚಲಂ ಅವರು ಒಕ್ಕೂಟ ಮುಷ್ಕರ ನಡೆಸುವುದಿಲ್ಲ. ಆದರೆ ರೈತರ ಆಂದೋಲನವನ್ನು ನಾವು ಬೆಂಬಲಿಸುತ್ತೇವೆ ಎಂದು ಹೇಳಿದ್ದಾರೆ.
Bharat Bandh: ರೈತರ ಹೋರಾಟಕ್ಕೆ ಬೆಂಬಲ, ಇಂದು ಏನಿರುತ್ತೆ? ಏನಿಲ್ಲ? ಇಲ್ಲಿದೆ ವಿವರ
'ರೈತರೊಂದಿಗಿದ್ದೇವೆ ಆದರೆ ಕಾರ್ಯನಿರ್ವಹಣೆಯ ಮೇಲೆ ಯಾವುದೇ ಪರಿಣಾಮವಿಲ್ಲ':
ದೇಶದ ರೈತರ (Farmers) ಸಮಸ್ಯೆಗಳಿಗೆ ಬೆಂಬಲವಾಗಿ ಯೂನಿಯನ್ ಸದಸ್ಯರು ಕಪ್ಪು ಬ್ಯಾಡ್ಜ್ಗಳನ್ನು ಧರಿಸಿ ಕರ್ತವ್ಯಕ್ಕೆ ಹಾಜರಾಗುತ್ತಾರೆ. ಬ್ಯಾಂಕಿನ ಶಾಖೆಗಳ ಮುಂದೆ ಫಲಕಗಳನ್ನು ಹಾಕುತ್ತಾರೆ ಎಂದು ವೆಂಕಟಾಚಲಂ ಹೇಳಿದರು. ಆದರೆ ಈ ಅವಧಿಯಲ್ಲಿ ಬ್ಯಾಂಕಿನ ಕಾರ್ಯವೈಖರಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ವೆಂಕಟಾಚಲಂ ಸ್ಪಷ್ಟಪಡಿಸಿದರು.
ಇಂದು ಭಾರತ ಬಂದ್, ರೈತರ ಹೋರಾಟಕ್ಕೆ ಭಾರೀ ಬೆಂಬಲ
ಕೃಷಿ ಕಾನೂನುಗಳಿಗೆ ವಿರುದ್ಧವಾಗಿ ಭಾರತ್ ಬಂದ್ :
ಹೊಸ ಕೃಷಿ ಕಾನೂನುಗಳ ವಿರುದ್ಧ ಹೆಚ್ಚಾಗಿ ಪಂಜಾಬ್ ಮತ್ತು ಹರಿಯಾಣದ ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಹೊಸ ಕೃಷಿ ಕಾನೂನುಗಳು ಕನಿಷ್ಠ ಬೆಂಬಲ ಬೆಲೆಗೆ (MSP) ಸಂಬಂಧಿಸಿದ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತವೆ ಎಂದು ರೈತರು ಕಳವಳ ವ್ಯಕ್ತಪಡಿಸಿದ್ದಾರೆ.