Basava Jayanti: "ದಯವೇ ಧರ್ಮದ ಮೂಲವಯ್ಯಾ" ಸಂದೇಶ ಸಾರಿದ ಬಸವಣ್ಣನವರ ಜಯಂತಿ: ಶುಭಕೋರಿದ ಪ್ರಧಾನಿ

ಬಸವೇಶ್ವರರು ಹಲವಾರು ಸಾಮಾಜಿಕ ಸುಧಾರಣೆಗಳನ್ನು ತಂದಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಜಾತಿ ವ್ಯವಸ್ಥೆ, ಸಮಾನ ಅವಕಾಶ ಮತ್ತು ಶ್ರಮಗಳ ಕುರಿತಾಗಿ ಅವರು ಸಮಾಜಕ್ಕೆ ತತ್ವವನ್ನು ಬೋಧನೆ ಮಾಡಿದ್ದಾರೆ.

Written by - Bhavishya Shetty | Last Updated : May 3, 2022, 12:14 PM IST
  • ಇಂದು ದಾರ್ಶನಿಕ, ಕವಿ ಬಸವಣ್ಣನವರ ಜಯಂತಿ
  • ಬಸವಣ್ಣನವರ ಜನ್ಮದಿನವನ್ನು ಹಬ್ಬದಂತೆ ಆಚರಿಸಲಾಗುತ್ತದೆ
  • ಶುಭ ಕೋರಿದ ಪ್ರಧಾನಿ ನರೇಂದ್ರ ಮೋದಿ
Basava Jayanti: "ದಯವೇ ಧರ್ಮದ ಮೂಲವಯ್ಯಾ" ಸಂದೇಶ ಸಾರಿದ ಬಸವಣ್ಣನವರ ಜಯಂತಿ: ಶುಭಕೋರಿದ ಪ್ರಧಾನಿ  title=
Basava Jayanti 2022

12ನೇ ಶತಮಾನದಲ್ಲಿ ಜಗತ್ತು ಕಂಡ ದಾರ್ಶನಿಕ ಬಸವಣ್ಣನವರು. ಹಿಂದೂ ಪಂಚಾಂಗದ ಪ್ರಕಾರ, ಬಸವಣ್ಣನರು ಹುಟ್ಟಿದ್ದು ಶುಕ್ಲ ಪಕ್ಷದ ವೈಶಾಖ ಮಾಸದ 3ನೇ ದಿನದಂದು. ಇಂದು ಬಸವಣ್ಣನವರ ಜನ್ಮದಿನವನ್ನು ಹಬ್ಬದಂತೆ ಹಲವೆಡೆ ಆಚರಿಸಲಾಗುತ್ತದೆ. ಇನ್ನು ಕನ್ನಡದ ಕಂಪನ್ನು ಜಗತ್ತಿನಲ್ಲಿ ಪಸರಿಸಿದ ಬಸವಣ್ಣನವರ ಬಗ್ಗೆ ಇಲ್ಲಿದೆ ಒಂದಿಷ್ಟು ಮಾಹಿತಿ. 

ಇದನ್ನು ಓದಿ: ಶನಿಯ ಕುಂಭ ರಾಶಿ ಪ್ರವೇಶದಿಂದಾಗಿ ಈ ರಾಶಿಯವರು ಪ್ರತೀ ಹಂತದಲ್ಲೂ ಎದುರಿಸಬೇಕಾಗುತ್ತದೆ ಕಷ್ಟ

ಬಸವೇಶ್ವರರು ಹಲವಾರು ಸಾಮಾಜಿಕ ಸುಧಾರಣೆಗಳನ್ನು ತಂದಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಜಾತಿ ವ್ಯವಸ್ಥೆ, ಸಮಾನ ಅವಕಾಶ ಮತ್ತು ಶ್ರಮಗಳ ಕುರಿತಾಗಿ ಅವರು ಸಮಾಜಕ್ಕೆ ತತ್ವವನ್ನು ಬೋಧನೆ ಮಾಡಿದ್ದಾರೆ. "ದಯವೇ ಧರ್ಮದ ಮೂಲವಯ್ಯಾ" ಎನ್ನುತ್ತಾ ಮಾನವೀಯತೆಯ ಸಂದೇಶ ಸಾರಿದ್ದಾರೆ. 

ಬೀದರ್‌ನ ಬಸವಕಲ್ಯಾಣದಲ್ಲಿ 12ನೇ ಶತಮಾನದಲ್ಲಿ ಬಸವಣ್ಣನವರು ಅನುಭವ ಮಂಟಪವನ್ನು ಸ್ಥಾಪಿಸಿದರು. ಈ ವೇದಿಕೆಯಲ್ಲಿ ಲಿಂಗಾಯತ ಆಧ್ಯಾತ್ಮ ಸಂತರು ಮತ್ತು ತತ್ವಜ್ಞಾನಿಗಳ ಸಂಘವೊಂದು ಕಾರ್ಯನಿರ್ವಹಿಸುತ್ತಿತ್ತು. ಅವರು ತಮ್ಮ ಜೀವನದ ಅನುಭವಗಳು, ಜ್ಞಾನವನ್ನು ಹಂಚಿಕೊಳ್ಳುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶವನ್ನು ಸಾರುವಂತೆ ಮಾಡಿದ್ದರು. 

ಮೈಸೂರಿನಲ್ಲಿ ಆಚರಣೆ: 
ಇನ್ನು ಮೈಸೂರಿನಲ್ಲಿ ಅಖಿ ಲ ಭಾರತ ವೀರಶೈವ ಮಹಾಸಭಾ, ವೀರಶೈವ ಲಿಂಗಾಯತ ಸಂಘಟನೆಗಳು, ಬಸವ ಬಳಗ ಒಕ್ಕೂಟದ ವತಿಯಿಂದ ಬಸವ ಜಯಂತಿಯ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ನಂದಿಧ್ವಜಕ್ಕೆ ಪೂಜೆ ಸಲ್ಲಿಸಿ, ಜೆಎಸ್‌ಎಸ್ ಮಹಾವಿದ್ಯಾಪೀಠ ವೃತ್ತದಲ್ಲಿರುವ ಬಸವಣ್ಣನವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಲಿಂಗಾಯತ ಧರ್ಮದ ಭಕ್ತರಿಂದ ಮೆರವಣಿಗೆ ಹೊರಡಲಿದೆ. ಮೆರವಣಿಗೆಯ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗಿದ್ದು, ವೀರಗಾಸೆ, ಸ್ತಬ್ಧಚಿತ್ರ, ಭಜನಾಮೇಳ, ಮಂಗಳ ವಿದ್ಯೆಯಂತಹ ಜಾನಪದ ತಂಡಗಳಿಂದ ಪ್ರದರ್ಶನಗಳು ನಡೆಯಲಿವೆ ಎಂದು ವರದಿ ತಿಳಿಸಿದೆ.

ಇದನ್ನು ಓದಿ:  ಈ ರಾಶಿಯವರ ಮೇಲೆ ಸದಾ ಇರುತ್ತೆ ಹನುಮ, ಮಂಗಳನ ಕೃಪೆ

ಪ್ರಧಾನಿ ಮೋದಿ ಶುಭಾಶಯ: 
"ಬಸವ ಜಯಂತಿಯ ಪವಿತ್ರ ಸಂದರ್ಭದಲ್ಲಿ ಜಗದ್ಗುರು ಬಸವೇಶ್ವರರಿಗೆ ನಮನಗಳು. ಅವರ ಆಲೋಚನೆಗಳು ಮತ್ತು ಆದರ್ಶಗಳು ಪ್ರಪಂಚದಾದ್ಯಂತದ ಲಕ್ಷಾಂತರ ಜನರಿಗೆ ಶಕ್ತಿಯನ್ನು ನೀಡುತ್ತಲೇ ಇರುತ್ತವೆ" ಎಂದು ಹೇಳಿದ್ದಾರೆ. ಜೊತೆಗೆ 2020 ರಲ್ಲಿ ಜಗದ್ಗುರು ಬಸವೇಶ್ವರರ ಕುರಿತು ಮಾತನಾಡಿರುವ ಅವರ ಭಾಷಣದ ತುಣುಕನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. 

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News