Viral Video: ಬಿಸಿಲ ಬೇಗೆಗೆ ಬಳಲಿದ ಜನರಿಗಾಗಿ ಬಾಲಕ ಮಾಡಿದ ಕೆಲಸ ನೋಡಿದ್ರೆ ಶಾಕ್‌ ಆಗ್ತೀರಾ...

ಅಯಾನ್ ಎಂಬ ಪುಟ್ಟ ಬಾಲಕ ಬೀದಿ ಬದಿ ತರಕಾರಿ, ಹಣ್ಣು ಹೂವುಗಳನ್ನು ಮಾರಾಟ ಮಾಡಿ ಜೀವನ ಸಾಗಿಸುವ ಜನರಿಗೆ ನೀರಿನ ಬಾಟಲಿಯನ್ನು ನೀಡಿದ್ದಾನೆ. ಬಾಲಕ ಈ ಕಾರ್ಯಕ್ಕೆ ಮನಸೋತ ಅಜ್ಜಿಯೊಬ್ಬರು ಆತನಿಗೆ ಆಶಿರ್ವಾದವನ್ನು ಸಹ ಮಾಡಿದ್ದಾರೆ. ಈ ದೃಶ್ಯವೂ ವಿಡಿಯೋದಲ್ಲಿ ಸೆರೆಯಾಗಿದೆ. 

Written by - Bhavishya Shetty | Last Updated : May 2, 2022, 05:41 PM IST
  • ಬೀದಿ ಬದಿ ವ್ಯಾಪಾರಿಗಳಿಗೆ ನೀರಿನ ಬಾಟಲಿ ನೀಡಿದ ಬಾಲಕ
  • ಬಾಲಕನ ಮಾನವೀಯ ಕಾರ್ಯಕ್ಕೆ ಜನರು ಫಿದಾ
  • ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋ ವೈರಲ್‌
Viral Video: ಬಿಸಿಲ ಬೇಗೆಗೆ ಬಳಲಿದ ಜನರಿಗಾಗಿ ಬಾಲಕ ಮಾಡಿದ ಕೆಲಸ ನೋಡಿದ್ರೆ ಶಾಕ್‌ ಆಗ್ತೀರಾ... title=
boy supply water

ಬಿರು ಬೇಸಿಗೆಯಲ್ಲಿ ಒಂದು ಗುಟುಕು ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತದೆ. ಇಂತಹ ಸಂದರ್ಭದಲ್ಲಿ ಪುಟ್ಟ ಬಾಲಕನೋರ್ವ ಬೀದಿ ಬದಿ ವ್ಯಾಪಾರ ಮಾಡುವ ಜನರಿಗೆ ನೀರಿನ ಬಾಟಲಿ ನೀಡಿ ದಾಹ ನೀಗಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಸಖತ್‌ ರೆಸ್ಪಾನ್ಸ್‌ ಸಿಕ್ಕಿದೆ. 

ಇದನ್ನು ಓದಿ: PM Kisan: ಇ-ಕೆವೈಸಿ ಕುರಿತು ಸರ್ಕಾರದ ಮಹತ್ವದ ಅಪ್ಡೇಟ್, ಯಾವಾಗ ಖಾತೆ ಸೇರಲಿದೆ 11ನೇ ಕಂತು?

ಅಯಾನ್ ಎಂಬ ಪುಟ್ಟ ಬಾಲಕ ಬೀದಿ ಬದಿ ತರಕಾರಿ, ಹಣ್ಣು ಹೂವುಗಳನ್ನು ಮಾರಾಟ ಮಾಡಿ ಜೀವನ ಸಾಗಿಸುವ ಜನರಿಗೆ ನೀರಿನ ಬಾಟಲಿಯನ್ನು ನೀಡಿದ್ದಾನೆ. ಬಾಲಕ ಈ ಕಾರ್ಯಕ್ಕೆ ಮನಸೋತ ಅಜ್ಜಿಯೊಬ್ಬರು ಆತನಿಗೆ ಆಶಿರ್ವಾದವನ್ನು ಸಹ ಮಾಡಿದ್ದಾರೆ. ಈ ದೃಶ್ಯವೂ ವಿಡಿಯೋದಲ್ಲಿ ಸೆರೆಯಾಗಿದೆ. 

ಇನ್ನು ಐಎಎಸ್‌ ಅಧಿಕಾರಿ ಅವನೀಶ್‌ ಎಂಬವರು ಈ ವಿಡಿಯೋವನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದು, 2 ಗಂಟೆಯಲ್ಲಿ 20 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಜೊತೆಗೆ ಮೆಚ್ಚುಗೆ ಸೂಚಿಸಿ ಕಮೆಂಟ್‌ ಜೊತೆಗೆ ಲೈಕ್‌ಗಳನ್ನು ಸಹ ಮಾಡಿದ್ದಾರೆ. 

ಇದನ್ನು ಓದಿ: Knowledge News: ರೂಪಾಯಿ ನೋಟಿನ ಈ ವೈಶಿಷ್ಟ್ಯದ ನಿಮಗೆ ಗೊತ್ತಾ? ಇಲ್ಲಿದೆ ಟಾಪ್‌ ಸೀಕ್ರೆಟ್‌...

ಸಹಾಯ ಮಾಡಬೇಕೆಂದರೆ ವಯಸ್ಸಿನ ಅವಶ್ಯಕತೆಯಿರುವುದಿಲ್ಲ ಎಂಬುದಕ್ಕೆ ಈ ವಿಡಿಯೋ ಉದಾಹರಣೆಯಂತಿದೆ. ಮನಸ್ಸಿದ್ದರೆ ಎಂತಹ ಕಾರ್ಯ ಬೇಕಾದರೂ ಮಾಡಬಹುದು. ಈ ಬಾಲಕನ ಕಾರ್ಯ ಇಂದಿನ ಪೀಳಿಗೆಗೆ ಮಾದರಿ ಎಂಬಂತಿದೆ. ದುಡ್ಡಿದ್ದರೆ ಸ್ವಲ್ಪವೂ ದಾನ ಮಾಡದೆ, ಸ್ವಾರ್ಥಕ್ಕಾಗಿ ಬದುಕುವ ಕೆಲವು ಜನರ ಮಧ್ಯೆ ಬಾಲಕನ ಮಾನವೀಯ ಕಾರ್ಯ ಮೆಚ್ಚುವಂತಹದ್ದೇ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News