"ಬಸವರಾಜ ಬೊಮ್ಮಾಯಿ ಅವರೇ ನಿಮಗೆ ನಮ್ಮನ್ನು ಮತ್ತೆ ಜೈಲಲ್ಲಿ ನೋಡುವ ಆಸೆ ಇದೆ, ನಮ್ಮನ್ನು ಜೈಲಿಗೆ ಹಾಕಿ"

ಬಸವರಾಜ ಬೊಮ್ಮಾಯಿ ಅವರೇ ನಿಮಗೆ ನಮ್ಮನ್ನು ಮತ್ತೆ ಜೈಲಲ್ಲಿ ನೋಡುವ ಆಸೆ ಇದೆ, ನಮ್ಮನ್ನು ಜೈಲಿಗೆ ಹಾಕಿ, ಹಾಲು ಕುಡಿದು ನಿಮ್ಮ ಹೊಟ್ಟೆ ತಣ್ಣಗೆ ಮಾಡಿಕೊಳ್ಳಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿ ಕಾರಿದ್ದಾರೆ.

Written by - Zee Kannada News Desk | Last Updated : Jan 9, 2022, 11:27 PM IST
  • ಬಸವರಾಜ ಬೊಮ್ಮಾಯಿ ಅವರೇ ನಿಮಗೆ ನಮ್ಮನ್ನು ಮತ್ತೆ ಜೈಲಲ್ಲಿ ನೋಡುವ ಆಸೆ ಇದೆ, ನಮ್ಮನ್ನು ಜೈಲಿಗೆ ಹಾಕಿ, ಹಾಲು ಕುಡಿದು ನಿಮ್ಮ ಹೊಟ್ಟೆ ತಣ್ಣಗೆ ಮಾಡಿಕೊಳ್ಳಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿ ಕಾರಿದ್ದಾರೆ.
  • ಈ ನೀರಿನ ವಿಚಾರದಲ್ಲಿ ತಮಿಳುನಾಡಿನವರು ರಾಜಕಾರಣಕ್ಕೆ ಕ್ಯಾತೆ ತೆಗೆಯುತ್ತಿದ್ದಾರೆ.
  • ಆದರೆ ನಮ್ಮ ರಾಜ್ಯದಲ್ಲಿ ನಮ್ಮ ಹೋರಾಟಕ್ಕೆ ಕ್ಯಾತೆ ತೆಗೆಯುತ್ತಿರುವ ಈ ಬಿಜೆಪಿ ಹಾಗೂ ಜೆಡಿಎಸ್ ನವರು ದೇಶದ್ರೋಹಿಗಳು ಹಾಗೂ ರಾಜ್ಯ ದ್ರೋಹಿಗಳಲ್ಲವೇ ಎಂದು ತಾವು ತೀರ್ಮಾನ ಮಾಡಬೇಕು ಎಂದು ಹೇಳಿದರು.
"ಬಸವರಾಜ ಬೊಮ್ಮಾಯಿ ಅವರೇ ನಿಮಗೆ ನಮ್ಮನ್ನು ಮತ್ತೆ ಜೈಲಲ್ಲಿ ನೋಡುವ ಆಸೆ ಇದೆ, ನಮ್ಮನ್ನು ಜೈಲಿಗೆ ಹಾಕಿ" title=
file photo

ಬೆಂಗಳೂರು: ಬಸವರಾಜ ಬೊಮ್ಮಾಯಿ ಅವರೇ ನಿಮಗೆ ನಮ್ಮನ್ನು ಮತ್ತೆ ಜೈಲಲ್ಲಿ ನೋಡುವ ಆಸೆ ಇದೆ, ನಮ್ಮನ್ನು ಜೈಲಿಗೆ ಹಾಕಿ, ಹಾಲು ಕುಡಿದು ನಿಮ್ಮ ಹೊಟ್ಟೆ ತಣ್ಣಗೆ ಮಾಡಿಕೊಳ್ಳಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿ ಕಾರಿದ್ದಾರೆ.

ಈ ನೀರಿನ ವಿಚಾರದಲ್ಲಿ ತಮಿಳುನಾಡಿನವರು ರಾಜಕಾರಣಕ್ಕೆ ಕ್ಯಾತೆ ತೆಗೆಯುತ್ತಿದ್ದಾರೆ. ಆದರೆ ನಮ್ಮ ರಾಜ್ಯದಲ್ಲಿ ನಮ್ಮ ಹೋರಾಟಕ್ಕೆ ಕ್ಯಾತೆ ತೆಗೆಯುತ್ತಿರುವ ಈ ಬಿಜೆಪಿ ಹಾಗೂ ಜೆಡಿಎಸ್ ನವರು ದೇಶದ್ರೋಹಿಗಳು ಹಾಗೂ ರಾಜ್ಯ ದ್ರೋಹಿಗಳಲ್ಲವೇ ಎಂದು ತಾವು ತೀರ್ಮಾನ ಮಾಡಬೇಕು ಎಂದು ಹೇಳಿದರು.

ಇದನ್ನೂ ಓದಿ: ಹಿರಿಯ ಜಾನಪದ ಕಲಾವಿದ, ಗಾಯಕ ಬಸಲಿಂಗಯ್ಯ ಹಿರೇಮಠ ನಿಧನ: ಸಿಎಂ ಸಂತಾಪ

ನಾನು ಈ ಗಡ್ಡ ಬಿಟ್ಟಿದ್ದು, ತಿಹಾರ್ ಜೈಲಲ್ಲಿ.ಈ ಗಡ್ಡ ತೆಗೆಯಬೇಕು ಎಂದರೆ ನೀವೇ ಮುಕ್ತಿ ಕೊಡಿಸಬೇಕು. ನಾನು ಚುನಾವಣೆಯಲ್ಲಿ ಬಂದು ಮತ ಕೇಳಲು ಸಮಯವಿಲ್ಲ, ಇಲ್ಲಿರುವ ಪ್ರತಿಯೊಬ್ಬರು ನೀವೇ ಡಿ.ಕೆ. ಶಿವಕುಮಾರ್ ಹಾಗೂ ಡಿ.ಕೆ. ಸುರೇಶ್ ಎಂದು ಡಿಕೆಶಿ ಹೇಳಿದರು.

ಇದನ್ನೂ ಓದಿ: ಪಾದಯಾತ್ರೆ ತಡೆಗೆ ಕಾನೂನು ಕ್ರಮದ ಅಸ್ತ್ರ ಪ್ರಯೋಗಕ್ಕೆ ಸರ್ಕಾರ ತೀರ್ಮಾನ

ಸರ್ಕಾರದವರು ಇಂದು ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ.ಕೇಂದ್ರ ಸರ್ಕಾರ ನನ್ನನ್ನು ಮತ್ತೆ ಜೈಲಿಗೆ ಹಾಕಲು ಷಡ್ಯಂತ್ರ ಮಾಡುತ್ತಿದೆ. ಆದರೆ ನಿಮ್ಮ ಮಗ ಹೆದರುವುದಿಲ್ಲ ಎಂದು ಅವರು ಗುಡುಗಿದರು.

ಇತ್ತೀಚಿನ ದಿನಗಳಲ್ಲಿ ಕೋವಿಡ್ ಬಂದು ಇಲ್ಲಿ ಯಾರಾದರೂ ಸತ್ತಿದ್ದಾರಾ? ನಮ್ಮ ಕಾರ್ಯಕ್ರಮ ನಿಲ್ಲಿಸಲು ಕಾನೂನು ತಂದಿದ್ದೀರಿ. ನನ್ನ ಹಾಗೂ ಸುರೇಶ್ ಜತೆಗೆ ಮಠಾಧೀಶರು, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಹಾಗೂ 100 ಶಾಸಕರಿದ್ದರು.ಮೊದಲು ನೀವು ನಮ್ಮನ್ನೆಲ್ಲ ಬಂಧಿಸಿ, ಪ್ರಕರಣ ದಾಖಲಿಸಿ ಎಂದು ನಾನಿಂದು ಗೃಹ ಸಚಿವ ಸಚಿವರಿಗೆ ಹೇಳಿದ್ದೇನೆ.ಇಲ್ಲಿ ಯಾರ್ಯಾರು ಬಂದಿದ್ದಾರೆ ಎಂಬ ವಿಡಿಯೋ ಕಳುಹಿಸಿಕೊಡುತ್ತೇನೆ. ಎಲ್ಲರ ಮೇಲೂ ಪ್ರಕರಣ ದಾಖಲಿಸಿ. ಎಲ್ಲರನ್ನು ಜೈಲಿಗೆ ಹಾಕಿ ಎಂದು ಅವರು ಸರ್ಕಾರಕ್ಕೆ ಸವಾಲು ಹಾಕಿದರು.

ಇದನ್ನೂ ಓದಿ: ಪಾದಯಾತ್ರೆ ತಡೆಗೆ ಕಾನೂನು ಕ್ರಮದ ಅಸ್ತ್ರ ಪ್ರಯೋಗಕ್ಕೆ ಸರ್ಕಾರ ತೀರ್ಮಾನ

ಸಂಗಮದಿಂದ ಇಲ್ಲಿಯವರೆಗೂ ನಡೆದಿದ್ದು, ಮುಂದಿನ 10 ದಿನಗಳಲ್ಲಿ ಇನ್ನು 150 ಕಿ.ಮೀ ನಡೆಯಬೇಕು. ನೀವು ನನಗೆ ಹಾಗೂ ಡಿ.ಕೆ. ಸುರೇಶ್ ಗೆ ಕೊಟ್ಟ ಶಕ್ತಿಯಿಂದ ಎಲ್ಲ ನಾಯಕರ ಜತೆ ಸೇರಿ, ರಾಜ್ಯದ ರೈತರ ರಕ್ಷಣೆ ಹಾಗೂ ಕುಡಿಯುವ ನೀರಿನ ಸೌಕರ್ಯಕ್ಕೆ ಈ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ ಎಂದು ಅವರು ಹೇಳಿದರು.

"ನೀವು ನನ್ನನ್ನು ಜಿಲ್ಲಾ ಪಂಚಾಯಿತಿಗೆ ಆಯ್ಕೆ ಮಾಡಿ, ಶಾಸಕನನ್ನಾಗಿ ಮಾಡಿದ ನಂತರ ನಿಮ್ಮ ಊರು, ಹೋಬಳಿ, ತಾಲೂಕು ಹೇಗೆ ಬದಲಾಗಿದೆ ಎಂಬುದಕ್ಕೆ ನಿಮ್ಮ ಕಣ್ಣುಗಳೇ ಸಾಕ್ಷಿ.ನನ್ನನ್ನು ಸಾಕಿದ್ದೀರಿ, ಸುರೇಶ್ ನನ್ನು ಸಂಸತ್ತಿಗೆ ಕಳುಹಿಸಿದ್ದೀರಿ.ನಾವು, ನಮ್ಮೆಲ್ಲ ನಾಯಕರು ಒಂದು ಸಂಕಲ್ಪ ಮಾಡಿ, ರಾಜ್ಯಕ್ಕೆ ನಮ್ಮ ಕೈಲಾದ ಕೊಡುಗೆ ಕೊಡಲು ಈ ಹೋರಾಟಕ್ಕೆ ಕೈ ಹಾಕಿದ್ದೇವೆ" ಎಂದು ಅವರು ಹೇಳಿದರು.

ನಾವು ಇಂತಹ ಹೋರಾಟ, ಸಭೆ ಮಾಡುವಂತಿಲ್ಲ ಎಂದು ಸರ್ಕಾರ ಕರ್ಫ್ಯೂ ಜಾರಿ ಮಾಡಿದೆ. 5 ಜನರ ಮೇಲೆ ಇರುವಂತಿಲ್ಲ, ಯಾರೂ ಅಂಗಡಿ ಮುಂಗಟ್ಟು ತೆರೆಯುವಂತಿಲ್ಲ. ನಾನು ಬಹಿರಂಗ ಸಭೆ ಇಟ್ಟುಕೊಂಡಿಲ್ಲ. ನಮ್ಮ ತಾಯಂದಿರು ಕಾಯ್ದು ಕೂತಿದ್ದಾರೆ. ಹೀಗಾಗಿ ಮಾತನಾಡುತ್ತಿದ್ದೇನೆ. ನಮ್ಮ ತಾಯಂದಿರು ಇವತ್ತಿನ ರೀತಿ ಯಾವತ್ತೂ ಸಂಭ್ರಮಿಸಿಲ್ಲ ಎಂದು ಡಿಕೆಶಿ ಹೇಳಿದರು.

ಇದನ್ನೂ ಓದಿ: ಕಾಂಗ್ರೆಸ್ ಪಾದಯಾತ್ರೆ: ವಿಪಕ್ಷ ನಾಯಕ ಸಿದ್ಧರಾಮಯ್ಯಗೆ ಜ್ವರ, ಆತಂಕ ವ್ಯಕ್ತಪಡಿಸಿದ ಸಚಿವ ಕಾರಜೋಳ

ನಿಮಗೆ ಮೇಕೆದಾಟು ನೀರು ಅಗತ್ಯವಿಲ್ಲ, ಶಿಂಷಾ ಹಾಗೂ ಅರ್ಕಾವತಿ ನದಿಯಿಂದ ನೀರು ತಂದು ಕೆರೆ ತುಂಬಿಸಿದ್ದೇವೆ. 12 ಅಡಿ ರಸ್ತೆ 50 ಅಡಿ ರಸ್ತೆಯಾಗಿವೆ. ನಿಮ್ಮ ಆಸ್ತಿ ಬೆಲೆ ಹೆಚ್ಚಿಸಿದ್ದೇವೆ.ನಾನು ಇದುವರೆಗೂ ಯಾರಿಗಾದರೂ ಮೋಸ ಮಾಡಿದ್ದೀನಾ? ಕೆಡಕು ಮಾಡಿದ್ದೀನಾ? ನನ್ನನ್ನು ಜೈಲಿಗೆ ಕಳುಹಿಸಿದಾಗ ನೀವು ನೀಡಿದ ಬೆಂಬಲ,ಮಾಡಿದ ಹೋರಾಟ ಮರೆಯಲು ಸಾಧ್ಯವಿಲ್ಲ.ನನಗೆ ಹಾಲು ಕೊಟ್ಟಿದ್ದೀರಿ, ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ ಎಂದು ನಾನು ನಿಮ್ಮ ಬಳಿ ಕೇಳಿಕೊಳ್ಳುತ್ತೇನೆ.l " ಎಂದು ಅವರು ಮನವಿ ಮಾಡಿದರು.

ಇದನ್ನೂ ಓದಿ: ಸಚಿವ ಎಸ್.ಟಿ.ಸೋಮಶೇಖರ್ ಪುತ್ರನ ನಕಲಿ ವಿಡಿಯೋ, ₹1 ಕೋಟಿ ಹಣಕ್ಕೆ ಬೇಡಿಕೆ... ಓರ್ವ ವಶಕ್ಕೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News