ಸಚಿವ ಎಸ್.ಟಿ.ಸೋಮಶೇಖರ್ ಪುತ್ರನ ನಕಲಿ ವಿಡಿಯೋ, ₹1 ಕೋಟಿ ಹಣಕ್ಕೆ ಬೇಡಿಕೆ... ಓರ್ವ ವಶಕ್ಕೆ

ಸಚಿವ ಎಸ್.ಟಿ.ಸೋಮಶೇಖರ್ (Minister ST Somashekhar) ಪುತ್ರ ನಿಶಾಂತ್ ಅವರಿಗೆ ಬೆದರಿಕೆಯ ಸಂದೇಶಗಳು ಬಂದಿವೆ ಎಂದು ಆರೋಪಿಸಲಾಗಿದೆ. 

Edited by - Zee Kannada News Desk | Last Updated : Jan 9, 2022, 02:50 PM IST
  • ಸಚಿವ ಎಸ್.ಟಿ.ಸೋಮಶೇಖರ್ ಪುತ್ರನ ನಕಲಿ ವಿಡಿಯೋ
  • ನಿಶಾಂತ್ ಅವರಿಗೆ ಬೆದರಿಕೆಯ ಸಂದೇಶಗಳು ಬಂದಿವೆ ಎಂದು ಆರೋಪ
  • ಸಿಸಿಬಿಯ ಸೈಬರ್ ಕ್ರೈಂ ಠಾಣೆಯಲ್ಲಿ ದೂರು
ಸಚಿವ ಎಸ್.ಟಿ.ಸೋಮಶೇಖರ್ ಪುತ್ರನ ನಕಲಿ ವಿಡಿಯೋ, ₹1 ಕೋಟಿ ಹಣಕ್ಕೆ ಬೇಡಿಕೆ... ಓರ್ವ ವಶಕ್ಕೆ   title=
ಸೈಬರ್ ಕ್ರೈಂ

ಬೆಂಗಳೂರು: ಸಚಿವ ಎಸ್.ಟಿ.ಸೋಮಶೇಖರ್ (Minister ST Somashekhar) ಪುತ್ರ ನಿಶಾಂತ್ ಅವರಿಗೆ ಬೆದರಿಕೆಯ ಸಂದೇಶಗಳು ಬಂದಿವೆ ಎಂದು ಆರೋಪಿಸಲಾಗಿದೆ. ಅಶ್ಲೀಲ ವಿಡಿಯೋ ಬಿಡುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ಹೇಳಲಾಗಿದೆ. ಅಲ್ಲದೆ ₹1 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆಂದು ಆರೋಪಿಸಿ ಸಿಸಿಬಿಯ ಸೈಬರ್ ಕ್ರೈಂ ಠಾಣೆಯಲ್ಲಿ ಸಚಿವ ಎಸ್.ಟಿ.ಸೋಮಶೇಖರ್ ತಮ್ಮ ಪಿಎ ಮೂಲಕ‌ ದೂರು ಸಲ್ಲಿಸಿದ್ದಾರೆ.

ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಓರ್ವ ಆರೋಪಿಯನ್ನ ವಶಕ್ಕೆ ಪಡೆದಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮಾಹಿತಿ ನೀಡಿದ್ದಾರೆ.

ಏನಿದು ಪ್ರಕರಣ?

ಸೈಬರ್ ಪೊಲೀಸರಿಗೆ ದೂರು ನೀಡಿರುವ ದಾಖಲೆಯ ಪ್ರಕಾರ, ಕೆಲ ದಿನಗಳ ಹಿಂದೆ ಸಚಿವರ ಪುತ್ರನಿಗೆ (Fake video of Minister ST Somashekhar's son) ಅಪರಿಚಿತ ಮೊಬೈಲ್ ಸಂಖ್ಯೆಯಿಂದ ವಾಟ್ಸಾಪ್ ನಲ್ಲಿ ಒಂದು ಮೆಸೇಜ್ ಬಂದಿದೆ. ಅಲ್ಲಿ ಒಂದು ವಿಡಿಯೋವನ್ನು ಕಳಿಸಿದ್ದಾರೆ. ಅದರಲ್ಲಿ ಸಚಿವರ ಪುತ್ರನ ಫೋಟೋ ಎಡಿಟ್ ಮಾಡಿ ಕಳಿಸಿದ್ದಾರೆಂದು ಆರೋಪಿಸಲಾಗಿದೆ.

Complaint Copy

ಬಳಿಕ ವಾಟ್ಸಾಪ್ ಮೂಲಕ ಪುತ್ರ ಹಾಗೂ ತಂದೆಗೆ ಮತ್ತು ಪಿಎಗೆ ವಿಡಿಯೋ ಕಳಿಸಿ ಬೆದರಿಕೆ ಹಾಕಿದ್ದಾರೆ. ಒಂದು ಕೋಟಿ ಹಣ ಕೊಡಬೇಕು ಇಲ್ಲವಾದ್ರೆ ಇನ್ನು ಹಲವಾರು ವಿಡಿಯೋ ಇದೆ. ಅದನ್ನು ಯೂಟ್ಯೂಬ್ ನಲ್ಲಿ ಮತ್ತು ಮೀಡಿಯಾಗೆ ಕೊಡ್ತಿವಿ ಎಂದು ಬೆದರಿಗೆ ಹಾಕಿದ್ದಾರಂತೆ. ಈ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೋರಿ ಸಚಿವ ಸೋಮಶೇಖರ್ ಪುತ್ರ ನಿಶಾಂತ್ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.

ಓರ್ವ ವಶಕ್ಕೆ : 

ದೂರು ಪಡೆದು ಕೇಸ್ ದಾಖಲಿಸಿಕೊಂಡ ಸೈಬರ್ ಕ್ರೈಂ (Cyber Crime) ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವ ವೇಳೆಯಲ್ಲಿ ಹಲವು ವಿಚಾರಗಳು ಬಯಲಿಗೆ ಬಂದಿವೆ ಎನ್ನಲಾಗಿದೆ. ಎಸ್.ಟಿ.ಸೋಮಶೇಖರ್ ಅವರ ಬಳಿ ಈ ಹಿಂದೆ ಕೆಲಸ ಮಾಡಿದ್ದ ಓರ್ವ ಸಿಬ್ಬಂದಿಯೇ ಈ ಕೃತ್ಯ ಎಸಗಿದ್ದಾನೆಂಬ ಅನುಮಾನ ವ್ಯಕ್ತವಾಗಿದೆ. ಈ ಸಂಬಂಧ ಈತನನ್ನು ಗೋವಾದಿಂದ ವಶಕ್ಕೆ ಪಡೆದುಕೊಂಡು ಬಂದಿದ್ದಾರೆ. 

ಶಾಸಕರ ಪುತ್ರಿಯ ಹೆಸರು:

ಸೈಬರ್ ಕ್ರೈಂ ಪೊಲೀಸರ ಜೊತೆಗೆ ತನಿಖೆ ನಡೆಸಲು ಸಿಸಿಬಿ ಪೊಲೀಸರು ನಿಯೋಜನೆ ಮಾಡಿಲಾಗಿದೆ. ತನಿಖೆ ವೇಳೆ ವಿಜಯಪುರ ಜಿಲ್ಲೆಯ ಓರ್ವ ಶಾಸಕರ ಪುತ್ರಿಯ ಹೆಸರು ಕೇಳಿಬರುತ್ತಿದೆ. ಆರ್ ಟಿ ನಗರದಲ್ಲಿ ನೆಲೆಸಿರುವ  ಅಸ್ಟ್ರಾಲಜಿಸ್ಟ್ ಪುತ್ರ ಭಾಗಿ ಬಗ್ಗೆ ಮಾಹಿತಿ ದೊರಕಿದೆ ಎಂದು ಮೂಲಗಳು ತಿಳಿಸಿವೆ.

ಕೃತ್ಯಕ್ಕೆ ಯುಕೆ ಸಿಮ್ ಕಾರ್ಡ್ ಬಳಸಲಾಗಿದೆ ಎನ್ನಲಾಗಿದೆ. ಈ ಸಿಮ್ ನಿಂದಲೇ ವಾಟ್ಸಾಪ್ ಕ್ರಿಯೇಟ್ ಮಾಡಲಾಗಿದೆಯಂತೆ. ನಂತರ ಅದೇ ವಾಟ್ಸಾಪ್ ನಿಂದ ವಿಡಿಯೋ ಕಳಿಸಿ ಬೆದರಿಕೆ ಹಾಕಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. 

ಇದನ್ನೂ ಓದಿ: ಬಾಹುಬಲಿ ಕಟ್ಟಪ್ಪ ಖ್ಯಾತಿಯ ಸತ್ಯರಾಜ್ ಗೆ ಕೋವಿಡ್ ದೃಢ.. ಆಸ್ಪತ್ರೆಗೆ ದಾಖಲು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News