ನವದೆಹಲಿ: ಬುರಾಡಿಯಲ್ಲಿ ಒಂದೇ ಕುಟುಂಬದ 11 ಜನರ ಸಾಮೂಹಿಕ ಆತ್ಮಹತ್ಯೆ ಆ ಪ್ರದೇಶದ ಜನರಲ್ಲಿ ಗಾಬರಿ ಉಂಟುಮಾಡಿದೆ. ಘಟನೆ ನಡೆದು ಐದು ದಿನಗಳು ಕಳೆದ ನಂತರ ಆ ಪ್ರದೇಶದ ಸುತ್ತಮುತ್ತಲ ಜನ ಹೆದರುತ್ತಿದ್ದಾರೆ. ಝೀ ನ್ಯೂಸ್ ಅದನ್ನು ಪರೀಕ್ಷಿಸಿದಾಗ, ಜನರಲ್ಲಿ ಗಾಬರಿ ಕಂಡುಬಂದಿದೆ. ಸತೀಶ್ ನಗರದ, ಸ್ಟ್ರೀಟ್ ನಂ. 2 ರಲ್ಲಿರುವ ಮನೆಯಲ್ಲಿ ಕುಟುಂಬವು ಆತ್ಮಹತ್ಯೆಗೆ ಶರಣಾಗಿದೆ. ಈ ಪ್ರದೇಶದಲ್ಲಿ ಸ್ಟ್ರೀಟ್ ನಂ. 10ರ ವರೆಗೂ ಜನರಲ್ಲಿ ಗಾಬರಿ ಇದೆ.
ಲಲಿತ್ ಭಾಟಿಯಾ ತಮ್ಮ ಡೈರಿಯಲ್ಲಿ ಅವರ ಕುಟುಂಬದವರು 11ನೇ ದಿನದಂದು ಹಿಂದಿರುಗುತ್ತಾರೆ ಎಂದು ಬರೆದಿದ್ದಾರೆ. ಇದರಿಂದ ಗಾಬರಿಗೊಂಡಿರುವ ಜನರು 2-3 ದಿನದಲ್ಲಿ ಈ ಪ್ರದೇಶದಲ್ಲಿ ಪೂಜೆ, ಹೋಮ-ಹವನ, ಭಗವತ್ ಗೀತೆ ಪಾರಾಯಣ ಮಾಡಲು ನಿರ್ಧರಿಸಿದ್ದಾರೆ. ಭಾಟಿಯಾ ಕುಟುಂಬದ ಈ ಮನೆಯಲ್ಲಿ ಈಗ ದೇವಾಲಯ ನಿರ್ಮಿಸಬೇಕು ಎಂದು ಕೆಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಾಟಿಯಾ ಕುಟುಂಬದ 11 ಸದಸ್ಯರ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಕುಟುಂಬದ ಮನಸ್ಥಿತಿಯನ್ನು ಖಚಿತಪಡಿಸಿಕೊಳ್ಳಲು ಮೃತ ದೇಹಗಳಿಗೆ ಮನೋವೈಜ್ಞಾನಿಕ ಮರಣೋತ್ತರ ಪರೀಕ್ಷೆ ನಡೆಸಲು ದೆಹಲಿ ಪೊಲೀಸರು ನಿರ್ಧರಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಯು ಈ ರೀತಿಯ ಪೋಸ್ಟ್-ಮಾರ್ಟಮ್ನಲ್ಲಿ, ಕುಟುಂಬದ ಜೀವಂತ ಸದಸ್ಯರ ಮನಸ್ಥಿತಿ ಮತ್ತು ಸತ್ತವರ ಸ್ಥಿತಿಯನ್ನು ಮ್ಯಾಪ್ ಮಾಡಲಾಗುವುದು ಎಂದು ಹೇಳಿದರು.
ಘಟನೆ ಸ್ಥಳದಲ್ಲಿ ಪಡೆಯಲಾದ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಸತ್ತವರ ಮನಸ್ಥಿತಿಯ ಬಗ್ಗೆ ತಜ್ಞರು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಹೇಳಿದರು.
ದೆಹಲಿ ಪೋಲಿಸ್ನ ತನಿಖೆಯು ಅದರಲ್ಲಿ ಯಾವುದೇ 'ಬಾಹ್ಯ ಪರಿಣಾಮ' ಉಂಟಾಗಿದೆಯೇ ಎಂಬ ಬಗ್ಗೆ ಗಮನಹರಿಸುತ್ತದೆ. ಪೊಲೀಸರು ತನಿಖೆಯ ವೇಳೆ, ಕುಟುಂಬದ ಸದಸ್ಯರ ಬಗ್ಗೆ ಸಂಬಂಧಿಗಳು ಕೆಲವು ವಿಚಿತ್ರವಾದ ವಿಷಯಗಳನ್ನು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪೋಲೀಸ್ ಅಂತಿಮ ಮರಣೋತ್ತರ ವರದಿಗಾಗಿ ಕಾಯುತ್ತಿದ್ದಾರೆ.