ಬದಲಾಗಿದೆ Traffic Rules, ಈಗ ಕೇವಲ ಫೋಟೋ ತೆಗೆದು ನೋಟೀಸ್ ಕಳುಹಿಸುವಂತಿಲ್ಲ

ಹೊಸ ನಿಯಮಗಳ ಪ್ರಕಾರ ಸಂಚಾರ ನಿಯಮಗಳನ್ನು ಜಾರಿಗೊಳಿಸಲು ಎಲೆಕ್ಟ್ರಾನಿಕ್ ಸಾಧನಗಳನ್ನು ಪ್ರಮುಖವಾಗಿ ಬಳಸಲಾಗುವುದು.   

Written by - Ranjitha R K | Last Updated : Aug 19, 2021, 06:57 PM IST
  • ಸಂಚಾರ ನಿಯಮಗಳಲ್ಲಿ ಪ್ರಮುಖ ಬದಲಾವಣೆ
  • ನಿಯಮ ಉಲ್ಲಂಘನೆಯಾದರೆ 15 ದಿನಗಳಲ್ಲಿ ಮನೆಗೆ ನೋಟೀಸ್
  • ಈ ರಾಜ್ಯಗಳಲ್ಲಿ ಡಿಜಿಟಲ್ ಉಪಕರಣಗಳನ್ನು ಸ್ಥಾಪಿಸಲಾಗುವುದು
ಬದಲಾಗಿದೆ Traffic Rules, ಈಗ ಕೇವಲ ಫೋಟೋ ತೆಗೆದು ನೋಟೀಸ್ ಕಳುಹಿಸುವಂತಿಲ್ಲ  title=
ಸಂಚಾರ ನಿಯಮಗಳಲ್ಲಿ ಪ್ರಮುಖ ಬದಲಾವಣೆ (file photo)

ನವದೆಹಲಿ : ಸಾರಿಗೆ ಸಚಿವಾಲಯವು ಹೊಸ ಅಧಿಸೂಚನೆಯನ್ನು (New Notification) ಹೊರಡಿಸಿದೆ. ಅದರ ಪ್ರಕಾರ ರಾಜ್ಯ ಜಾರಿ ಸಂಸ್ಥೆಗಳು ಸಂಚಾರಿ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದಂತೆ, 15 ದಿನಗಳ ಒಳಗೆ ತಪ್ಪಿತಸ್ಥರಿಗೆ ನೋಟಿಸ್ ಕಳುಹಿಸಬೇಕು. ಅಲ್ಲದೆ, ನೋಟೀಸ್ (Notice) ಇತ್ಯರ್ಥವಾಗುವವರೆಗೆ ಎಲೆಕ್ಟ್ರಾನಿಕ್ ದಾಖಲೆಗಳನ್ನು ಸಂಗ್ರಹಿಸಬೇಕು. ಅಂದರೆ, ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ, ಈಗ ಪೋಲೀಸರು ಕೇವಲ ಫೋಟೋ ತೆಗೆಯುವ ಮೂಲಕ ನೋಟೀಸ್  ಕಳುಹಿಸಲು ಸಾಧ್ಯವಾಗುವುದಿಲ್ಲ. ನೋಟೀಸ್ ಕಳುಹಿಸಬೇಕಾದರೆ ಪೊಲೀಸರಲ್ಲಿ ಎಲೆಕ್ಟ್ರಾನಿಕ್ ದಾಖಲೆಗಳು (Electronic records) ಇರಬೇಕಾಗುತ್ತವೆ.

ಟ್ವೀಟ್ ಮಾಡಿ ಮಾಹಿತಿ ನೀಡಿದ MoRTH :
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ಎಲೆಕ್ಟ್ರಾನಿಕ್ ಮೇಲ್ವಿಚಾರಣೆ ಮತ್ತು ರಸ್ತೆ ಸುರಕ್ಷತೆ ಜಾರಿಗಾಗಿ ತಿದ್ದುಪಡಿ ಮಾಡಿದ ಮೋಟಾರು ವಾಹನಗಳ ಕಾಯಿದೆ 1989 ರ (Amended Motor Vehicles Act 1989)  ಅಡಿಯಲ್ಲಿ ಅಧಿಸೂಚನೆಯನ್ನು ಹೊರಡಿಸಿದೆ. ಘಟನೆ ನಡೆದ  15 ದಿನಗಳ ಒಳಗೆ ತಪ್ಪಿತಸ್ಥರಿಗೆ ನೋಟೀಸ್ ಜಾರಿ ಮಾಡಬೇಕು.   ಅಲ್ಲದೆ, ಎಲೆಕ್ಟ್ರಾನಿಕ್ ಮೊನಿಟರಿಂಗ್  ಮೂಲಕ ಸಂಗ್ರಹಿಸಿದ  ದಾಖಲೆಗಳನ್ನು ನೋಟೀಸ್ ಇತ್ಯರ್ಥವಾಗುವವರೆಗೆ ಸಂಗ್ರಹಿಸಬೇಕು" ಎಂದು ಸಚಿವಾಲಯ ಮಾಡಿದೆ.

ಇದನ್ನೂ ಓದಿ : ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕನನ್ನು ಹೊಡೆದುರುಳಿಸಿದ ರಕ್ಷಣಾ ಪಡೆ, ಒಬ್ಬ ಯೋಧ ಹುತಾತ್ಮ

ಹೈವೇಗಳಲ್ಲಿ ಈ ವ್ಯವಸ್ಥೆ : 
ಹೊಸ ನಿಯಮಗಳ ಪ್ರಕಾರ (New traffic rules), ಸಂಚಾರ ನಿಯಮಗಳನ್ನು ಜಾರಿಗೊಳಿಸಲು ಎಲೆಕ್ಟ್ರಾನಿಕ್ ಸಾಧನಗಳನ್ನು ಪ್ರಮುಖವಾಗಿ ಬಳಸಲಾಗುವುದು. ಇವುಗಳಲ್ಲಿ ಮೋಶನ್ ಕ್ಯಾಪ್ಚರ್ ಪಿಕ್ಚರ್ ಕ್ಯಾಮೆರಾಗಳು, ಸಿಸಿಟಿವಿ ಕ್ಯಾಮರಾಗಳು, ಸ್ಪೀಡ್ ಗನ್‌ಗಳು, ಬಾಡಿ ಕ್ಯಾಮೆರಾಗಳು, ಮೋಟಾರ್ ಡ್ಯಾಶ್‌ಬೋರ್ಡ್ ಕ್ಯಾಮೆರಾಗಳು, ನಂಬರ್ ಪ್ಲೇಟ್ ಗುರುತಿಸುವ ಡಿವೈಸ್ (ANPR), ಮತ್ತು ಇತರ ಎಲೆಕ್ಟ್ರಾನಿಕ್ ಸಾಧನಗಳು ಸೇರಿವೆ. ಅಧಿಸೂಚನೆಯ ಪ್ರಕಾರ, ರಾಜ್ಯ ಸರ್ಕಾರಗಳು ಸಂಚಾರ ನಿಯಮಗಳನ್ನು ಪಾಲಿಸುವ ಎಲ್ಲಾ ಎಲೆಕ್ಟ್ರಾನಿಕ್ ಸಾಧನಗಳನ್ನು ರಾಷ್ಟ್ರೀಯ ಹೆದ್ದಾರಿಗಳು (High way) ಮತ್ತು ರಾಜ್ಯ ಹೆದ್ದಾರಿಗಳ ಹೆಚ್ಚಿನ ಅಪಾಯದ ಮತ್ತು ಅತ್ಯಂತ ಕಾರ್ಯನಿರತ ರಸ್ತೆಗಳಲ್ಲಿ ಅಳವಡಿಸಲಾಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ಇಷ್ಟು ಮಾತ್ರವಲ್ಲದೆ, ಹತ್ತು ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಎಲ್ಲಾ ಪ್ರಮುಖ ನಗರಗಳ ಪ್ರಮುಖ ರಸ್ತೆಗಳು ಮತ್ತು ವೃತ್ತಗಳಲ್ಲಿ ಈ ಸಾಧನಗಳನ್ನು ಅಳವಡಿಸಲಾಗುವುದು. 

ಈ ರಾಜ್ಯಗಳಲ್ಲಿ ಡಿಜಿಟಲ್ ಉಪಕರಣಗಳ ಅಳವಡಿಕೆ  : 
ಉತ್ತರ ಪ್ರದೇಶದ ಕಾನ್ಪುರ, ಲಕ್ನೋ, ಗಾಜಿಯಾಬಾದ್, ವಾರಣಾಸಿ ಸೇರಿದಂತೆ 17 ನಗರಗಳು, ಮಧ್ಯಪ್ರದೇಶದ ಭೋಪಾಲ್, ಇಂದೋರ್, ಉಜ್ಜಯಿನಿ ಸೇರಿದಂತೆ 7 ನಗರಗಳು, ರಾಜಸ್ಥಾನದ ಜೈಪುರ, ಉದಯಪುರ, ಕೋಟ, ಮಹಾರಾಷ್ಟ್ರದ ಮುಂಬೈ (Mumbai), ಪುಣೆ, ಕೊಲ್ಹಾಪುರ, ನಾಗಪುರ ಸೇರಿದಂತೆ 19 ನಗರಗಳು, ಜಾರ್ಖಂಡ್‌ನ ರಾಂಚಿ,  ಜಮ್‌ಶೆಡ್‌ಪುರ ಸೇರಿದಂತೆ 3 ನಗರಗಳು, ಗುಜರಾತ್‌ನ ಸೂರತ್, ಅಹಮದಾಬಾದ್ ಸೇರಿದಂತೆ 4 ನಗರಗಳು, ಬಿಹಾರದ ಪಾಟ್ನಾ  ಗಯಾ, ದೆಹಲಿ, ಹರಿಯಾಣ, ಚಂಡೀಗಢ,  ಜಮ್ಮು ಮತ್ತು ಕಾಶ್ಮೀರ (Jammu Kashmir), ಛತ್ತೀಸ್‌ಗಢ, ಆಂಧ್ರ ಪ್ರದೇಶ, ಅಸ್ಸಾಂ, ಹಿಮಾಚಲ ಪ್ರದೇಶ, ಕರ್ನಾಟಕ (Karnataka) ,  ಪಂಜಾಬ್, ತಮಿಳುನಾಡು, ಒಡಿಶಾ, ಮೇಘಾಲಯ, ನಾಗಾಲ್ಯಾಂಡ್, ತೆಲಂಗಾಣ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಸೇರಿದಂತೆ 132 ನಗರಗಳಲ್ಲಿ ಈ ಸಾಧನಗಳನ್ನು ಅಳವಡಿಸಲಾಗುವುದು.

ಇದನ್ನೂ ಓದಿ : Home Loan ಮೇಲೆ ಈ ಬ್ಯಾಂಕ್ ನೀಡುತ್ತಿದೆ ಭಾರೀ ಆಫರ್ , ಈ ಎಲ್ಲಾ ಶುಲ್ಕವೂ ಇರುವುದಿಲ್ಲ

ಯಾವ ಸಂದರ್ಭಗಳಲ್ಲಿ ನೋಟೀಸ್ ನೀಡಲು ರೆಕಾರ್ಡಿಂಗ್ ಅನಿವಾರ್ಯ ? 
1. ಅತಿಯಾದ ವೇಗ (Over speed)
2. ಕಾರನ್ನು ತಪ್ಪಾದ ಸ್ಥಳದಲ್ಲಿ ಪಾರ್ಕ್ ಮಾಡುವುದು 
3. ಚಾಲಕ ಅಥವ ಹಿಂಬದಿ ಸವಾರನಿಂದ  ನಿಯಮಗಳ ಉಲ್ಲಂಘನೆಯಾದಾಗ 
4. ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಧರಿಸದಿರುವುದು
5. ರೆಡ್‌ಲೈಟ್ ಜಂಪ್ ಮಾಡುವುದು 
6. ಚಾಲನೆ ಮಾಡುವಾಗ ಮೊಬೈಲ್ ಬಳಕೆ
7. ಓವರ್ ಲೋಡ್  (Over load)
8. ಸೀಟ್ ಬೆಲ್ಟ್ ಧರಿಸದಿರುವುದು
9. ಗೂಡ್ಸ್ ವಾಹನದಲ್ಲಿ ಪ್ರಯಾಣಿಕರನ್ನು ಒಯ್ಯುವುದು
10.  ದೋಷಯುಕ್ತ ನಂಬರ್ ಪ್ಲೇಟ್ 
11. ಅಧಿಕ ಎತ್ತರದವರೆಗೆ ಸರಕುಗಳನ್ನು ಲೋಡ್ ಮಾಡುವುದು 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News