ನವದೆಹಲಿ: CMV Rules 1989 Amendment - ಗ್ರಾಮೀಣ ಭಾರತದಲ್ಲಿ ಶುದ್ಧ ಇಂಧನವನ್ನು ಉತ್ತೇಜಿಸಲು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು (Ministry of Road Transport and Highways) ಕೇಂದ್ರ ಮೋಟಾರು ವಾಹನ ನಿಯಮಗಳಲ್ಲಿ (Central Motor Vehicles Rules) ತಿದ್ದುಪಡಿ ಮಾಡಿ ಅಧಿಸೂಚನೆ ಜಾರಿಗೊಳಿಸಿದೆ.
ಈ ತಿದ್ದುಪಡಿ ಬಳಿಕ, ಡೀಸೆಲ್ ಮತ್ತು ಪೆಟ್ರೋಲ್ ಚಾಲಿತ ಕೃಷಿ ಟ್ರಾಕ್ಟರುಗಳು, ವಿದ್ಯುತ್ ಟಿಲ್ಲರ್‌ಗಳು ಮತ್ತು ನಿರ್ಮಾಣ ಸಲಕರಣೆಗಳ ವಾಹನಗಳನ್ನು ಸಿಎನ್‌ಜಿ, ಬಯೋ-ಸಿಎನ್‌ಜಿ ಮತ್ತು ಎಲ್‌ಎನ್‌ಜಿ ಇಂಧನ ಎಂಜಿನ್‌ಗಳಾಗಿ ಪರಿವರ್ತಿಸಬಹುದು. "ಕೃಷಿ ಟ್ರಾಕ್ಟರುಗಳು, ವಿದ್ಯುತ್ ಟಿಲ್ಲರ್‌ಗಳು, ನಿರ್ಮಾಣ ಸಲಕರಣೆಗಳ ವಾಹನಗಳು ಮತ್ತು ಕೊಯ್ಲು ಮಾಡುವವರ ಎಂಜಿನ್‌ಗಳನ್ನು ಸಿಎನ್‌ಜಿ, ಬಯೋ-ಸಿಎನ್‌ಜಿ ಮತ್ತು ಎಲ್‌ಎನ್‌ಜಿ ಇಂಧನಗಳೊಂದಿಗೆ ಬದಲಾಯಿಸಲು ಕೇಂದ್ರ ಮೋಟಾರು ವಾಹನ ನಿಯಮಗಳು 1989 ರಲ್ಲಿ ತಿದ್ದುಪಡಿಯನ್ನು ತರಲಾಗಿದೆ " ಎಂದು ಸಚಿವಾಲಯ ಟ್ವೀಟ್ ಮಾಡಿದೆ.
ಇದನ್ನೂ ಓದಿ- ಅರುಣಾಚಲ ಪ್ರದೇಶದಲ್ಲಿ ರಿಕ್ಟರ್ ಮಾಪಕ 5.8 ತೀವ್ರತೆಯ ಭೂಕಂಪನ
MoRT&H notifies an amendment in the Central MV Rules,1989, to provide for conversion by modification or replacement of engines of in-use agriculture tractors, power tillers, construction equipment vehicles and combined harvesters for operation on CNG, Bio-CNG & LNG fuels. pic.twitter.com/h8hT8n8MGY
— MORTHINDIA (@MORTHIndia) May 20, 2021
ಇದನ್ನೂ ಓದಿ- ಭಾರತ ಲಸಿಕೆ ರಪ್ತಿನ ಮೇಲೆ ನಿಷೇಧ ಹೇರಿದ್ದು ಅಭಿವೃದ್ದಿಶೀಲ ರಾಷ್ಟ್ರಗಳಿಗೆ ಸಮಸ್ಯೆಯಾಗಿದೆ-IMF
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಅವರು ಈ ವರ್ಷದ ಫೆಬ್ರವರಿಯಲ್ಲಿ ಭಾರತದ ಮೊದಲ ಡೀಸೆಲ್ ಎಂಜಿನ್‌ನಿಂದ ಸಿಎನ್‌ಜಿಗೆ ಪರಿವರ್ತಿಸಲಾದ ಟ್ರ್ಯಾಕ್ಟರ್ ಅನ್ನು ಪರಿಚಯಿಸಿದ್ದರು ಮತ್ತು ಇದು ಗ್ರಾಮೀಣ ಆರ್ಥಿಕತೆಯನ್ನು ಬದಲಿಸುವುದಲ್ಲದೆ, ಹೆಚ್ಚಿನ ಸಂಖ್ಯೆಯ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ ಎಂದು ಹೇಳಿದ್ದರು.
ಇದನ್ನೂ ಓದಿ-ಅತ್ಯಾಚಾರ ಪ್ರಕರಣ: ತೆಹಲ್ಕಾ ಸಂಸ್ಥಾಪಕ ತರುಣ್ ತೇಜ್ಪಾಲ್ ನಿರ್ದೋಷಿ ಎಂದ ಗೋವಾ ಕೋರ್ಟ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.