Amazonನಲ್ಲಿ Lenovo ಟ್ಯಾಬ್ಲೆಟ್ ಮೇಲೆ ಭಾರೀ ಡಿಸ್ಕೌಂಟ್! ಈ ಕೊಡುಗೆ ಇಂದಿಗೆ ಮಾತ್ರ

ಲೆನೊವೋದ ಈ ಟ್ಯಾಬ್ಲೆಟ್ ಬೆಲೆ 18000 ರೂ., ಆದರೆ ಅಮೆಜಾನ್‌ನಲ್ಲಿ ಖರೀದಿಸಿದ್ದೇ ಆದಲ್ಲಿ ನಿಮಗೆ 5001 ರೂ.ಗಳ ರಿಯಾಯಿತಿ ದೊರೆಯಲಿದೆ. 

Last Updated : Aug 5, 2019, 06:54 PM IST
Amazonನಲ್ಲಿ Lenovo ಟ್ಯಾಬ್ಲೆಟ್ ಮೇಲೆ ಭಾರೀ ಡಿಸ್ಕೌಂಟ್! ಈ ಕೊಡುಗೆ ಇಂದಿಗೆ ಮಾತ್ರ title=

ನವದೆಹಲಿ: ನೀವು ಟ್ಯಾಬ್‌ಗಳನ್ನು ಖರೀದಿಸಲು ತಯಾರಿ ನಡೆಸುತ್ತಿದ್ದರೆ, ಲೆನೊವೊ ಟ್ಯಾಬ್ ವಿ 7 ಟ್ಯಾಬ್ಲೆಟ್ ಮೇಲೆ 5000 ರೂ.ಗಳ ಭಾರೀ ರಿಯಾಯಿತಿ ದೊರೆಯಲಿದೆ. 

ಲೆನೊವೋದ ಈ ಟ್ಯಾಬ್ಲೆಟ್ ಬೆಲೆ 18000 ರೂ., ಆದರೆ ಅಮೆಜಾನ್‌ನಲ್ಲಿ ಖರೀದಿಸಿದ್ದೇ ಆದಲ್ಲಿ ನಿಮಗೆ 5001 ರೂ.ಗಳ ರಿಯಾಯಿತಿ ದೊರೆಯಲಿದೆ. ಹಾಗೇ ಈ ವಿಶೇಷವಾದ ಟ್ಯಾಬ್ಲೆಟ್ ನಿಮಗೆ ಕೇವಲ 12,999 ರೂ.ಗಳಿಗೆ ದೊರೆಯಲಿದೆ. ಈ ಟ್ಯಾಬ್ಲೆಟ್ ಖರೀದಿಸುವಾಗ, ಪೇ-ಆನ್ ವಿತರಣೆ, 10 ದಿನಗಳಲ್ಲಿ ಎಕ್ಸ್ಚೇಂಜ್ ಸೌಲಭ್ಯ ಮತ್ತು 1 ವರ್ಷದ ವಾರೆಂಟಿ ಸಹ ಲಭ್ಯವಿದೆ. ಈ ವಿಶೇಷ ಕೊಡುಗೆ ಇಂದು ರಾತ್ರಿ 12 ಗಂಟೆಯವರೆಗೆ ಮಾತ್ರ.

ಲೆನೊವೊ ಟ್ಯಾಬ್ ವಿ 7 ವಿಶೇಷತೆಗಳು
ಈ ಟ್ಯಾಬ್ಲೆಟ್ 6.9-ಇಂಚಿನ ಪೂರ್ಣ ಎಚ್ಡಿ ಸ್ಕ್ರೀನ್ ಹೊಂದಿದೆ. ಇದರ RAM 3GB ಮತ್ತು ಆಂತರಿಕ ಮೆಮೊರಿ 32GB ಆಗಿದೆ. 13 ಮೆಗಾಪಿಕ್ಸೆಲ್‌ಗಳ ಹಿಂದಿನ ಕ್ಯಾಮೆರಾ ಮತ್ತು 5 ಮೆಗಾಪಿಕ್ಸೆಲ್‌ಗಳ ಫ್ರಂಟ್ ಕ್ಯಾಮೆರಾ ಹೊಂದಿರುವ ಈ ಟ್ಯಾಬ್ಲೆಟ್, ಆಂಡ್ರಾಯ್ಡ್ ಪೈ v9.0 ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 450 ಆಕ್ಟಾ ಕೋರ್ ಪ್ರೊಸೆಸರ್ ಹೊಂದಿದೆ.

ಬ್ಯಾಟರಿ ಸಾಮರ್ಥ್ಯ 5180 mAh 
ಈ ಲೆನೊವೋ ಟ್ಯಾಬ್ಲೆಟ್'ನಲ್ಲಿ ಲಿಥಿಯಂ-ಅಯಾನ್-ಪಾಲಿಮರ್ ಬ್ಯಾಟರಿಯಿದ್ದು, ಒಮ್ಮೆ ಫುಲ್ ಚಾರ್ಜ್ ಮಾಡಿದರೆ 30 ಗಂಟೆಗಳ ಟಾಕ್ ಟೈಮ್ ಅಥವಾ 10 ಗಂಟೆಗಳ ಗೇಮಿಂಗ್ ಸಾಮರ್ಥ್ಯ ಹೊಂದಿದೆ. ಈ ಟ್ಯಾಬ್ ನಲ್ಲಿ ಡ್ಯುಯಲ್ ಫ್ರಂಟ್ ಫೇಸಿಂಗ್ ಸ್ಪೀಕರ್‌ಗಳಿದ್ದು, 7.89 ಮಿಮೀ ದಪ್ಪ ಮತ್ತು 195 ಗ್ರಾಂ. ತೂಕ ಹೊಂದಿದೆ. ಇದಕ್ಕೆ 1 ವರ್ಷ ಮತ್ತು ಟ್ಯಾಬ್ಲೆಟ್  ಪರಿಕರಗಳ ಮೇಲೆ 6 ತಿಂಗಳ ವಾರಂಟಿ ಲಭ್ಯವಿದೆ. 

Trending News