CBSE ವಿದ್ಯಾರ್ಥಿಗಳಿಗೆ ಪ್ರಮುಖ ಸುದ್ದಿ, ಪ್ರಶ್ನೆ ಪತ್ರಿಕೆ ಮಾದರಿಯಲ್ಲಿ ಮಹತ್ವದ ಬದಲಾವಣೆ

ಈ ಬದಲಾವಣೆಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವಂತೆ ಸಿಬಿಎಸ್‌ಇ ಶಾಲೆಗಳನ್ನು ಕೇಳಿದ್ದು ಮಂಡಳಿಯು ಶೀಘ್ರದಲ್ಲೇ ಮಾದರಿ ಪ್ರಶ್ನೆಪತ್ರಿಕೆಯನ್ನು ಸಹ ಬಿಡುಗಡೆ ಮಾಡುತ್ತದೆ ಎಂದು ಹೇಳಲಾಗುತ್ತಿದೆ.   

Written by - Yashaswini V | Last Updated : Apr 24, 2021, 10:14 AM IST
  • ಮುಂದಿನ ಶೈಕ್ಷಣಿಕ ವರ್ಷದಿಂದ ಈ ಬದಲಾವಣೆಗಳನ್ನು ಜಾರಿಗೆ ತರಲಾಗುವುದು
  • ಇದರಿಂದಾಗಿ ವಿದ್ಯಾರ್ಥಿಗಳಲ್ಲಿ ಸೃಜನಶೀಲ ಚಿಂತನೆ ಬೆಳೆಯುತ್ತದೆ ಎನ್ನಲಾಗಿದೆ
  • ಮಂಡಳಿಯ ಈ ನಿರ್ಧಾರದಿಂದ 9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಲಿದೆ
CBSE ವಿದ್ಯಾರ್ಥಿಗಳಿಗೆ ಪ್ರಮುಖ ಸುದ್ದಿ, ಪ್ರಶ್ನೆ ಪತ್ರಿಕೆ ಮಾದರಿಯಲ್ಲಿ ಮಹತ್ವದ ಬದಲಾವಣೆ title=
CBSE new evaluation criteria for class 9 to 12

ನವದೆಹಲಿ: ಕರೋನಾ ಯುಗದಲ್ಲಿ ಮೊದಲೇ ಸರಿಯಾಗಿ ತರಗತಿಗಳು ನಡೆಯದೆ ವಿದ್ಯಾರ್ಥಿಗಳು, ಪೋಷಕರು ಪರಿತಪಿಸುವಂತಾಗಿದೆ. ಈ ಮಧ್ಯೆ ಪ್ರಶ್ನೆ ಪತ್ರಿಕೆ ಮಾದರಿಗೆ ಸಂಬಂಧಿಸಿದಂತೆ ಮಹತ್ವದ ಹೆಜ್ಜೆ ಇಟ್ಟಿರುವ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಸ್ಪರ್ಧಾತ್ಮಕ ಆಧಾರಿತ ಶಿಕ್ಷಣಕ್ಕೆ ಒತ್ತು ನೀಡಲು ನಿರ್ಧರಿಸಿದೆ. ಮುಂದಿನ ಶೈಕ್ಷಣಿಕ ಅಧಿವೇಶನ (2021-22) ಪರೀಕ್ಷೆ ಮತ್ತು ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಮಂಡಳಿಯು ಮಹತ್ವದ ಬದಲಾವಣೆಗಳನ್ನು ಮಾಡಲು ಮುಂದಾಗಿದೆ.

ಹೊಸ ಶಿಕ್ಷಣ ನೀತಿಯನ್ನು ಗಮನದಲ್ಲಿಟ್ಟುಕೊಂಡು, ಒಂಬತ್ತನೇ ತರಗತಿಯಿಂದ ಹನ್ನೆರಡನೇ ತರಗತಿಯ ವಾರ್ಷಿಕ ಮತ್ತು ಬೋರ್ಡ್ ಪರೀಕ್ಷಾ ಪತ್ರಿಕೆಗಳಲ್ಲಿ ಬದಲಾವಣೆಗಳನ್ನು ಮಾಡಲಾಗುತ್ತಿದೆ ಎಂದು ಸಿಬಿಎಸ್‌ಇ (CBSE) ಬೋರ್ಡ್ ಹೇಳಿದೆ. ಈಗ ವಿದ್ಯಾರ್ಥಿಗಳಿಗೆ ಹೆಚ್ಚಿನ ಅರ್ಹತೆ ಆಧಾರಿತ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಅಲ್ಲದೆ, ನಿಜ ಜೀವನಕ್ಕೆ ಹೊಂದಿಕೆಯಾಗುವಂತಹ ಪ್ರಶ್ನೆಗಳಿಗೆ ಆದ್ಯತೆ ನೀಡಲಾಗುವುದು ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ - CBSE VS ICSE: ಯಾವ ಬೋರ್ಡ್ ಅಡಿ ಮಕ್ಕಳ Admission ಮಾಡಿಸುವುದು ಉಚಿತ?

ಈ ಸಂದರ್ಭದಲ್ಲಿ ಯಾವುದೇ ಬದಲಾವಣೆ ಇಲ್ಲ:
ನಮ್ಮ ಸಹಕಾರಿ ವೆಬ್‌ಸೈಟ್ ಡಿಎನ್‌ಎಯಲ್ಲಿ ಪ್ರಕಟವಾದ ಸುದ್ದಿಗಳ ಪ್ರಕಾರ, ಈ ಹಂತವು ವಿದ್ಯಾರ್ಥಿಗಳಲ್ಲಿ ಸೃಜನಶೀಲ ಚಿಂತನೆಯನ್ನು ಬೆಳೆಸುತ್ತದೆ ಎಂದು ಸಿಬಿಎಸ್‌ಇ ಹೇಳಿದೆ. ಮಂಡಳಿಯ ಪ್ರಕಾರ, 11 ಮತ್ತು 12 ನೇ ತರಗತಿಗಳಿಗೆ (CBSE Board Exam 2021) 20 ಪ್ರತಿಶತ ಸಾಮರ್ಥ್ಯ ಆಧಾರಿತ ಪ್ರಶ್ನೆಗಳು ಮತ್ತು 20 ಪ್ರತಿಶತ ವಸ್ತುನಿಷ್ಠ ಪ್ರಕಾರದ ಪ್ರಶ್ನೆಗಳು ಇರುತ್ತವೆ. 60% ರಷ್ಟು ಸಣ್ಣ ಮತ್ತು ದೀರ್ಘ ಉತ್ತರ ಪ್ರಶ್ನೆಗಳಾಗಿರುತ್ತದೆ. ಆದರೆ, ಮೊದಲಿನಂತೆ ಪರೀಕ್ಷೆಯ ಅಂಕಗಳು ಮತ್ತು ಅವಧಿಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಹೇಳಲಾಗಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಮಾದರಿ ಪೇಪರ್ಸ್ :
ಅರ್ಹತೆ ಆಧಾರಿತ ಪ್ರಶ್ನೆಗಳು ಬಹು ಆಯ್ಕೆ ಪ್ರಶ್ನೆಗಳು, ವಿಷಯ ಆಧಾರಿತ ಪ್ರಶ್ನೆಗಳು, ಮೂಲ ಆಧಾರಿತ ಸಂಯೋಜಿತ ಪ್ರಶ್ನೆಗಳು ಅಥವಾ ಇನ್ನಾವುದೇ ರೂಪದಲ್ಲಿರಬಹುದು. ಈ ಬದಲಾವಣೆಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವಂತೆ ಸಿಬಿಎಸ್‌ಇ ಶಾಲೆಗಳನ್ನು ಕೇಳಿದೆ. ಮಂಡಳಿಯು ಶೀಘ್ರದಲ್ಲೇ ಮಾದರಿ ಪ್ರಶ್ನೆ ಪತ್ರಿಕೆಯನ್ನು ಸಹ ಬಿಡುಗಡೆ ಮಾಡುತ್ತದೆ. ಇದರಿಂದಾಗಿ ವಿದ್ಯಾರ್ಥಿಗಳು ಹೊಸ ಬದಲಾವಣೆಗಳು ತಮ್ಮ ಮೇಲೆ ಪರಿಣಾಮ ಬೀರುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು. ಈ ಹಂತವು ವಿದ್ಯಾರ್ಥಿಗಳಲ್ಲಿ ಸೃಜನಶೀಲ ಚಿಂತನೆಯನ್ನು ಬೆಳೆಸುತ್ತದೆ ಎಂದು ಸಿಬಿಎಸ್‌ಇ ಹೇಳುತ್ತದೆ. 

ಇದನ್ನೂ ಓದಿ - CBSE BOARD EXAM 2021: 10ನೇ ತರಗತಿಯ ಪರೀಕ್ಷೆ ರದ್ದು, 12ನೇ ತರಗತಿ ಪರೀಕ್ಷೆಗಳು ಮುಂದೂಡಿಕೆ

9-10 ತರಗತಿಗೆ ಪ್ರಶ್ನೆ ಪತ್ರಿಕೆ ಈ ರೀತಿ ಇರಲಿದೆ:
9-10 ನೇ ತರಗತಿಗೆ ಕನಿಷ್ಠ 30 ಪ್ರತಿಶತ ಅರ್ಹತೆ ಆಧಾರಿತ ಪ್ರಶ್ನೆಗಳು, 20 ಪ್ರತಿಶತ ವಸ್ತುನಿಷ್ಠ ಪ್ರಕಾರ ಮತ್ತು ಉಳಿದ 50 ಪ್ರತಿಶತವು ಸಣ್ಣ ಉತ್ತರ / ದೀರ್ಘ ಉತ್ತರ ಪ್ರಶ್ನೆಗಳು ಎಂದು ಕೇಂದ್ರ ಮಾಧ್ಯಮಿಕ ಶಿಕ್ಷಣ ಮಂಡಳಿ ಹೇಳಿದೆ. ಪ್ರಸ್ತುತ ಗಮನಿಸಬೇಕಾದ ಅಂಶವೆಂದರೆ, 10 ನೇ ತರಗತಿಯ ಪ್ರಶ್ನೆ ಪತ್ರಿಕೆಯಲ್ಲಿ 20 ಪ್ರತಿಶತ ವಸ್ತುನಿಷ್ಠ ಪ್ರಕಾರದ ಪ್ರಶ್ನೆಗಳು, 20 ಪ್ರತಿಶತ ವಿಷಯ ಆಧಾರಿತ, 20 ಪ್ರತಿಶತ ಮೂಲ ಆಧಾರಿತ ಸಂಯೋಜಿತ ಪ್ರಶ್ನೆಗಳು ಮತ್ತು 60 ಪ್ರತಿಶತ ಸಣ್ಣ ಉತ್ತರ / ದೀರ್ಘ ಉತ್ತರ ಪ್ರಕಾರದ ಪ್ರಶ್ನೆಗಳಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News